
ಬಸ್ ಏರೋ ಮೊದ್ಲು...
ಕಂಡಕ್ಟರ್: ಪಾಸ್ ಇದ್ದವರೆಲ್ಲಾ ನೆಕ್ಸ್ಟ್ ಬಸ್‌ಗೆ ಬನ್ನಿ...
ವಿದ್ಯಾರ್ಥಿಗಳು: ಸಾರ್ ಎಕ್ಸಾಂ ಇದೆ ಸಾರ್, ಬೇಗ ಹೋಗ್ಬೇಕು, ಸ್ಪೆಷಲ್ ಕ್ಲಾಸ್ ಇದೆ.
ಕಂಡಕ್ಟರ್; ಹೋ ನಿಮ್ಗೆ ಮಾತ್ರಾನಾ.. ಎಕ್ಸಾಂ ಇರೋದು, ಬೇಗ ಹೋಗ್ಬೇಕಿದ್ರೆ ಬೇರೆ ಬಸ್‌ನಲ್ಲಿ ಹೋಗಿ...
ವಿದ್ಯಾರ್ಥಿಗಳು: ಸಾರ್ ಪಾಸ್ ಇದೆ ಸಾರ್.....
ಕಂಡಕ್ಟರ್: ಅದನ್ನು ಪಾಸ್ ಮಾಡಿಸೋ ಮೊದ್ಲು ಯೋಚ್ನೆ ಮಾಡ್ಬೇಕಿತ್ತು.......
***
ಬಸ್‌ನ ಒಳಗೆ...
ಕಂಡಕ್ಟರ್: ಯಾರ್ರೀ ಅದು... ಸ್ವಲ್ಪ ಮುಂದೆ ಹೋಗಿ, ನಿಮ್ಮ ಬ್ಯಾಗನ್ನೆಲ್ಲಾ.. ಸೀಟ್‌ನಲ್ಲಿ ಕೂತವ್ರತ್ರ ಕೊಡಿ... ವಿದ್ಯಾರ್ಥಿಗಳು: ಅವ್ರ ಕೈನಲ್ಲಿ ಬ್ಯಾಗ್ ಇದೆ ಸಾರ್...
ಕಂಡಕ್ಟರ್: ಹಾಗಾದ್ರೆ ತಲೆ ಮೇಲೆ ಹೊತ್ಕೊಂಡು ನಿಂತ್ಕೊಳ್ಳಿ.
***
ಕಂಡಕ್ಟರ್: ಏಯ್.. ಪಾಸ್ ಇರೋ ಮಕ್ಕಳೆಲ್ಲಾ... ಪ್ರಯಾಣಿಕರಿಗೆ ಸೀಟ್ ಬಿಟ್ ಕೊಡಿ..
ವಿದ್ಯಾರ್ಥಿಗಳು: ಸಾರ್ ನಾವೂ ಪಾಸ್‌ಗೆ ದುಡ್ಡು ಕೊಟ್ಟಿದ್ದೇವೆ...
ಕಂಡಕ್ಟರ್: ಏನಿದ್ರೂ ನಿಮ್ದು ಪಾಸ್ ಅಲ್ವಾ... ಅವ್ರ ಟಿಕೆಟ್ ಮಾಡಿದ್ದಾರೆ. ಸೀಟ್ ಬಿಟ್ ಕೊಡಿ...
