ಅಂಕಣ - ಪ್ರಚಲಿತ

mail-img print-img

ಪಂಕ್ತಿಭೇದ ಎಂಬ ಅನಾಗರಿಕ ಪದ್ಧತಿ

ಸೋಮವಾರ - ಜನವರಿ -23-2012

ಉಡುಪಿಯ ರಥಬೀದಿಯಲ್ಲಿ ಒಂದೆಡೆ ಪರ್ಯಾಯ ನಡೆದಿದ್ದರೆ, ಇನ್ನೊಂದೆಡೆ ಮಠಮಂದಿರಗಳಲ್ಲಿ ನಡೆಯುತ್ತಿರುವ ಊಟದ ಪಂಕ್ತಿಭೇದದ ವಿರುದ್ಧ ನಾಡಿನ ಮಾನವಂತರು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಇದೇ ಜನವರಿ 26ರಂದು ಗಣರಾಜ್ಯೋತ್ಸವ ದಿನದ ಸಂದರ್ಭ ದಲ್ಲಿ ಉಡುಪಿಯಲ್ಲಿ ಭಾರೀ ಜನಸ್ತೋಮ ಸೇರಿ ಜಾತಿಯಾಧಾರದಲ್ಲಿ ಜನರನ್ನು ವಿಭಜಿಸುವ ಪಂಕ್ತಿಭೇದ ಧಿಕ್ಕರಿಸುವ ಘೋಷಣೆ ಕೂಗಲಿದ್ದಾರೆ. ಈ ಹೋರಾಟವನ್ನು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ಸಂಘಟಿಸಿದೆ. ಆದರೆ ಆ ಪಕ್ಷದ ಕಾರ್ಯಕರ್ತರು ಮಾತ್ರವಲ್ಲ ನಾಡಿನ ಪ್ರಗತಿಪರ ಚಿಂತಕರು, ಸಾಹಿತಿಗಳು, ಮಠಾಧೀಶರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅಷ್ಟಮಠಗಳ ಅಧಿಪತಿಗಳಿಗೆ ಸವಾಲು ಹಾಕಲಿದ್ದಾರೆ.ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಸಿಪಿಎಂ ಸಮ್ಮೇಳನದಲ್ಲಿ ಮಠಗಳ ಪಂಕ್ತಿಭೇದ ವಿರುದ್ಧ ಪ್ರತಿಭಟಿಸುವ ನಿರ್ಣಯವನ್ನು ಅಂಗೀಕರಿಸಿದಾಗ, ಅನೇಕರಿಗೆ ಅಚ್ಚರಿ ಉಂಟಾಯಿತು. ಸಾಮಾನ್ಯವಾಗಿ ಕಮ್ಯುನಿಸ್ಟರ ಸಮಾವೇಶಗಳಲ್ಲಿ ದೇಶ-ವಿದೇಶದ ಆರ್ಥಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಿ, ಮುಂದಿನ ಹೋರಾಟದ ಕಾರ್ಯಕ್ರಮ ರೂಪಿಸುವ ಪರಂಪರೆಯಿದೆ.

ಜಾತಿ ಶೋಷಣೆ, ಕಂದಾಚಾರದ ವಿರುದ್ಧ ಪ್ರತ್ಯೇಕ ಹೋರಾಟ ನಡೆಸಿದ ಉದಾಹರಣೆಗಳು ತೀರ ಕಡಿಮೆ. ಎ.ಕೆ.ಗೋಪಾಲನ್ ಕೇರಳದಲ್ಲಿ ಇಂತಹ ಹೋರಾಟವೊಂದನ್ನು ಐದು ದಶಕಗಳ ಹಿಂದೆ ನಡೆಸಿದ್ದರು. ಆ ನಂತರದ ಎಡಪಂಥೀಯ ಹೋರಾಟ ಗಳೆಲ್ಲ ರೈತಕಾರ್ಮಿಕರ ಆರ್ಥಿಕ ಬೇಡಿಕೆಗಳಿಗೆ ಸೀಮಿತವಾಗಿ ದ್ದವು. ಆರಂಭದಲ್ಲಿ ಜಾತಿ ವಾಸ್ತವವನ್ನು ಕಮ್ಯುನಿಸ್ಟರು ಒಪ್ಪುತ್ತಲೇ ಇರಲಿಲ್ಲ. ಆದರೆ ಇತ್ತೀಚೆಗೆ ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಟದ ಕಾರ್ಯಕ್ರಮ ವನ್ನು ಅವರು ರೂಪಿಸುತ್ತಿದ್ದಾರೆ.

