mail-img print-img

ಕ್ಲೀನ್ ಸ್ವೀಪ್ ಹಾದಿಯಲ್ಲಿ ಆಸ್ಟ್ರೇಲಿಯ

ಶನಿವಾರ - ಜನವರಿ -28-2012

  • ಎರಡನೆ ಇನಿಂಗ್ಸ್‌ನಲ್ಲೂ ಭಾರತದ ಕಳಪೆ ಬ್ಯಾಟಿಂಗ್
  • ಸೆಹ್ವಾಗ್ ಅರ್ಧಶತಕ

ಅಡಿಲೇಡ್, ಜ.27: ವೈಟ್ ವಾಶ್, ಕ್ಲೀನ್ ಸ್ವೀಪ್, ಶೂಟೌಟ್ ಏನು ಬೇಕಾದರೂ ಹೇಳಿ ಆಸ್ಟ್ರೇಲಿಯ ಇಲ್ಲಿ ನಡೆಯುತ್ತಿರುವ ಭಾರತ ವಿರುದ್ಧ ನಾಲ್ಕನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಗೆಲುವಿನ ಹಾದಿಯಲ್ಲಿದೆ.

ಪಂದ್ಯದ ನಾಲ್ಕನೆ ದಿನವಾಗಿರುವ ಇಂದು ಆಸ್ಟ್ರೇಲಿಯ ವಿರುದ್ಧ ಗೆಲುವಿಗೆ ಎರಡನೆ ಇನಿಂಗ್ಸ್‌ನಲ್ಲಿ 500 ರನ್‌ಗಳ ಸವಾಲನ್ನು ಪಡೆದ ಭಾರತ 56 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 166 ರನ್ ಸಂಪಾದಿಸಿ ಸೋಲಿನ ಸುಳಿಯಲ್ಲಿದೆ.
ಭಾರತಕ್ಕೆ ಗೆಲುವಿಗೆ ಇನ್ನೂ 334 ರನ್‌ಗಳ ಆವಶ್ಯಕತೆ ಇದೆ. ಟೀಮ್ ಇಂಡಿಯಾಕ್ಕೆ ಇದು ದೊಡ್ಡ ಸವಾಲು ಅಲ್ಲ. ಆದರೆ ಈಗಿನ ಪರಿಸ್ಥಿತಿಯಲ್ಲಿ ತಂಡ ಈ ಗುರಿಯನ್ನು ತಲುಪುವುದು ಕಷ್ಟ ಸಾಧ್ಯ.

ಔಟಾಗದೆ 2 ರನ್ ಗಳಿಸಿರುವ ಇಶಾಂತ್ ಶರ್ಮ ಮತ್ತು ಇನ್ನೂ ಖಾತೆ ತೆರೆಯದಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಆಟವನ್ನು ಅಂತಿಮ ದಿನಕ್ಕೆ ಕಾಯ್ದಿರಿಸಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿ 272ಕ್ಕೆ ಆಲೌಟಾದ ಭಾರತ ಎರಡನೆ ಇನಿಂಗ್ಸ್‌ನಲ್ಲೂ ಕಳಪೆ ಫಾರ್ಮ್‌ನ್ನು ಮುಂದುವರಿಸಿತು. ಗೌತಮ್ ಗಂಭೀರ್ 3 ರನ್ ಗಳಿಸಿ ಔಟಾದರು. ಬಳಿಕ ಎರಡನೆ ವಿಕೆಟ್‌ಗೆ ಹಂಗಾಮಿ ನಾಯಕ ವೀರೇಂದ್ರ ಸೆಹ್ವಾಗ್ ಮತ್ತು ಗೋಡೆ ಖ್ಯಾತಿಯ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ 66 ರನ್‌ಗಳ ಕೊಡುಗೆ ನೀಡಿದರು.

ಸೆಹ್ವಾಗ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಅರ್ಧಶತಕದ ಕೊಡುಗೆ ನೀಡಿದರು. 82 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ಸೆಹ್ವಾಗ್ 53 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಲ್ಲಿ 62 ರನ್ ಗಳಿಸಿ ನಥಾನ್ ಲಿನ್‌ಗೆ ವಿಕೆಟ್ ಒಪ್ಪಿಸಿದರು.