***
....ಹೀಗೆ ಬಗೆಬಗೆಯ ರೀತಿಯಲ್ಲಿ ಬಸ್ ಒಳಗೆ-ಹೊರಗೆ ಸಂಕಟ ಅನುಭವಿಸುತ್ತಿದ್ದಾರೆ ಶಾಲಾ ಪ್ರಯಾಣಕ್ಕೆಂದು ಬಸ್ ಪಾಸ್ ಮಾಡಿಸಿಕೊಂಡಿರುವ ಲಕ್ಷಾಂತರ ವಿದ್ಯಾರ್ಥಿಗಳು. ಶಾಲೆಗೆ ತೆರಳುವ ಅನುಕೂಲತೆಗೆಂದು ಸರಕಾರ ನೀಡುತ್ತಿರುವ ಈ ಬಸ್ ಪಾಸ್ ವ್ಯವಸ್ಥೆ ವಿದ್ಯಾರ್ಥಿ ಪ್ರಯಾಣಿಕರಿಗೆ ಅನಾನುಕೂಲತೆಗಳನ್ನು ಸೃಷ್ಟಿಸಿರುವುದು ವಿಪರ್ಯಾಸವೇ ಸರಿ. ರಿಯಾಯಿತಿ ಶುಲ್ಕ ನೀಡಿ ಪಾಸ್ ಪಡೆದುಕೊಂಡಿರುವ ವಿದ್ಯಾರ್ಥಿಗಳ ಪೈಕಿ ಶೇ.65ರಷ್ಟು ಮಂದಿ ಪಾಸ್ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ತಾವು ಅಭ್ಯಸಿಸುವ ಶಾಲಾ-ಕಾಲೇಜುಗಳ ಮೂಲಕ ಪಾಸ್ ಪಡೆಯುವುದು ವಿದ್ಯಾರ್ಥಿಗಳ ಪಾಲಿಗೆ ಸುಲಭದ ಮಾತಾದರೂ, ಆ ಬಳಿಕ ವರ್ಷವಿಡೀ ಶಾಲಾ ಕಾಲೇಜುಗಳಿಗೆ ತೆರಳಲು ಕೆಎಸ್‌ಆರ್‌ಟಿಸಿಯ ನಿಗದಿತ ಬಸ್‌ಗಳಲ್ಲಿ ಸೀಟು ಪಡೆಯುವುದು ಸಾಹಸದ ಪ್ರಕ್ರಿಯೆಯಾಗುತ್ತಿದೆ... ಹೀಗಾಗಿಯೇ ಬೆಳಗ್ಗೆ ಹಾಗೂ ಸಂಜೆಯ ಹೊತ್ತು ಸರಕಾರಿ ಬಸ್‌ಗಳಲ್ಲಿ ಕೆಲವು ವಿದ್ಯಾರ್ಥಿಗಳು ಬಸ್‌ಗಳ ಹೊರಗೆ ನೇತಾಡುತ್ತಲೇ ಪಯಣಿಸುತ್ತಾರೆ.
ಬೆಳಗ್ಗೆ ಹಾಗೂ ಸಂಜೆಯ ಹೊತ್ತಿನಲ್ಲಿ ಸರಕಾರಿ ಬಸ್‌ಗಳು ಮಕ್ಕಳಿಂದ ತುಂಬಿ ತುಳುಕುತ್ತಿರುತ್ತದೆ. ಈ ಅಂಕಿ ಅಂಶವನ್ನೊಮ್ಮೆ ಗಮನಿಸಿ, 3.72 ಲಕ್ಷ ವಿದ್ಯಾರ್ಥಿಗಳಿಗೆ ಲಭ್ಯವಿರುವ ಬಸ್‌ಗಳು ಇಲಾಖಾ ಮಾಹಿತಿಯಂತೆ 7000, ಅಂದರೆ ಬೆಳಗ್ಗೆ ಹಾಗೂ ಸಂಜೆಯ ಹೊತ್ತು ಇಲಾಖೆಯ ಎಲ್ಲ (ಐರಾವತದಂತಹಾ ಬಸ್‌ಗಳನ್ನೂ ಸೇರಿಸಿ) ಬಸ್‌ಗಳನ್ನು ಮಕ್ಕಳಿಗಾಗಿ ಒದಗಿಸಿದರೂ ಪ್ರತಿ ಬಸ್‌ನಲ್ಲಿ 50 ಮಕ್ಕಳು ಕುಳಿತು ಕೊಳ್ಳಬೇಕಾಗುತ್ತದೆ, ಆದರೆ ಅದು ಕೇವಲ ಲೆಕ್ಕಾಚಾರ. ಯಾಕೆಂದರೆ ಸದ್ಯದ ಮಟ್ಟಿಗೆ ಸಂಸ್ಥೆಯ ಸ್ಥಳೀಯ ಬಸ್‌ಗಳಲ್ಲಿ (ಶಟ್ಲ್ ಬಸ್) ಮಾತ್ರ ವಿದ್ಯಾರ್ಥಿ ಪಾಸುಗಳಿಗೆ ಅವಕಾಶ ನೀಡಲಾಗುತ್ತದೆ.