ಸಾಮಾನ್ಯವಾಗಿ ಕಮ್ಯುನಿಸ್ಟರ ಮೆರವಣಿಗಯೆಂದರೆ ಅಂಗನವಾಡಿ ನೌಕರರು, ಕಟ್ಟಡ ಕಾರ್ಮಿಕರು, ಅಂಚಿನ ಕಾರ್ಮಿಕರು, ಕೂಲಿ ಕಾರ್ಮಿಕರು ಹೀಗೆ ನಾನಾ ಸಂಘಟಿತ ಮತ್ತು ಅಸಂಘಟಿತ ವಲಯದ ದುಡಿಯುವ ಜನ ತಮ್ಮ ಸಂಬಳ ಭತ್ತೆ ಇತ್ಯಾದಿಗಳಿಗಾಗಿ ಸರಕಾರ ಮತ್ತು ಮಾಲಕರನ್ನು ಒತ್ತಾಯಿಸುವ ಉದ್ದೇಶದಿಂದ ಕೂಡಿರುತ್ತವೆ. ಆದರೆ ಇದೇ ಮೊದಲ ಬಾರಿ ಮಠಗಳಲ್ಲಿ ನಡೆಯುವ ಪಂಕ್ತಿಭೇದದ ವಿರುದ್ಧ ಕಮ್ಯುನಿಸ್ಟ್ ಪಕ್ಷವೊಂದು ಪ್ರತಿಭಟನಾ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿರುವುದು ಗಮನಾರ್ಹ ಸಂಗತಿಯಾಗಿದೆ. ಜನವರಿ 26ರಂದು ಪಕ್ಷದ ರಾಜ್ಯ ಕಾರ್ಯದರ್ಶಿ ಶ್ರೀರಾಮರೆಡ್ಡಿ ನೇತೃತ್ವದಲ್ಲಿ ಸಹಸ್ರ ಜನ ಉಡುಪಿಗೆ ಧಾವಿಸಲಿದ್ದಾರೆ.ಫ್ಯಾಸಿಸ್ಟ್ ಸಂಘಪರಿವಾರ ಆಕ್ರಮಣಶೀಲವಾದಂತೆಲ್ಲ ಅದರ ಮರ್ಮಸ್ಥಾನಕ್ಕೆ ಏಟು ಕೊಡಲು ಎಡಪಂಥೀಯರು ತಮ್ಮ ಕಾರ್ಯತಂತ್ರ ಬದಲಿಸಿಕೊಳ್ಳುತ್ತಾ ಬಂದಿದ್ದಾರೆ.

