ಅಂಕಣ

mail-img print-img

ಕುವೆಂಪು ಕಂಡ ಮಂಥರೆ-ರಂಗ ರೂಪಾಂತರ

ಬುಧವಾರ - ಜನವರಿ -25-2012

ಮುಂಬೈನ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ ವಿಜೇತ ಕನ್ನಡಿಗರ ಸಾಂಸ್ಕೃತಿಕ ಕೇಂದ್ರದಂತಿರುವ ಕರ್ನಾ ಟಕ ಸಂಘ, ಕಳೆದ ಹದಿನೈದು ವರ್ಷಗಳಿಂದ ಕುವೆಂಪು ಸ್ಮಾರಕ ಏಕಾಂಕ ನಾಟಕ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿರುತ್ತದೆ. ಆ ಮೂಲಕ ಅನೇಕಾನೇಕ ನಾಟಕ ತಂಡಗಳಿಗೊಂದು ಅವಕಾಶ ಮತ್ತು ಮುಂಬೈ ನಾಟಕಾಸಕ್ತರಿಗೆ ಹೊಸ ಹೊಸ ಪ್ರಯೋಗಗಳ ರಸರುಚಿ ನೀಡುವಲ್ಲಿ ಯಶಸ್ವಿಯಾಗಿದೆ.ಅಖಿಲ ಭಾರತ ಮಟ್ಟದಲ್ಲಿ ನಡೆ ಯುವ ಈ ನಾಟಕ ಸ್ಪಧೆರ್ಯ ರೂವಾರಿ ಸಂಘದ ಕಾರ್ಯದರ್ಶಿ ರಂಗ ನಿರ್ದೇಶಕ ಡಾ.ಭರತ್‌ಕುಮಾರ್ ಪೊಲಿಪು ಮತ್ತವರ ತಂಡದ ಶ್ರಮ ಶ್ಲಾಘನೀಯ ವಾದುದು.ನನಗಿನ್ನೂ ನೆನಪಿದೆ ಬಹುಶಃ 1994- 95ರ ಹಾಗೆ ಪ್ರಥಮ ವರ್ಷ ಈ ಸ್ಪರ್ಧೆಯ ರೂಪರೇಷೆ ಭಿನ್ನವಾಗಿದ್ದವು. ಕೇವಲ ಮುಂಬೈನ ಸಂಘ ಸಂಸ್ಥೆಗಳಿಗೆ ಮಾತ್ರ ಭಾಗವಹಿಸುವ ಅವಕಾಶವಿದ್ದು ಸ್ಪರ್ಧೆಗಳಲ್ಲಿ ಭಾಷಣ, ಭಾವಗೀತೆ, ಸಮೂಹ ಗೀತೆ, ನಗೆ ಚಟಾಕಿ ಮತ್ತು ಕೇವಲ 20 ನಿಮಿಷಗಳ ಅವಧಿಯಲ್ಲಿ ‘ಪಿಕ್ ಆಂಡ್ ಆಕ್ಟ್’ ರೀತಿಯ ನಾಟಕವನ್ನು ಸಾದರಪಡಿಸುವ ಅವಕಾಶವಿತ್ತು. ಆಗ ನಾನು ಕನ್ನಡ ಭವನ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿದ್ದೆ.