ಎಕ್ಸ್‌ಪ್ರೆಸ್ ಬಸ್ಸುಗಳಲ್ಲಿ ಬಿಡಿ, ಲಿಮಿಟೆಡ್ ಬಸ್ಸುಗಳಲ್ಲಿಯೂ ಕೂಡ ಸ್ಟೂಡೆಂಟ್ ಪಾಸ್ ನಾಟ್ ಅಲೌಡ್, ವಿದ್ಯಾರ್ಥಿ ಪಾಸುಗಳಿಗೆ ಅವಕಾಶವಿಲ್ಲ ಎಂಬ ಬರಹಗಳನ್ನು ಹಾಕಲಾಗಿದೆ. 120 ಕಿ.ಮೀಗಿಂತ ಹೆಚ್ಚು ದೂರದ ಮಾರ್ಗದಲ್ಲಿ ಸಂಚರಿಸುವ ಬಸ್ಸುಗಳಲ್ಲಿ ಮಕ್ಕಳನ್ನು ಕರೆದೊಯ್ದರೆ, ಮಕ್ಕಳು ಇಳಿದ ಬಳಿಕ ಖಾಲಿ ಬಸ್ ಸಂಚರಿಸಬೇಕಾಗಬಹುದು. ಹಾಗಾಗಿ ಮಕ್ಕಳಿಗೆ ಶಟ್ಲ್ ಬಸ್ಸುಗಳಲ್ಲಿ ಮಾತ್ರ ಅವಕಾಶ ಕೊಡುತ್ತೇವೆ ಎನ್ನುತ್ತಾರೆ ಗದಗ ಮೂಲದ ಬಸ್ ನಿರ್ವಾಹಕರೊಬ್ಬರು.
ಹೀಗಾಗಿ ಎಲ್ಲಾ ಬಗೆಯ ಲಕ್ಸುರಿ, ಸುಖಾಸೀನ, ಎಕ್ಸ್‌ಪ್ರೆಸ್, ಲಿಮಿಟೆಡ್ ಬಸ್ಸುಗಳನ್ನು ಹೊರತು ಪಡಿಸಿ ವಿದ್ಯಾರ್ಥಿಗಳ ಉಪಯೋಗಕ್ಕೆ ಸಿಗುವುದು ಅಂದಾಜು 3500 ಬಸ್ಸುಗಳು ಮಾತ್ರ. ಈ ಲೆಕ್ಕಾಚಾರದ ಪ್ರಕಾರ ಪ್ರತಿ ಬಸ್ಸಿನಲ್ಲಿ 100 ವಿದ್ಯಾರ್ಥಿಗಳು ಪ್ರಯಾಣಿಸಬೇಕಾಗುತ್ತದೆ. ಪೀಕ್ ಅವರ್ಸ್ ಎಂದು ಕರೆಯಲ್ಪಡುವ ಬೆಳಗ್ಗೆ ಹಾಗೂ ಸಂಜೆಯ ಹೊತ್ತು ಬಸ್ಸುಗಳಲ್ಲಿ ಪ್ರಯಾಣಿಸುವ ಇತರೆ ಪ್ರಯಾಣಿಕರ ಜೊತೆ ಈ ಭಾರೀ ಸಂಖ್ಯೆಯ ವಿದ್ಯಾರ್ಥಿಗಳ ಪಯಣ ಸಾಹಸದ ಕಾರ್ಯವೇ ಸರಿ.
