ಅಂಕಣ

mail-img print-img

ಮುಕ್ತ ಮತದಾನ: ಸ್ವಚ್ಛ ಪ್ರಜಾಪ್ರಭುತ್ವಕ್ಕೆ ವರದಾನ

ಬುಧವಾರ - ಜನವರಿ -25-2012

ದೇಶವು ಗಣರಾಜ್ಯೋತ್ಸವವನ್ನು ಸಂಭ್ರಮ-ಸಹಕಾರದಿಂದ ಆಚರಿಸಲು ಸನ್ನದ್ಧವಾಗಿರುವಾಗಲೇ ಮುನ್ನಾದಿನವಾದ ಇಂದು ಭಾರತದಾದ್ಯಂತ ‘ರಾಷ್ಟ್ರೀಯ ಮತದಾರರ ದಿನ’ವನ್ನು ಆಚರಿಸಲಾಗುತ್ತಿದೆ. ಪ್ರತೀ ವರ್ಷ ಜನವರಿ 25ನೆ ದಿನಾಂಕದಂದು ‘ರಾಷ್ಟ್ರೀಯ ಮತದಾರರ’ದಿನ. ಈ ಆಚರಣೆ ಆರಂಭವಾದದ್ದು 2011ರಿಂದ, ಇಂದು ಆಚರಿಸಲ್ಪಡುತ್ತಿರುವುದು 2ನೆ ದಿನಾಚರಣೆ.ಭಾರತದ ಚುನಾವಣಾ ಆಯೋಗದ ಶಿಫಾರಸಿನಂತೆ ಭಾರತ ಸರಕಾರವು ಕಳೆದ ವರುಷ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸುವ ತೀರ್ಮಾನವನ್ನು ಪ್ರಕಟಿಸಿದಾಗ, ಪ್ರಜಾಪ್ರಭುತ್ವದ ಉಳಿವಿನಲ್ಲಿ ನಂಬಿಕೆ, ಭರವಸೆಯನ್ನಿಟ್ಟಿರುವ ದೇಶದ ಜನಸಮುದಾಯದಲ್ಲಿ ಒಂದು ಸಂತಸದ ಬೆಳವಣಿಗೆಯಾಗಿ ಗೋಚರಿಸಿತು. ಬಿಗಿಯಾದ ಚುನಾವಣಾ ವ್ಯವಸ್ಥೆಯ ನಡುವೆಯೂ ಆಗುತ್ತಿರುವ ಅವ್ಯವಸ್ಥೆ, ಕಡಿಮೆ ಪ್ರಮಾಣದ ಮತದಾನ ಇತ್ಯಾದಿ ಆತಂಕಕಾರಿ ಬೆಳವಣಿಗೆಯನ್ನು ಸ್ವಲ್ಪ ಮಟ್ಟಿಗೆ ಜಾಗೃತಿಯ ಮೂಲಕ ತಡೆಯುವಲ್ಲಿ ಈ ‘ದಿನಾಚರಣೆ’ ಸಹಕಾರಿ ಆಗಬಹುದು ಎನ್ನುವುದು ಅತಿಶಯೋಕ್ತಿಯಾಗಲಾರದು.

ಆಚರಣೆಯ ಹಿನ್ನೆಲೆ:ಭಾರತದ ಚುನಾವಣಾ ಆಯೋಗ ಸ್ಥಾಪನೆಗೊಂಡದ್ದು ಜನವರಿ 25ನೆ ದಿನಾಂಕದಂದು. 1950ರಿಂದ ಇಂದಿನವರೆಗೂ ಒಟ್ಟು 17 ಮಂದಿ ಮುಖ್ಯ ಚುನಾವಣಾ ಆಯುಕ್ತರು (ಈಗಿನ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ಸೇರಿದಂತೆ) ಆಯೋಗದ ಸಾರಥ್ಯವನ್ನು ವಹಿಸಿದ್ದಾರೆ.ಭಾರತವು ಒಂದು ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಅಷ್ಟೇ ಅಲ್ಲ ಇದು ಒಂದು ಕಲ್ಯಾಣ ರಾಷ್ಟ್ರ.ಇಲ್ಲಿ ಚುನಾವಣೆಗಳೂ ಪಾರದರ್ಶಕವಾಗಿ ನಡೆಯಬೇಕು, ನಂತರದ ಆಡಳಿತ-ಅಭಿವೃದ್ಧಿ ಕಾರ್ಯಗಳು ನ್ಯಾಯಸಮ್ಮತವಾಗಿ ನಡೆಯಬೇಕು. ಹಲವು ಬಾರಿ ಚುನಾವಣೆಯ ನಂತರವೇ ಜನಪ್ರತಿನಿಧಿಯ ನಿಜವಾದ ವ್ಯಕ್ತಿತ್ವದ ದರ್ಶನವಾಗುತ್ತದೆ. ಚುನಾವಣೆಗೆ ಮುನ್ನ ಬಹುತೇಕ ಎಲ್ಲರೂ ಮುಗ್ಧರೇ, ಆದರೆ ಅಧಿಕಾರ ಅಂತಸ್ತುಗಳು ಕೂಡಾ ಹಲವು ಬಾರಿ ವ್ಯಕ್ತಿಯನ್ನು ಭ್ರಷ್ಟನನ್ನಾಗಿಸುತ್ತದೆ. ಒಬ್ಬ ಜನಪ್ರತಿನಿಧಿ ಪ್ರಜಾಪ್ರಭುತ್ವದಲ್ಲಿ ಪಾರದರ್ಶಕ ನೆಲೆಯಲ್ಲಿ ಆಯ್ಕೆಯಾಗಬೇಕು.