ಈ ಕೋಮುವಾದಿ ಶಕ್ತಿಗಳ ಮರ್ಮಸ್ಥಾನ ಇರುವುದೇ ಮೇಲ್ಜಾತಿಯ ಮಠ-ಮಂದಿರಗಳಲ್ಲಿ. ದೇವಾಲಯಗಳಲ್ಲಿ ಹೋಮ-ಪೂಜೆ-ಅರ್ಚನೆ, ಆರತಿಗಳು ಹೆಚ್ಚಾದಂತೆ ಆರೆಸ್ಸೆಸ್ ಬಲವೃದ್ಧಿಯಾಗುತ್ತಿದೆ.ಅಂತಲೇ ಅದು ಹಿಂದುತ್ವದ ಹೆಸರಿನಲ್ಲಿ ಪುರೋಹಿತಶಾಹಿ ಮಠ- ಮಂದಿರಗಳನ್ನು ನಿರ್ಮಿಸುತ್ತ, ರಕ್ಷಿಸುತ್ತಾ ಬಂದಿದೆ. ಬಿಜೆಪಿ ಅಧಿಕಾರಕ್ಕೆ ಬಂದಿರುವ ರಾಜ್ಯಗಳಲ್ಲಿ ಸಂವಿಧಾನಕ್ಕಿಂತ ಈ ಮಠಾಧೀಶರಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ.ಸರಕಾರದ ಬೊಕ್ಕಸವನ್ನೇ ಅವರಿಗೆ ತೆರೆದಿಡಲಾಗುತ್ತಿದೆ.ಮಠಾಧೀಶರಲ್ಲಿ ಸಂಪತ್ತಿಗಾಗಿ ಕಲಹದ ಕಿಡಿ ಹೊತ್ತಿಕೊಂಡರೆ, ಅದನ್ನು ಬಗೆಹರಿಸಲು ಬಿಜೆಪಿ ಮುಖ್ಯಮಂತ್ರಿಗಳೇ ಮಧ್ಯಪ್ರವೇಶ ಮಾಡುತ್ತಾರೆ.

ಉಡುಪಿ ಪರ್ಯಾಯದ ಸಂದರ್ಭದಲ್ಲಿ ಸಾಗರೋಲ್ಲಂಘನ ಮಾಡಿದ ಪುತ್ತಿಗೆ ಶ್ರೀಗಳನ್ನು ಈ ಬಾರಿ ಸರ್ವಜ್ಞ ಪೀಠಾರೋಹಣ ಮಾಡುತ್ತಿರುವ ಸೋದೆ ಶ್ರೀಗಳು ಆಹ್ವಾನ ನೀಡದಿರುವುದು ಗೊಂದಲಕ್ಕೆ ಕಾರಣವಾಗಿತ್ತು. ರಾಜಕಾರಣಿಗಳಂತೆ ಪುತ್ತಿಗೆ ಶ್ರೀಗಳು, ಪೇಜಾವರ ಶ್ರೀಗಳು ಉಪವಾಸ-ಪ್ರತಿ ಉಪವಾಸ ನಡೆಸಿದರು. ಈ ಸ್ವಾಮಿಗಳ ಜಗಳ ಬಗೆಹರಿಸಲು ಮುಖ್ಯಮಂತ್ರಿ ಸದಾನಂದ ಗೌಡರು ಮಧ್ಯಪ್ರವೇಶ ಮಾಡಿದರು. ಅಲ್ಲಿಗೆ ಎಲ್ಲವೂ ಶಾಂತವಾಯಿತು.ಈಗ ಹೇಳಲು ಹೊರಟಿರುವುದು ಪರ್ಯಾಯದ ಬಗ್ಗೆ ಅಲ್ಲ. ಮೇಲ್ಜಾತಿಯ ಮಠಗಳಲ್ಲಿ ನಡೆಯುತ್ತಿರುವ ಸಂವಿಧಾನ ಬಾಹಿರ ಚಟುವಟಿಕೆಗಳ ಬಗ್ಗೆ.