ರವಿವಾರ ನಿರ್ಬಂಧ..?
ಕೆಲ ನಿರ್ವಾಹಕರ ನಿಯಮದಂತೆ ಪಾಸ್ ಪಡೆದ ವಿದ್ಯಾರ್ಥಿಗಳು ರವಿವಾರ ಸರಕಾರಿ ಬಸ್‌ಗಳಲ್ಲಿ ಪಾಸ್ ನೆರವಿನಿಂದ ಪ್ರಯಾಣಿಸುವಂತಿಲ್ಲ. ರವಿವಾರ ಪ್ರತ್ಯೇಕ ಟಿಕೆಟ್ ಪಡೆದೇ ಪ್ರಯಾಣಿಸಬೇಕಾಗುತ್ತದೆ. ರವಿವಾರ ವಿಶೇಷ ತರಗತಿಗಳಿದ್ದರೆ, ಶಾಲಾ ಚಟುವಟಿಗೆಗಳು ಇದ್ದರೆ ಮಕ್ಕಳಿಗೆ ಬಸ್ ಪಾಸ್ ಉಪಯೋಗಕ್ಕೆ ಬಂದೀತು.ಸಂಸ್ಥೆಯ ಅಧಿಕಾರಿಗಳು ಹೇಳುವಂತೆ ಬಸ್ ಪಾಸ್ ಹೊಂದಿರುವ ವಿದ್ಯಾರ್ಥಿಗಳು ನಿಗದಿತ ಮಾರ್ಗದಲ್ಲಿ 10ತಿಂಗಳ ಅವಧಿಯಲ್ಲಿ ಯಾವತ್ತೂ ಸಂಚರಿಸಬಹುದು. ಅದಕ್ಕೆ ವಾರ-ರಜಾದಿನಗಳ ನಿರ್ಬಂಧ ಇಲ್ಲವಂತೆ. ಹಾಗಿದ್ದರೂ ಈ ನಿರ್ವಾಹಕರು ತಕರಾರು ತೆಗೆಯುತ್ತಾರೆ.
ಈ ಎಲ್ಲ ಗೊಂದಲಗಳ ನಡುವೆ ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ಕೆಲ ನಿರ್ವಾಹಕರು ಪಶುಗಳ ರೀತಿಯಲ್ಲಿ ಪರಿಗಣಿಸುವ ಹಲವಾರು ಘಟನೆಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತದೆ.ಇದೂ ಕೂಡ ಒಂದು ಬಗೆಯಲ್ಲಿ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದಂತೆ. ಶಾಲಾ ಕಾಲೇಜುಗಳಲ್ಲಿ, ಮನೆಗಳಲ್ಲಿ ಇಂದು ಮಿತಿಮೀರುತ್ತಿರುವ ಶೈಕ್ಷಣಿಕ ಒತ್ತಡಗಳ ಜೊತೆಗ ಬಸ್ ಪ್ರಯಾಣದ ಅವಧಿಯಲ್ಲೂ ನಡೆಯುವ ಕೆಲ ಘಟನೆಗಳು ಮಕ್ಕಳ ಮಾನಸಿಕ ಸ್ಥೈರ್ಯವನ್ನೇ ಕುಗ್ಗಿಸುತ್ತದೆ. ಪಾಸ್ ಹೊಂದಿದ ವಿದ್ಯಾರ್ಥಿಗಳು ತಮಗೆ ಹೊರೆ ಎಂಬಂಥ ರೀತಿಯಲ್ಲಿ ವರ್ತಿಸುವ ಕೆಎಸ್‌ಆರ್‌ಟಿಸಿ ಸಿಬ್ಬಂದಿ, ತಮ್ಮದೇ ಕೆಲಸದ ಒತ್ತಡದ ನಡುವೆ ಅನಪೇಕ್ಷಿತವಾದ ವರ್ತನೆ ತೋರುವುದನ್ನು ನಿಲ್ಲಿಸಬೇಕು. ವಿದ್ಯಾರ್ಥಿಗಳ ನೆರವಿಗಾಗಿ ಸಂಸ್ಥೆಯ ಬಸ್ ಪಾಸ್ ಯೋಜನೆ ವಿದ್ಯಾರ್ಥಿಗಳಿಗೆ ಪ್ರಿಯವಾಗುವಂತೆ ಇಲಾಖಾ ಸಿಬ್ಬಂದಿಗಳು ಕಾಳಜಿ ವಹಿಸಬೇಕು. ಹೆಚ್ಚುವರಿ ಬಸ್ ಗಳನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳ ಬೇಡಿಕೆಯನ್ನು ಈಡೇರಿಸಬೇಕು.