ಶಾಲೆಯ ಮಕ್ಕಳನ್ನು ಸೇರಿಸಿಕೊಂಡು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದೆವು. ಭಾಷಣಕ್ಕೊಬ್ಬ ಒಳ್ಳೆ ವಿದ್ಯಾರ್ಥಿ ಸಿಕ್ಕಿದ್ದ. ಮತ್ತೊಬ್ಬರನ್ನು ಸೇರಿಸಿ ಸಮೂಹ ಗೀತೆಯನ್ನು ನಾನೇ ಲೀಡ್ ಮಾಡಿದ್ದೆ. ಭಾವಗೀತೆ, ನಗೆ ಚಟಾಕಿಯನ್ನೂ ನಾನೇ ನಿರ್ವಹಿಸಿದ್ದೆ. ಮತ್ತೆ ನಾಟಕ ಸನ್ನಿವೇಶದಲ್ಲಿ ಒದ್ದಾಡಿದ್ದು ನೆನಪಿಸಿಕೊಂಡರೆ ಈಗಲೂ ನಗು ಬರುತ್ತದೆ. ಅಷ್ಟು ಕೆಟ್ಟದ್ದಾಗಿ ಯಾವ ತಂಡವೂ ನಿರ್ವಹಿಸಿರಲಿಕ್ಕಿಲ್ಲ! ಬಹುಮಾನ ಘೋಷಣೆ ಸಂದರ್ಭ. ನಾಟಕ ಬಿಟ್ಟು ಉಳಿದ ಎಲ್ಲ ವಿಭಾಗಗಳಲ್ಲಿ ಒಂದಲ್ಲ ಒಂದು ಬಹು ಮಾನ ಬಂದಿತ್ತು. ಪ್ರಥಮ ವರ್ಷದ ಫಲಕ ನಮ್ಮ ತಂಡಕ್ಕೆ ಬಂದಾಗ ನನಗೇ ಸಕತ್ ಆಶ್ಚರ್ಯ! ನೀವು ಎಲ್ಲ ವಿಭಾಗಗಳಲ್ಲಿ ಭಾಗವಹಿಸಿರುವುದರಿಂದ ಅದು ಸಾಧ್ಯವಾಯಿತು ಅಂತ ಸಂಘಟಕರಿಂದಲೇ ಸಮ ಜಾಯಿಷಿ ಸಿಕ್ಕಿತ್ತು. ಮುಂದೆ ಕುವೆಂಪು ಸ್ಮಾರಕ ಸ್ಪರ್ಧೆಯ ರೂಪರೇಷೆ ಬದಲಾಗಿ ಈಗಿನ ಏಕಾಂಕ ನಾಟಕ ಸ್ಪರ್ಧೆ -ಅದು ಕರ್ನಾಟಕದಾದ್ಯಂತ ನಾಟಕ ತಂಡ ಗಳಿಗೆ ನೀಡುವ ಅವಕಾಶದ ಮೂಲಕ ಹೊಸ ಆಯಾಮವನ್ನು ಪಡೆದುಕೊಂಡು ಬಂದಿದೆ.

ಹಿಂದೊಮ್ಮೆ ನಾವು ಮುಂಬೈ ಚುಕ್ಕಿ ಸಂಕುಲದ ಲೇಖಕ ಗೆಳೆಯರು ಈ ಸ್ಪರ್ಧೆಯಲ್ಲಿ ನಾಟಕ ಪ್ರಯೋಗಿಸಿದ್ದಿದೆ. ಗೆಳೆಯ ನಾಟಕಕಾರ ಸಾ. ದಯಾ ಇತರರೊಂದಿಗೆ ನಾಟಕ ಪ್ರಯೋಗಿಸಿ ದ್ದಿದೆ.ಈ ಬಾರಿ ಅದೇನೋ ಹುಮ್ಮಸ್ಸು. ಬೇರೊಂದು ನಾಟಕಕ್ಕೆ ಅಣಿಯಾಗುತ್ತಿದ್ದ ನಮಗೆ ‘ನಾವೂ ನಾಟಕ ಹಾಕೋಣವೇ?’ ಎಂಬ ಸಾ.ದಯಾರ ಸವಾಲಿಗೆ ಆಗಲಿ ಅನ್ನಲು ಮುಖ್ಯ ಕಾರಣ ಅವರಲ್ಲಿ ಆಗಲೇ ಆಲೋಚನೆಯಲ್ಲಿದ್ದ ‘ಕುವೆಂಪು ಕಂಡ ಮಂಥರೆ’ ಪಾತ್ರ. ಮತ್ತೆ ಇನ್ನೊಂದು ನಾಟಕಕ್ಕೆ ಒಪ್ಪಿಕೊಂಡ ಹಲವು ಕಲಾವಿದರು ಜೊತೆಗೇನೇ ಇರುವುದರಿಂದ ಮಾಡುವ ಹುಮ್ಮಸ್ಸು ಇಮ್ಮಡಿಯಾಯಿತು.