ಭಾರತದ ನಾಗರಿಕರನ್ನು ಜಾತಿ-ಮತದ ಆಧಾರದಲ್ಲಿ ತಾರತಮ್ಯದಿಂದ ಕಾಣಬಾರದು ಎಂದು ರಾಜ್ಯಾಂಗ ಹೇಳುತ್ತಿದೆ. ಆದರೆ ಮೇಲ್ಜಾತಿಯ ಮಠಗಳಲ್ಲಿ ಬ್ರಾಹ್ಮಣರಿಗೆ ಮತ್ತು ಬ್ರಾಹ್ಮಣೇತರ ರಿಗೆ ಪ್ರತ್ಯೇಕ ಊಟದ ಪಂಕ್ತಿಗಳು ಇವತ್ತಿಗೂ ಇವೆ. ಇದೆಲ್ಲ ಗೊತ್ತಿದ್ದರೂ ಸಂಘಪರಿವಾರ ಮೌನವಹಿಸಿದೆ. ದಿನೇಶ್ ಅಮಿನ್‌ಮಟ್ಟು ವಿವೇಕಾನಂದರ ಬಗ್ಗೆ ಬರೆದರೆಂದು ಪ್ರಜಾವಾಣಿ ಕಚೇರಿ ಮೇಲೆ ಹಲ್ಲೆ ಮಾಡುವ ಎಬಿವಿಪಿಗಳು ಇಂತಹ ಪಂಕ್ತಿಭೇದಗಳನ್ನು ಎಂದಿಗೂ ಪ್ರತಿಭಟಿಸಿಲ್ಲ. ಈ ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಬಾರದು ಎಂಬುದೇ ಸಂಘಪರಿವಾರದ ಸಿದ್ಧಾಂತ.ಸಾಮಾನ್ಯವಾಗಿ ದೇವಾಲಯಗಳ ಸಮೀಪಕ್ಕೂ ಹೋಗದ ಕಮ್ಯುನಿಸ್ಟರು ಈಗ ಪಂಕ್ತಿಭೇದದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.

ಈ ಮುಂಚೆ ಕಾರ್ಯಕರ್ತರು ಇಂತಹ ಪ್ರಶ್ನೆಗಳನ್ನು ಕೇಳಿದರೆ, ಸಮಾಜ ಬದಲಾವಣೆಯಾದರೆ ಎಲ್ಲ ಸರಿಹೋಗುತ್ತದೆ. ಕೇವಲ ಮೇಲ್ಪದರಿನ ಸುಧಾರಣಾ ಕ್ರಮಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂಬ ಮಾತು ಎಡಪಂಥೀಯ ನಾಯಕರಿಂದ ಬರುತ್ತಿತ್ತು. ನಾಲ್ಕು ದಶಕಗಳಿಂದ ಈ ಚಳವಳಿಯೊಂದಿಗೆ ಗುರುತಿಸಿಕೊಂಡಿರುವ ನನ್ನಂತಹ ಅನೇಕರಿಗೆ ಈ ರೀತಿಯ ಅನುಭವವಾಗಿದೆ.ಜಾತಿ ಪ್ರಶ್ನೆಯನ್ನು ಎತ್ತುವುದೇ ತಪ್ಪುಎಂಬಂತೆ ಹಳೆಯ ತಲೆಮಾರಿನ ಕಮ್ಯುನಿಸ್ಟ್ ನಾಯಕರು ಮಾತನಾಡುತ್ತಿದ್ದರು. ಅಂತಲೇ ಡಾ.ಅಂಬೇಡ್ಕರ್ ಅಂಥವರಿಗೆ ಕಮ್ಯುನಿಸ್ಟ್ ಚಳವಳಿ ಸಮೀಪ ಬರಲು ಸಾಧ್ಯವಾಗಲಿಲ್ಲ. ಹಾಗೆಂದು ಕಮ್ಯುನಿಸ್ಟ್ ನಾಯಕರು ಜಾತಿವಾದಿಗಳೆಂದಲ್ಲ. ತಮ್ಮ ಇಡೀ ಬದುಕನ್ನು ದಮನಿತ ವರ್ಗಗಳಿಗಾಗಿ ಮೀಸಲಾಗಿಟ್ಟ ಅವರ ಪ್ರಾಮಾಣಿಕತೆ ಪ್ರಶ್ನಾತೀತ.