ಅಡ್ಜೆಸ್ಟ್ ಮಾಡ್ತೀವಿ...: ಪುತ್ತೂರಿನ ಸರಕಾರಿ ಕಾಲೇಜಿನ ವಿದ್ಯಾರ್ಥಿ ಯೊಬ್ಬ ಹೇಳುವಂತೆ, ತಾನು ಬಸ್ ಪಾಸ್‌ನ ಮೂಲಕ ಪ್ರತಿದಿನ 6 ಕಿ.ಮೀ ದೂರವಷ್ಟೇ ಪ್ರಯಾಣಿಸುವುದು. ರಿಕ್ಷಾಗೆ ಹಣಕೊಟ್ಟು ಅಸಲಾಗದು, ಬಸ್‌ನಲ್ಲಿ ಸೀಟೂ ಸಿಗುವುದಿಲ್ಲ. ಆದರೂ ಬಸ್ ಪಾಸ್‌ನಿಂದ ಲಾಭ ಇದೆ ಎನ್ನುತ್ತಾನೆ.
***
ನರಕ ಯಾತನೆ...: ಮಂಗಳೂರು ಕಾಲೇಜು ವಿದ್ಯಾರ್ಥಿನಿಯೋರ್ವಳು ಪ್ರತಿನಿತ್ಯ ಬಿ.ಸಿ.ರೋಡಿನಿಂದ ಪ್ರಯಾಣಿಸುವವಳು, ಅವಳ ಅನುಭವವೇ ಬೇರೆ, ‘ನಮಗೆ ಪಾಸ್ ಇಲ್ಲದೆ ಬೇರೆ ವಿಧಿ ಇಲ್ಲ. ಆದರೆ ತುಂಬಿ ತುಳುಕುವ ಬಸ್‌ನಲ್ಲಿ ನನ್ನಂತಹ ಹುಡುಗಿಯರು ಪ್ರಯಾಣಿಸುವುದು ಒಂದು ನರಕಯಾತನೆ, ಕುಳಿತು ಕೊಳ್ಳಲು ಸೀಟು ಬಿಡಿ. ಕೆಲವೊಮ್ಮೆ ಕಾಲಿಡಲೂ ಜಾಗವಿರುವುದಿಲ್ಲ. ನಮ್ಮ ಗೋಳು ಯಾರಿಗೂ ಕೇಳ್ತಾ ಇಲ್ಲ.