ಸೆಹ್ವಾಗ್‌ನ್ನು ಹೊರತುಪಡಿಸಿದರೆ ವಿವಿಎಸ್ ಲಕ್ಷ್ಮಣ್ (35) ದೊಡ್ಡ ಕೊಡುಗೆ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ವಿರಾಟ್ ಕೊಹಿ ್ಲ22 ರನ್ ಗಳಿಸಿ ರನೌಟಾದರು. ಆದರೆ ಐದನೆ ವಿಕೆಟ್‌ಗೆ ಲಕ್ಷ್ಮಣ್ ಜತೆ ತಂಡದ ಖಾತೆಗೆ 56 ರನ್‌ಗಳನ್ನು ಜಮೆ ಮಾಡಿದರು.

ದ್ರಾವಿಡ್ (25), ಸಚಿನ್ ತೆಂಡುಲ್ಕರ್(13) ವಿಫಲರಾದರು. ಇದರೊಂದಿಗೆ ಸಚಿನ್ ತೆಂಡುಲ್ಕರ್‌ಗೆ ಆಸ್ಟ್ರೇಲಿಯ ಟೆಸ್ಟ್ ಸರಣಿಯಲ್ಲೂ ನೂರನೆ ಅಂತಾರಾಷ್ಟ್ರೀಯ ಶತಕ ಸಿಡಿಸಲು ಸಾಧ್ಯವಾಗಲಿಲ್ಲ. ನಥಾನ್ ಲಿನ್ ಅವರು ಸಚಿನ್, ಲಕ್ಷ್ಮಣ್ ಮತ್ತು ಸೆಹ್ವಾಗ್‌ರ ಮಹತ್ವದ ವಿಕೆಟ್‌ನ್ನು ತನ್ನ ಖಾತೆಗೆ ಸೇರಿಸಿಕೊಂಡರು. ಸಚಿನ್ ವಿಕೆಟ್ ಪಡೆಯುವ ಕನಸನ್ನು ಲಿನ್ ನನಸಾಗಿಸಿದರು. ರ್ಯಾನ್ ಹ್ಯಾರೀಸ್ 2 ವಿಕೆಟ್ ಪಡೆದರು.

ಆಸ್ಟ್ರೇಲಿಯ 167/5: ಮೊದಲ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತದ ಸ್ಕೋರ್‌ನ್ನು ಕಲೆ ಹಾಕಿದ್ದ ಆಸ್ಟ್ರೇಲಿಯ ಎರಡನೆ ಇನಿಂಗ್ಸ್‌ನಲ್ಲಿ ಮಾಜಿ ನಾಯಕ ರಿಕಿ ಪಾಂಟಿಂಗ್ ಅರ್ಧಶತಕ (ಔಟಾಗದೆ 60)ದ ನೆರವಿನಲ್ಲಿ 46 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 167 ರನ್ ಮಾಡಿ ಡಿಕ್ಲೇರ್ ಮಾಡಿಕೊಂಡಿತು.
ಭಾರತದ ಬೌಲರ್‌ಗಳು ಸಂಘಟಿತ ದಾಳಿ ನಡೆಸಿ ಆಸ್ಟ್ರೇಲಿಯ ದೊಡ್ಡ ಮೊತ್ತದ ಸ್ಕೋರ್‌ನ್ನು ದಾಖಲಿಸದಂತೆ ತಡೆ ನಿರ್ಮಿಸಿದರು. ಮೂರನೆ ದಿನದಾಟದ ಅಂತ್ಯಕ್ಕೆ 14 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿದ್ದ ಆಸ್ಟ್ರೇಲಿಯ ಈ ಮೊತ್ತಕ್ಕೆ 32 ಓವರ್‌ಗಳಲ್ಲಿ 117ರನ್‌ಗಳನ್ನು ಸೇರಿಸಿತು.

ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕದ ನೆರವು ನೀಡಿದ್ದ ನಾಯಕ ಮೈಕಲ್ ಕ್ಲಾರ್ಕ್ ಮತ್ತು ಮಾಜಿ ನಾಯಕ ರಿಕಿ ಪಾಂಟಿಂಗ್ ಇನ್ನೊಂದು ಸೊಗಸಾದ ಇನಿಂಗ್ಸ್ ಕಟ್ಟುವ ಕನಸಿನೊಂದಿಗೆ ಬ್ಯಾಟಿಂಗ್‌ನ್ನು ನಾಲ್ಕನೆ ದಿನ ಮುಂದುವರಿಸಿದರು. ನಾಲ್ಕನೆ ವಿಕೆಟ್‌ಗೆ 71 ರನ್‌ಗಳ ಜತೆಯಾಟ ನೀಡಿದರು. ತಂಡದ ಸ್ಕೋರ್ 111 ಆಗಿದ್ದಾಗ ನಾಯಕ ಕ್ಲಾರ್ಕ್(37) ಅವರು ಯಾದವ್ ಎಸೆತಕ್ಕೆ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಗೆ ಕ್ಯಾಚಿತ್ತರು.