ಆದರೆ ಅವರ ಆಲೋಚನಾ ಕ್ರಮ ಜಾತಿ ವಾಸ್ತವದಿಂದ ಅವರನ್ನು ವಿಮುಖರನ್ನಾಗಿ ಮಾಡಿತು.80ರ ದಶಕದಲ್ಲಿ ಹುಬ್ಬಳ್ಳಿಯಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಸಮ್ಮೇಳನ ನಡೆಯಿತು. ಆಗ ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದರು. ಈ ಜಾತಿ ಸಮ್ಮೇಳನವನ್ನು ವಿರೋಧಿಸಿ, ಕಮ್ಯುನಿಸ್ಟ್ ಮತ್ತು ಸೋಶಿಯಲಿಸ್ಟ್ ಯುವಕರು ಪ್ರತಿಭಟನೆಗೆ ಮುಂದಾದಾಗ ಚಂಪಾ ಕೂಡ ನಮ್ಮೊಂದಿಗೆ ಇದ್ದರು. ಆದರೆ ಆಗ ಧಾರವಾಡ ಜಿಲ್ಲೆಯ ಕೆಲ  ಕಮ್ಯುನಿಸ್ಟ್‌ನ ನಾಯಕರಿಗೆ ಇದು ಸರಿಯೆನ್ನಿಸಲಿಲ್ಲ. ಅವರು ಪ್ರತಿಭಟನೆಯಲ್ಲಿ ಭಾಗವಹಿಸಲಿಲ್ಲ.ಆದರೆ ಕಳೆದ ಐದು ದಶಕಗಳ ಅನುಭವ. ಎಡಪಂಥೀಯರಲ್ಲೂ ಸಾಕಷ್ಟು ಬದಲಾವಣೆಗಳನ್ನು ತಂದಿದೆ. 80ರ ದಶಕದಲ್ಲೇ ಹಿರಿಯ ಕಮ್ಯುನಿಸ್ಟ್ ಚಿಂತಕ ಎಸ್.ಜಿ.ಸರ್ದೇಸಾಯಿ ಭಾರತದ ಕಮ್ಯುನಿಸ್ಟ್ ಜಾತಿ ವ್ಯವಸ್ಥೆ ಬಗ್ಗೆ ಪ್ರಾಮುಖ್ಯತೆ ನೀಡದಿರುವ ಕುರಿತು ವಿಮರ್ಶೆ ಮಾಡಿದ್ದರು.

ನಂತರ ಎಡಪಕ್ಷಗಳಲ್ಲಿ ಸ್ವಯಂ- ವಿಮರ್ಶೆ ನಡೆದು ಈಗ ಸಿಪಿಎಂನಂತಹ ಪಕ್ಷದಲ್ಲೂ ಜಾತಿ ನಿರ್ಮೂಲನೆಗಾಗಿ ಪ್ರತ್ಯೇಕ ವೇದಿಕೆ ರಚಿಸಲಾಗಿದೆ. ಸಿಪಿಐ ಕೂಡ ಇಂತಹ ಅನೇಕ ಹೋರಾಟಗಳನ್ನು ಕೈಗೊಂಡಿದೆ. ನಕ್ಸಲೀಯ ಕಮ್ಯುನಿಸ್ಟರು ಕುಲ ನಿರ್ಮೂಲನೆ ಸಮಿತಿ ರಚಿಸಿ ಹೋರಾಡುತ್ತಾ ಬಂದಿದ್ದಾರೆ.ಈ ಜಾತಿ ಶ್ರೇಣೀಕರಣ ವ್ಯವಸ್ಥೆ ಹಾಗೂ ಮಠ-ಮಂದಿರಗಳ ಕಂದಾಚಾರ ಗಳನ್ನು ಬಂಡವಾಳ ಮಾಡಿಕೊಂಡು ಪೇಶ್ವೆಗಳ ಕಾಲದ ತಾರತಮ್ಯ ವ್ಯವಸ್ಥೆಯನ್ನು ಮತ್ತೆ ಸ್ಥಾಪಿಸಲು ಸಂಘಪರಿವಾರದ ಹಿಂದುತ್ವವಾದಿ ಶಕ್ತಿಗಳು ಹುನ್ನಾರ ನಡೆಸುತ್ತಲೇ ಬಂದಿವೆ. ಕರ್ನಾಟಕದಂತಹ ಸೌಹಾರ್ದ ತಾಣದಲ್ಲೂ ಈ ಕರಾಳಶಕ್ತಿಗಳು ಅಧಿಕಾರಸೂತ್ರ ಹಿಡಿದಿವೆ. ಇಂತಹ ಸನ್ನಿವೇಶದಲ್ಲಿ ಈ ಶಕ್ತಿಗಳ ಜೀವಸೆಲೆಯಾದ ಮಠ-ಮಂದಿರಗಳ ಕಂದಾಚಾರದ ವಿರುದ್ಧ ಹೋರಾಟ ರೂಪಿಸುವುದು ಅಗತ್ಯವಾಗಿದೆ.