***
85 ಶೇಕಡಾ ರಿಯಾಯಿತಿ..:ಹಾಗೆ ನೋಡಿದರೆ ಕೆಎಸ್‌ಆರ್‌ಟಿಸಿ ಸಂಸ್ಥೆಯ ಈ ಬಸ್ ಪಾಸ್ ಯೋಜನೆ ಭಾರೀ ದೊಡ್ಡ ವರದಾನವೇ ಹೌದು, ವಿದ್ಯಾರ್ಥಿಗಳಿಗೆ ಬಸ್ ಪಾಸ್ ಯೋಜನೆಯಲ್ಲಿ ನಿಗದಿತ ಸ್ಥಳಗಳಿಗೆ ಸುಮಾರು 50 ಕಿ.ಮೀ ವ್ಯಾಪ್ತಿಯೊಳಗೆ 10 ತಿಂಗಳ ಕಾಲ ಸಂಚರಿಸಬಹುದು. ಈ ಬಸ್ ಪಾಸ್‌ಗಾಗಿ ಸಂಸ್ಥೆ ಶೇ.15 ರಷ್ಟು ಮಾತ್ರ ಶುಲ್ಕ ವಿಧಿಸಿ ಶೇ.85 ರಷ್ಟು ರಿಯಾಯಿತಿ ನೀಡುತ್ತದೆ. ಈ ಮಹತ್ವದ ಯೋಜನೆಯಿಂದ ಅದೆಷ್ಟೋ ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಆಸಕ್ತಿ ಉಳಿಸಿಕೊಳ್ಳುವಂತಾಗಿದೆ. ಆದರೂ ಅಲ್ಲಲ್ಲಿ ನಡೆಯುವ ಕೆಲ ಘಟನೆಗಳು ಈ ಬಸ್ ಪಾಸ್ ಯೋಜನೆಯ ಬಗ್ಗೆ ಮಕ್ಕಳಲ್ಲಿ ಜಿಗುಪ್ಸೆ ಹುಟ್ಟಿಸುವಂತೆ ಮಾಡುತ್ತದೆ. ರಾಜ್ಯದಲ್ಲಿ 3.72 ಲಕ್ಷ ವಿದ್ಯಾರ್ಥಿಗಳಿಗೆ 7 ಸಾವಿರ ಬಸ್..?
ಕೆಎಸ್‌ಆರ್‌ಟಿಸಿ ಸಂಸ್ಥೆಯ ಹಿರಿಯ ಅಧಿಕಾರಿಗಳು ತಿಳಿಸುವಂತೆ ರಾಜ್ಯ ವ್ಯಾಪ್ತಿಯಲ್ಲಿ ಕಳೆದ 2010-11 ಸಾಲಿನಲ್ಲಿ 3.72 ಲಕ್ಷ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸಿದೆ.ಆದರೆ ಈ ಬಾರಿ ಸಂಖ್ಯೆಯ ಕೆಎಸ್‌ಆರ್‌ಟಿಸಿ ಬಸ್ ಪಾಸ್ ಫಲಾನುಭವಿಗಳಿಗೆ ಮೀಸಲಿರುವ ಬಸ್‌ಗಳ ಸಂಖ್ಯೆ ಕೇವಲ 7 ಸಾವಿರ..! ಈ ಏಳು ಸಾವಿರ ಬಸ್‌ಗಳ ಪೈಕಿ ಪಾಸ್ ಪಡೆದ ವಿದ್ಯಾರ್ಥಿಗಳ ಉಪಯೋಗಕ್ಕೆ ಸಿಗುವ ಬಸ್‌ಗಳ ಸಂಖ್ಯೆ ಸುಮಾರು 3,500 ಸಾವಿರ ಮಾತ್ರ. ಸಂಸ್ಥೆಯ ಯಾವುದೇ ಬಸ್‌ಗಳಲ್ಲಿ ಪಾಸ್ ಪಡೆದ ವಿದ್ಯಾರ್ಥಿಗಳು ಸಂಚರಿಸಬಹುದು ಎಂದು ಹೇಳಲಾಗುತ್ತಿವೆಯಾದರೂ, ಕೆಲವು ನಿರ್ವಾಹಕ- ಚಾಲಕರು ತಾವು ಕಾಯನಿರ್ವಹಿಸುವ ಬಸ್‌ಗಳಲ್ಲಿ ತಮ್ಮದೇ ಆದ ನಿಯಮವನ್ನು ಜಾರಿಗೊಳಿಸುತ್ತಿರುವುದು ಈ ರೀತಿಯ ಗೊಂದಲಗಳಿಗೆ ಕಾರಣವಾಗಿದೆ.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...