ಮಾನ್ಯರೆ,
ಮೈಸೂರು ಮತ್ತು ಹಾಸನ ವೈದ್ಯಕೀಯ ಕಾಲೇಜುಗಳ ಸಿಬ್ಬಂದಿ ನೇಮಕಾತಿಯಲ್ಲಿನ ಅಕ್ರಮ ಬಯಲಿಗೆ ಬಂದಿರುವುದದಿಂದ ವೈದ್ಯಕೀಯ ಸಚಿವರ ಯೋಗ್ಯತೆಯೇನೆಂದು ಜನತೆಗೆ ಈಗ ಮನವರಿಕೆಯಾಗುತ್ತಿದೆ. ಸಚಿವರ ಯಾವುದೇ ಹಸ್ತಕ್ಷೇಪ ಇಲ್ಲದೆ ಅವರ ಆಪ್ತ ಸಹಾಯಕ ಈ ಮಟ್ಟದ ಭ್ರಷ್ಟಾಚಾರದಲ್ಲಿ ತೊಡಗುವುದು ಸಾಧ್ಯವೆ?
ಉದ್ಯೋಗ ದೊರಕುವುದೆಂಬ ಆಸೆಯಲ್ಲಿ ಹಲವಾರು ಮಂದಿ ನಿರುದ್ಯೋಗಿಗಳು ಸಾಲ ಸೋಲ ಮಾಡಿ ಲಕ್ಷಾಂತರ ರೂಪಾಯಿಗಳನ್ನು ಹೊಂದಿಸಿ ಭ್ರಷ್ಟರ ಕೈಗಿಟ್ಟು ಉದ್ಯೋಗದ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ಉದ್ಯೋಗ ಬಿಡಿ ತಾವು ಕೊಟ್ಟ ಹಣಕ್ಕೇ ಸಂಚಕಾರ ಒದಗಿದೆ.
ಈ ನೇಮಕಾತಿಯಲ್ಲಿ ಯೋಗ್ಯತೆಗಿಂತ ಹಣಬಲವೇ ಹೆಚ್ಚಿನ ಮಾನದಂಡವಾಗಿದ್ದ ರಿಂದಾಗಿ ಅರ್ಹರು ಕೆಲಸ ಪಡೆಯದಂತಾದುದು ಸಚಿವರ ಯೋಗ್ಯತೆಗೆ ಕನ್ನಡಿ ಹಿಡಿದಂತಾಗಿದೆ.
ಆದುದರಿಂದ ಹಲವಾರು ಬಡ ಶಿಕ್ಷಿತ ನಿರುದ್ಯೋಗಿಗಳ ಜೀವನದಲ್ಲಿ ಆಟವಾಡಿದ ಈ ಪ್ರಕರಣದ ಬಗ್ಗೆ ಸರಕಾರ ಕೂಲಂಕಷ ತನಿಖೆ ನಡೆಸಬೇಕಾಗಿದೆ. ಸಂಬಂಧಿತ ವ್ಯಕ್ತಿಗಳಿಗೆ ಕಠಿಣ ಸಿಕ್ಷೆ ವಿಧಿಸಬೇಕಾಗಿದೆ. ಇಂತಹ ಗಂಭೀರ ಭ್ರಷ್ಟಾಚಾರ ಪ್ರಕರಣ ಬಯಲಾದರೂ ಸಂಪುಟದಲ್ಲಿ ಮುಂದುವರಿದಿರುವ ವೈದ್ಯಕೀಯ ಶಿಕ್ಷಣ ಸಚಿವರ ನೈತಿಕತೆಯನ್ನು ಪ್ರಶ್ನಿಸಬೇಕಾಗಿದೆ.
ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...
Click here to post your views ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...
ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...
ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...
ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...
‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...
ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...
ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...
ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...