ಆರೆಸ್ಸೆಸ್ ನಲ್ಲಿರುವ ಶೂದ್ರ ಯುವಕರು ಪಂಕ್ತಿಭೇದವನ್ನು ನೀವೇಕೆ ವಿರೋಧಿಸುವುದಿಲ್ಲ ಎಂದು ತಮ್ಮ ನಾಯಕರನ್ನು ಪ್ರಶ್ನಿಸಬೇಕಾಗಿದೆ.ಉಡುಪಿ ಕೃಷ್ಣಮಠ ಮಾತ್ರವಲ್ಲ ಶೃಂಗೇರಿ ಶಾರದಾಂಬೆ ದೇವಾಲಯ, ಮಂತ್ರಾಲಯ ರಾಘವೇಂದ್ರ ಮಠ ಹೀಗೆ ನಾಡಿನ 250ಕ್ಕೂ ಹೆಚ್ಚು ಮೇಲ್ಜಾತಿ ಮಠ-ಮಂದಿರಗಳಲ್ಲಿ ಊಟ ಮಾಡಬೇಕಾದರೆ ಅಂಗಿ ಬಿಚ್ಚಿ ಒಳಗೆ ಹೋಗಬೇಕು. ಯಾರಿಗೆ ಜನಿವಾರವಿದೆ, ಯಾರಿಗೆ ಇಲ್ಲ ಎಂಬುದನ್ನು ಪತ್ತೆ ಹಚ್ಚಲು ಇಂತಹ ವ್ಯವಸ್ಥೆ ಮಾಡಲಾಗಿದೆ. ಭಗವದ್ಗೀತೆ ಅಭಿಯಾನದ ಬಗ್ಗೆ ಮಾತನಾಡುವ ಬಿಜೆಪಿ ಮಂತ್ರಿಗಳು ಸಂವಿಧಾನ ವಿರೋಧಿಯಾದ ಈ ಅನಾಗರಿಕ ವರ್ತನೆ ಬಗ್ಗೆ ಮಾತನಾಡುವುದಿಲ್ಲ.ಈಗ ಕಮ್ಯುನಿಸ್ಟರು ಇಂತಹ ಒಂದು ಹೋರಾಟವನ್ನು ಕೈಗೆತ್ತಿಕೊಂಡಿದ್ದಾರೆ. ಇದು ಅವರ ಹೋರಾಟ ಮಾತ್ರವಲ್ಲ. ಮನುಷ್ಯತ್ವ ಇರುವ ಎಲ್ಲರ ಹೋರಾಟ. ದಲಿತ, ರೈತ, ಮಹಿಳಾ ಸಂಘಟನೆಗಳು ಒಂದುಗೂಡಿ ಸಂಪ್ರದಾಯವಾದಿ ಶಕ್ತಿಗಳಿಗೆ ಸವಾಲು ಹಾಕ ಬೇಕಾಗಿದೆ.

ಹಿಂದೂಗಳೆಲ್ಲ ಒಂದೇ ಎಂದು ತೋರಿಕೆಗೆ ಹೇಳುವ ವಿಶ್ವಹಿಂದೂ ಪರಿಷತ್ತಿಗೆ ಸಕಲ ನೆರವನ್ನೂ ನೀಡುವ ಪೇಜಾವರ ಮಠಾಧೀಶರು ಪಂಕ್ತಿಭೇದದ ವಿರುದ್ಧ ನಡೆಯುವ ಹೋರಾಟಕ್ಕೆ ಬೆಂಬಲ ನೀಡುವರಾ? ಈ ಪ್ರಶ್ನೆಗೆ ಅವರೇ ಉತ್ತರ ನೀಡಬೇಕಾಗಿದೆ.


Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಕಗ್ಗತ್ತಲ ಕೋಣೆಯಲ್ಲಿ ನರಳುತ್ತಿರುವ ಶಿಕ್ಷಣ

ನಮ್ಮ ಶಿಕ್ಷಣ ವ್ಯವಸ್ಥೆಯ ರುದ್ರ ರೂಪವೊಂದು ಹರ್ಯಾಣದ ಅನ್ವಾಂಟ್ ಶಾಲೆಯೊಂದರಲ್ಲಿ ಪ್ರಕಟವಾಗಿದೆ.ಹೋಮ್ ವರ್ಕ್ ಮಾಡದ ಒಂದೇ ಒಂದು ಕಾರಣಕ್ಕಾಗಿ ಎಲ್‌ಕೆಜಿ ವಿದ್ಯ ...


ನಿಮ್ಮ ಅನಿಸಿಕೆ

postClick here to post your views
EPAPER
access

ಭಾರತ-ಅಮೆರಿಕ ದೇಶದ ನೂತನ ವಸಾಹತು

ಸಾಮ್ರಾಜ್ಯವಾದಿ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್... ದೇಶಗಳು ಇಂದು ತೀವ್ರ ಆರ್ಥಿಕ ...


- ಶ್ರೀ ರಾಮ್, ಬೆಂಗಳೂರು

ಬಿಜೆಪಿಯ ‘ಟೀಮ್ ಬಿ’

ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಆರೆಸ್ಸೆಸ್ ಬೆಂಬಲ ನೀಡಿತ್ತು ಎಂದು ಕಳ ...


ಜನ ಚಳವಳಿಗೆಲ್ಲ ಹೀಗೇಕಾಗಿವೆ?

ನವ ಉದಾರೀಕರಣದ ದುರಾಕ್ರಮಣದ ಈ ಕಾಲದಲ್ಲಿ ಕೋಮುವಾದ ನಾನಾ ವೇಷಧರಿಸಿ ವಕ್ಕರಿಸುತ್ತಿರುವ ಆತಂಕದ ...


- ಸನತ್‌ ಕುಮಾರ ಬೆಳಗಲಿ

ಮಾನ ಮರ್ಯಾದೆ ಇಲ್ಲದ ಜನರೆಲ್ಲ ಎಲ್ಲಿ ಹೋದರು?

ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಯಾದುದೇ ಬಿಜೆಪಿ, ಅರ್ಹ ಅಭ್ಯರ್ಥಿಯನ್ನು ಹ ...


ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?

‘ಸತ್ಯಂ ಶಿವಂ ಸುಂದರಂ...’ ಎಂಬ ಹಿಂದಿ ಸಿನಿಮಾದ ಈ ಶೀರ್ಷಿಕೆಯ ಹಾಡನ್ನು ಮತ್ತೆ ಮತ್ತೆ ಹಾಡಿಕ ...


- ಜ್ಯೋತಿ ಗುರುಪ್ರಸಾದ್

ಅಂಬೇಡ್ಕರರನ್ನು ಗೌರವಿಸುವಲ್ಲಿ ಹಿಂದೆ ಬಿದ್ದ ಭಾರತ

ಇತ್ತೀಚೆಗೆ ಎಲ್ಲೆಂದರಲ್ಲಿ ಒಂದು ಬೇಡಿಕೆ ಸಹಜ ವೆಂಬತೆ ಎದ್ದಿದೆ. ಅದು ಸಚಿನ್‌ತೆಂಡೂಲ್ಕರ್‌ಗೆ ಭಾರತ ರತ ...


- ರಘೋತ್ತಮ ಹೊ.ಬ.

ಪಠ್ಯಪುಸ್ತಕಗಳ ಕೇಸರೀಕರಣ ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್

ಪಠ್ಯಪುಸ್ತಕಗಳ ಕೇಸರೀಕರಣ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್