ಸಾ.ದಯಾರಿಗೆ ತಕ್ಕಂತೆ ಅನ್ನುವುದಕ್ಕಿಂತ ಕುವೆಂಪು ಚಿತ್ರಿಸಿದ ಮಂಥರೆಯಂತಹ ಪಾತ್ರದ ಹುಡು ಕಾಟ ನಿಂತದ್ದು ಮುಂಬೈನ ಪ್ರತಿಭಾವಂತ ಕಲಾವಿದೆ ಅಹಲ್ಯ ಬಲ್ಲಾಳ್ ಒಪ್ಪಿಕೊಳ್ಳುವುದರ ಮೂಲಕ. ಇದೇ 27, 28 ಮತ್ತು 29 ಈ ಮೂರು ದಿನಗಳು ಕರ್ನಾಟಕ ಸಂಘ ಮಾಟುಂಗದಲ್ಲಿ ಸ್ಪರ್ಧೆಯ ದಿನಗಳು ನಿಗದಿತ ಗೊಂಡಿದ್ದು. 28ರ ಶನಿವಾರದ ಮೊದಲ ನಾಟಕ ನಮ್ಮ ತಂಡದ್ದಾಗಿದ್ದು, ಮುಂಬೈನ ಇನ್ನೊಂದು ತಂಡ ಪೊವಾಯಿ ಕನ್ನಡ ಸಂಘದವರದ್ದು ಶುಕ್ರವಾರ ಇದೆ.ಕುವೆಂಪುರವರ ಮಹಾಕಾವ್ಯ ‘ಶ್ರೀ ರಾಮಾಯಣ ದರ್ಶನಂ’ ಆಕರವನ್ನಾಗಿಸಿ ರಂಗ ರೂಪಾಂತರ ‘ಕುವೆಂಪು ಕಂಡ ಮಂಥರೆ’ ಕವಿ ನಾಟಕಕಾರ ಸಾ.ದಯಾರವರ ಸೃಜನಶೀಲತೆಗೆ ಸವಾಲೂ ಹೌದು.

ಮಹಾಕವಿ ವಿಶ್ವಮಾನವ ಪ್ರೇಮಿ ಕುವೆಂಪು ಮಂಥರೆಯನ್ನು ಓರ್ವ ಸಾಮಾನ್ಯ ಹೆಂಗಸಿನಂತೆ ಕಂಡು ಆಕೆಯ ಕಠೋರ ಮನಸ್ಥಿತಿಗೆ, ಆಕೆಯ ದೌರ್ಭಾಗ್ಯಕ್ಕೆ ಕಾರಣವನ್ನು ವಿಶ್ಲೇಷಿಸುತ್ತ ಮಂಥರೆಯೆಂಬ ಅಸಹಾಯಕ ಮನೋಭೂಮಿಕೆಯ ಕತೆಯನ್ನು ಕಟ್ಟಿ ಕೊಡುತ್ತಾರೆ. ಮಂಥರೆ ಲೋಕದ ದೃಷ್ಟಿಯಲ್ಲಿ ಕೆಟ್ಟವಳು, ಕ್ರೂರಿ, ಮಹಾಪಾತಕಿ. ಆದರೆ ನಿಜದಲ್ಲಿ ಮಂಥರೆ ಹಾಗೆ ಯಾಕೆ ವರ್ತಿಸಿದಳು? ಮಂಥರೆ ಯಾರು? ಎಂಬ ಆಕೆಯ ಬದುಕಿನ ದ್ವಂದ್ವ ಅಳಲು, ಕಠೋರತೆ, ಭರತನ, ಕೈಕೆಯ ಮೇಲಿನ ಅಪಾರ ಪ್ರೀತಿಯ ಹಿನ್ನೆಲೆಯಲ್ಲಿ ತೆರೆದುಕೊಳ್ಳಬೇಕು ವಿನಹಃ ಆಕೆಗೆ ರಾಮನ ಮೇಲೆ ಅಥವಾ ಇನ್ನಾರ ಮೇಲಿನ ದ್ವೇಷದಿಂದ ಅಲ್ಲ ಎಂಬ ಸಹಜ ಪ್ರವೃತ್ತಿಯನ್ನು ಕುವೆಂಪು ಎತ್ತಿ ಹಿಡಿಯುತ್ತಾರೆ.

ರಂಗ ರೂಪಾಂತರದ ಆರಂಭದ ಸನ್ನಿವೇಶ ಹೀಗಿದೆ.. ಊರಿನ ಹೆಂಗಸರು ಜಗಳವಾಡುವ ದೃಶ್ಯ ‘ಒಬ್ಬಾಕೆ’ ಸುಮ್ನಿರೆ.. ಥೂ ಮಂಥರೆ! ಎಂಬ ಮೂದಲಿಕೆ. ಆಗ ‘‘...ಮಂಥರೆ ಅಂದರೆ ಯಾರು? ಯಾಕೆ ಅವಳನ್ನು ಬಯ್ಯುತ್ತೀರಿ? ಆಕೆ ಬಗ್ಗೆ ನಿಮಗೆಷ್ಟು ಗೊತ್ತು? ಆಕೆ ಬೆಳೆದ ಪರಿ, ಆಕೆ ಕಂಡ ಕನಸುಗಳ, ಉಂಡ ಕಷ್ಟ ನಷ್ಟಗಳ ಪರಿ ನಿಮಗೆ ಗೊತ್ತೇ? ಕುವೆಂಪು ಕಂಡ ಮಂಥರೆ ನಿಮಗೆ ಗೊತ್ತೇ?..’’ ಮಂಥರೆಯ ಅಂತರಾಳದ ಮಾತುಗಳು ಕೇಳಿ ಬರುತ್ತದೆ...ಆಗ ಆ ಹೆಂಗಸರು ಕೇಳುತ್ತಾರೆ.. ‘ಕ್ಷಮಿಸು, ಇಷ್ಟೆಲ್ಲ ಹೇಳಿದ ನೀನಾರು?’ ಆಕೆ: ‘ಮಂಥರೆ ಯಾರು? ನಾನು ಯಾರು?’ ಮಂಥರೆಯ ಕತೆ ಅಲ್ಲಿಂದ ರಂಗದ ಮೇಲೆ ತೆರೆದುಕೊಳ್ಳುತ್ತದೆ ಮುಂದಿನ ಒಂದು ಗಂಟೆ.



Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಕಗ್ಗತ್ತಲ ಕೋಣೆಯಲ್ಲಿ ನರಳುತ್ತಿರುವ ಶಿಕ್ಷಣ

ನಮ್ಮ ಶಿಕ್ಷಣ ವ್ಯವಸ್ಥೆಯ ರುದ್ರ ರೂಪವೊಂದು ಹರ್ಯಾಣದ ಅನ್ವಾಂಟ್ ಶಾಲೆಯೊಂದರಲ್ಲಿ ಪ್ರಕಟವಾಗಿದೆ.ಹೋಮ್ ವರ್ಕ್ ಮಾಡದ ಒಂದೇ ಒಂದು ಕಾರಣಕ್ಕಾಗಿ ಎಲ್‌ಕೆಜಿ ವಿದ್ಯ ...


ನಿಮ್ಮ ಅನಿಸಿಕೆ

postClick here to post your views
EPAPER
access

ಭಾರತ-ಅಮೆರಿಕ ದೇಶದ ನೂತನ ವಸಾಹತು

ಸಾಮ್ರಾಜ್ಯವಾದಿ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್... ದೇಶಗಳು ಇಂದು ತೀವ್ರ ಆರ್ಥಿಕ ...


- ಶ್ರೀ ರಾಮ್, ಬೆಂಗಳೂರು

ಬಿಜೆಪಿಯ ‘ಟೀಮ್ ಬಿ’

ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಆರೆಸ್ಸೆಸ್ ಬೆಂಬಲ ನೀಡಿತ್ತು ಎಂದು ಕಳ ...


ಜನ ಚಳವಳಿಗೆಲ್ಲ ಹೀಗೇಕಾಗಿವೆ?

ನವ ಉದಾರೀಕರಣದ ದುರಾಕ್ರಮಣದ ಈ ಕಾಲದಲ್ಲಿ ಕೋಮುವಾದ ನಾನಾ ವೇಷಧರಿಸಿ ವಕ್ಕರಿಸುತ್ತಿರುವ ಆತಂಕದ ...


- ಸನತ್‌ ಕುಮಾರ ಬೆಳಗಲಿ

ಮಾನ ಮರ್ಯಾದೆ ಇಲ್ಲದ ಜನರೆಲ್ಲ ಎಲ್ಲಿ ಹೋದರು?

ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಯಾದುದೇ ಬಿಜೆಪಿ, ಅರ್ಹ ಅಭ್ಯರ್ಥಿಯನ್ನು ಹ ...


ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?

‘ಸತ್ಯಂ ಶಿವಂ ಸುಂದರಂ...’ ಎಂಬ ಹಿಂದಿ ಸಿನಿಮಾದ ಈ ಶೀರ್ಷಿಕೆಯ ಹಾಡನ್ನು ಮತ್ತೆ ಮತ್ತೆ ಹಾಡಿಕ ...


- ಜ್ಯೋತಿ ಗುರುಪ್ರಸಾದ್

ಅಂಬೇಡ್ಕರರನ್ನು ಗೌರವಿಸುವಲ್ಲಿ ಹಿಂದೆ ಬಿದ್ದ ಭಾರತ

ಇತ್ತೀಚೆಗೆ ಎಲ್ಲೆಂದರಲ್ಲಿ ಒಂದು ಬೇಡಿಕೆ ಸಹಜ ವೆಂಬತೆ ಎದ್ದಿದೆ. ಅದು ಸಚಿನ್‌ತೆಂಡೂಲ್ಕರ್‌ಗೆ ಭಾರತ ರತ ...


- ರಘೋತ್ತಮ ಹೊ.ಬ.

ಪಠ್ಯಪುಸ್ತಕಗಳ ಕೇಸರೀಕರಣ ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್

ಪಠ್ಯಪುಸ್ತಕಗಳ ಕೇಸರೀಕರಣ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್