
ಕಳೆದ ಏಳುದಿನಗಳಿಂದ ವೇಣೂರಿನಲ್ಲಿ ನಡೆಯುತ್ತಿರುವ ಮಸ್ತಕಾಭಿಷೇಕಕ್ಕೆ ಆಗಮಿಸುವ ಜನಸ್ತೋಮಕ್ಕೆ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು ಹೆಚ್ಚು ಆಕರ್ಷಣೆಯ ಕೇಂದ್ರವಾಗಿದೆ. ವಿವಿಧ ಸಂಘಸಂಸ್ಥೆಗಳು, ಸ್ವಸಹಾಯ ಗುಂಪುಗಳು ಹಾಗೂ ಶಂಗಾರ ಸಾಮಗ್ರಿಗಳು, ಸೀರೆ, ಬಟ್ಟೆ ಮಳಿಗೆಗಳು, ಮಕ್ಕಳ ಆಟಿಕೆಗಳು ಮಹಿಳೆಯರು ಮತ್ತು ಮಕ್ಕಳಿಗೆ ಪ್ರಿಯವಾದರೆ, ವಾಣಿಜ್ಯೋದ್ಯಮ, ಕೈಗಾರಿಗೋದ್ಯಮದ ಕಂಪೆನಿಗಳ ಉತ್ಪನ್ನಗಳು, ಗೃಹಬಳಕೆ, ಕಷಿ ಉತ್ಪನ್ನಗಳ ಮಾರಾಟ ಮಳಿಗೆಗಳು ಪುರುಷರನ್ನು ಆಕರ್ಷಿಸುತ್ತಿದೆ. ಒಟ್ಟಿನಲ್ಲಿ ದಿನಬಳಕೆಯ ವಸ್ತುಗಳು, ಸಿದ್ಧ ಉಡುಪುಗಳು, ಪುಸ್ತಕ ಮಳಿಗೆಗಳು ಮುಂತಾದವುಗಳೊಂದಿಗೆ ವಸ್ತು ಪ್ರದರ್ಶನದ 76 ಮಳಿಗೆಗಳು ಮಸ್ತಕಾಭಿಷೇಕಕ್ಕೆ ವಿಶೇಷ ಕಳೆ ಒದಗಿಸಿದೆ.
***
ಗಮನ ಸೆಳೆದ ಅರಣ್ಯ ಇಲಾಖೆ: ವಸ್ತು ಪ್ರದರ್ಶನದ ಮಳಿಗೆಗಳ ಸನಿಹದಲ್ಲಿಯೇ ಅರಣ್ಯ ಇಲಾಖೆಯ ವತಿಯಿಂದ ನಿರ್ಮಿಸಲಾಗಿರುವ ‘ಅರಣ್ಯ’ ಹೆಚ್ಚು ಜನಾಕರ್ಷಣೆ ಪಡೆದಿದ್ದು, ಅರಣ್ಯ ಇಲಾಖೆಯ ಮಾಹಿತಿ ಹಾಗೂ ಜಾಗೃತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.ಗಣಿಗಾರಿಕೆ ಸಲ್ಲದು ಎನ್ನುವುದನ್ನು ಬಿಂಬಿಸುವ ಜೆಸಿಬಿ ಯಂತ್ರಗಳ ಭೂ ಅಗೆತದ ದೃಶ್ಯಾವಳಿಗಳು, ಭೂ ಅಗೆತಕ್ಕೆ ಒಳಗಾಗದ ಪ್ರದೇಶದಲ್ಲಿ ಹಚ್ಛ ಹಸಿರಿನ ಪ್ರಕೃತಿ ಹಾಗೂ ಸುಂದರ ಮನೆಗಳ ದೃಶ್ಯಗಳು, ಪ್ರಕತಿಯೇ ದೇವರು, ಅರಣ್ಯ ನಗಣ್ಯ ಮಾಡಬೇಡಿ, ಸಸ್ಯ ಶ್ಯಾಮಲಂ-ವಂದೇ ಮಾತರಂ, ಮೊದಲಾದ ಘೋಷಣೆಗಳೊಂದಿಗೆ ಜಾಗೃತಿಯನ್ನು ಮೂಡಿಸಿದರೆ, ಇಲಾಖೆಯ ಮಾಹಿತಿಯನ್ನು ಒದಗಿಸುವ ವಿವಿಧ ಯೋಜನೆಗಳ ಸ್ತಬ್ಧಚಿತ್ರಗಳು, ಕಾಡಿನೊಳಗೆ ಕಾಣುವ ಗುಹೆ, ಗುಹೆಯೊಳಗೆ ಹಕ್ಕಿಗಳ ಚಿಲಿಪಿಲಿ ನಿನಾದ ಮೊದಲಾದವುಗಳು ವಿಶಿಷ್ಟ ಅನುಭವ ನೀಡುತ್ತಿವೆ.ಇದನ್ನು ನಿರ್ಮಿಸಲು ಇಲಾಖೆಗೆ ಸುಮಾರು 2ರಿಂದ 3ಲಕ್ಷ ರೂ. ತಗುಲಿವೆ ಎಂದು ಕಾರ್ಯ ನಿರ್ವಹಿಸುತ್ತಿರುವ ಗಾರ್ಡ್‌ಗಳು ತಿಳಿಸಿದ್ದಾರೆ.