ಇದರೊಂದಿಗೆ ಕೊನೆಯ ಬಾರಿಗೆ ಸರಣಿಯಲ್ಲಿ ಸೊಗಸಾದ ಇನಿಂಗ್ಸ್ ಕಟ್ಟುವ ಇವರ ಪ್ರಯತ್ನ ಫಲಿಸಲಿಲ್ಲ. ಮೈಕ್ ಹಸ್ಸಿ 15 ರನ್ ಗಳಿಸಿ ಔಟಾದರು. ಅಂತಿಮವಾಗಿ ರಿಕಿ ಪಾಂಟಿಂಗ್ ಔಟಾಗದೆ 60(96 ಎಸೆತ, 5 ಬೌಂಡರಿ) ಮತ್ತು ವಿಕೆಟ್ ಕೀಪರ್ ಹಡಿನ್ ಔಟಾಗದೆ 11(26 ಎಸೆತ, 2 ಬೌಂಡರಿ) ರನ್ ಗಳಿಸಿದ್ದಾಗ ನಾಯಕ ಮೈಕಲ್ ಕ್ಲಾರ್ಕ್ ಇನಿಂಗ್ಸ್ ಡಿಕ್ಲೇರ್ಡ್‌ ಮಾಡುವ ನಿರ್ಧಾರ ಕೈಗೊಂಡರು. ಭಾರತದ ಪರ ಆರ್ ಅಶ್ವಿನ್ 73ಕ್ಕೆ 2, ಝಹೀರ್ ಖಾನ್, ಇಶಾಂತ್ ಶರ್ಮ ಮತ್ತು ಉಮೇಶ್ ಯಾದವ್ ತಲಾ 1 ವಿಕೆಟ್ ಹಂಚಿಕೊಂಡರು.

ನಾಲ್ಕನೆ ದಿನದ ಹೈಲೈಟ್ಸ್
  • ಪಾಂಟಿಂಗ್ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಗಳಿಸಿದ್ದರು. ಎರಡನೆಇನಿಂಗ್ಸ್‌ನಲ್ಲಿ ಅರ್ಧಶತಕ ದಾಖಲಿಸಿದರು.
  • ಸಚಿನ್ ತೆಂಡುಲ್ಕರ್ ಶತಕವಿಲ್ಲದೆ 22 ಟೆಸ್ಟ್ ಇನಿಂಗ್ಸ್ ಆಡಿದ್ದಾರೆ.
  • ರಾಹುಲ್ ದ್ರಾವಿಡ್ ಬ್ಯಾಟಿಂಗ್‌ನಲ್ಲಿ ಮತ್ತೊಮ್ಮೆ ಎಡವಿದ್ದಾರೆ. ಅವರ ರನ್ ಸರಾಸರಿ 8 ಇನಿಂಗ್ಸ್‌ಗಳಲ್ಲಿ 194 ರನ್.
  • ಗಂಭೀರ್ ಹಾಗೂ ಸೆಹ್ವಾಗ್ 2010ರಲ್ಲಿ ಸೆಂಚುರಿಯನ್‌ನಲ್ಲಿ ಶತಕದ ಜತೆಯಾಟ ನೀಡಿದ್ದರು. ಆ ಬಳಿಕ ಅವರಿಂದ ಇಂತಹ ಸಾಧನೆ ಕಂಡು ಬರಲಿಲ್ಲ. 12 ಇನಿಂಗ್ಸ್‌ಗಳಲ್ಲಿ ಹೀಗೆ ಒಟ್ಟು 182 ರನ್ ಕಲೆ ಹಾಕಿದ್ದಾರೆ. ಅವರ ಈಗಿನ ಗರಿಷ್ಠ ಜತೆಯಾಟದ ಸ್ಕೋರ್ 27 ರನ್.



Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಶಿಲಾಯುಗದ ಸಂಸ್ಕೃತಿ

ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...


ನಿಮ್ಮ ಅನಿಸಿಕೆ

postClick here to post your views
EPAPER
access

ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ

ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...


- ಸನತ್‌ಕುಮಾರ ಬೆಳಗಲಿ

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್