***
ಲಾವಂಚದ ಅದ್ಭುತ ಪ್ರಪಂಚ...
ಲಾವಂಚದ ಬೇರಿನಿಂದ ತಯಾರಿಸಿದ ಕರಕುಶಲ ವಸ್ತುಗಳ ಮಳಿಗೆ ವಿಶಿಷ್ಟ ಪರಿಮಳ ಸೂಸುತ್ತಿದೆ. ಔಷಧೀಯ ಗುಣ ಗಳಿರುವ ಲಾವಂಚದ ಕರಕುಶಲ ವಸ್ತುಗಳಿಗೆ ಉತ್ತಮ ಬೇಡಿಕೆ ಬರುತ್ತಿದೆ. ಇವುಗಳ ಬಳಕೆಯು ಪರಿಸರಕ್ಕೆ ಹಾನಿಯಾಗುವುದಿಲ್ಲ, ಇದೊಂದು ಪರಿಸರ ಸ್ನೇಹಿ ವಸ್ತುವಾಗಿದ್ದು, ಎಲ್ಲರ ಮೆಚ್ಚುಗೆ ಗಳಿಸಿದೆ.
ಲಾವಂಚದ ಬೇರಿನಿಂದ ತಯಾರಿಸಲ್ಪಟ್ಟ ಆಕರ್ಷಕ ಬ್ಯಾಗ್‌ಗಳು, ಮಹಿಳೆಯರ ಮೆಚ್ಚಿನ ವ್ಯಾನಿಟಿ ಚೀಲಗಳು, ಚಾಪೆ, ದಿಂಬು, ಹಾಸಿಗೆ, ಕುರ್ಚಿ ಹಾಸಿಗೆ, ಪರ್ಸುಗಳು, ಕ್ಲಿಪ್‌ಗಳು, ಅಭರಣ ಪೆಟ್ಟಿಗೆ, ಕೀ ಚೈನ್‌ಗಳು, ಚಪ್ಪಲ್‌ಗಳು, ಪೆನ್‌ಸ್ಟ್ಯಾಂಡ್, ದೇವರ ಆಕೃತಿಗಳು, ಆಟಿಕೆಗಳು, ಹಾರಗಳು, ವಿವಿಧ ಬಗೆಯ ಉಡುಗೊರೆಯ ವಸ್ತುಗಳ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ. ಲಾವಂಚದ ಉತ್ಪನ್ನಗಳ ಮಾರಾಟಕ್ಕೆ ಮಹಾ ಮಸ್ತಕಾಭಿಷೇಕದಲ್ಲಿ ಒಳ್ಳೆಯ ಸ್ಪಂದನೆ ದೊರೆತಿದೆ ಎನ್ನುತ್ತಾರೆ ಭಟ್ಕಳ ಮೂಲದ ಲಾವಂಚ ಕೈಗಾರಿಕಾ ಘಟಕ ಉಶೀರಾ ಇಂಡಸ್ಟ್ರೀಸ್ ಮಳಿಗೆಯ ಮಾಲಕರು.
ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...
Click here to post your views ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...
ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...