ಆ ರೀತಿ ಪಾರದರ್ಶಕವಾಗಿ ಆಯ್ಕೆಯಾದ ಪ್ರತಿನಿಧಿಯಿಂದ ಏನನ್ನಾದರೂ ನಿರೀಕ್ಷಿಸಬಹುದು.ಆದರೆ ಆಯ್ಕೆಯ ಪ್ರಕ್ರಿಯೆಯಲ್ಲಿಯೇ ಆಮಿಷಗಳು, ತೋಳ್ಬಲಗಳು. ಧನಬಲ ಪ್ರದರ್ಶನವಾದಾಗ ಅದರಿಂದ ತೂರಿ ಬರುವ ಜನಪ್ರತಿನಿಧಿ ಕೇವಲ ತಾನು ಮಾತ್ರವಲ್ಲದೆ, ಇಡೀ ವ್ಯವಸ್ಥೆಯನ್ನು ಕಲುಷಿತಗೊಳಿಸುತ್ತಾನೆ.ಒಬ್ಬ ವ್ಯಕ್ತಿ ಸರಕಾರಿ ಯಾ ಖಾಸಗಿ ನೌಕರಿಗೆ ಆಯ್ಕೆಯಾಗಲು ಲಂಚ ನೀಡಿರುತ್ತಾನೆ ಎಂದಾದರೆ, ಆತ ತಾನು ನೀಡಿದ ಲಂಚದ ಹಣದ ಹಲವು ಪಟ್ಟು ಮರು ಗಳಿ ಸುವ ಉದ್ದೇಶದಿಂದ ತನ್ನ ಸೇವಾವಧಿಯುದ್ದಕ್ಕೂ ತಾನು ಮಾತ್ರವಲ್ಲದೆ ತನ್ನ ಸುತ್ತಲಿನ ವ್ಯವಸ್ಥೆಯನ್ನು ಭ್ರಷ್ಟಗೊಳಿಸುತ್ತಾನೆ. ಹಾಗಾದರೆ ನೌಕರರ ಆಯ್ಕೆ ಪ್ರಕ್ರಿಯೆಯೇ ಪಾರದರ್ಶಕವಾಗಿದ್ದರೆ ಭವಿಷ್ಯವೂ ಒಂದಷ್ಟು ಪಾರದರ್ಶಕವಾಗುತ್ತದೆ.

ಇದೇ ರೀತಿ ಚುನಾವಣಾ ವ್ಯವಸ್ಥೆಯ ಮುಕ್ತ ನ್ಯಾಯ ಸಮ್ಮತವಾಗಿದ್ದಲ್ಲಿ ಅಂತಹ ವ್ಯವಸ್ಥೆಯಿಂದ ಹೊರಬರುವ ಜನಪ್ರತಿನಿಧಿಯೂ ಕೂಡಾ ಪಾರದರ್ಶಕನಾಗಿರಲು ಸಾಧ್ಯ. ವ್ಯವಸ್ಥೆ ಭ್ರಷ್ಟ ಮುಕ್ತವಾಗಿದೆಯೆಂದಾದರೆ, ಇಡೀ ಪ್ರಜಾಪ್ರಭುತ್ವ ಯಶಸ್ವಿಯಾದಂತೆ.ದೇಶದ ಪ್ರಜಾಪ್ರಭುತ್ವದ ವೌಲ್ಯಗಳನ್ನು ಎತ್ತಿ ಹಿಡಿಯಬಲ್ಲ ಆರಂಭಿಕ ಹಂತವಾದ ಚುನಾವಣೆಯನ್ನು ಸುಧಾರಿಸಲು ಸ್ವಾತಂತ್ರಾ ನಂತರ ಬೇರೆ ಬೇರೆ ಕಾಲಘಟ್ಟದಲ್ಲಿ ಪ್ರಯತ್ನಿಸ ಲಾಗಿದೆ. ಆದರೆ ಈ ಪ್ರಯತ್ನಕ್ಕೆ ತೀವ್ರತೆ ಹಾಗೂ ಚುರುಕು ಕಂಡು ಬಂದದ್ದು 1990ರ ನಂತರ. ಟಿ.ಎನ್.ಶೇಷನ್ ಮುಖ್ಯ ಚುನಾವಣಾ ಆಯುಕ್ತರಾದ ನಂತರ ಚುನಾವಣೆಯ ಅಬ್ಬರ,ಗದ್ದಲಗಳಿಗೆ ಬಹುತೇಕ ಕಡಿವಾಣ ಬಿತ್ತು. ಮತಗಟ್ಟೆ ಸ್ಫೋಟ, ಮತಪೆಟ್ಟಿಗೆ ಅಪಹರಣ, ಬಲಾತ್ಕಾರದ ಮತದಾನ; ಲಂಗು ಲಗಾಮಿಲ್ಲದ ಪ್ರಚಾರ ಇತ್ಯಾದಿಗಳಿಗೆ 1990ರ ನಂತರ ಬಹುಪಾಲು ಅಂಕುಶ ಹಾಕಲಾಗಿದೆ.

ಆದಾಗ್ಯೂ, ರಂಗೋಲಿ ಯ ಅಡಿಯಲ್ಲಿ ತೂರಿ, ಮತದಾರನಿಗೆ ನೇರವಾಗಿ ನಾ ಮುಂದು-ತಾ ಮುಂದು ಎಂಬಂತೆ ವೈವಿಧ್ಯಮಯ ಆಮಿಷಗಳನ್ನು ಒಡ್ಡಿ, ಮತವನ್ನು ಸೆಳೆಯುವ, ಇದಕ್ಕಾಗಿ ಕೋಟಿ ಕೋಟಿ ಹಣ ಸುರಿಯುವ ಇಂದಿನ ಬೆಳವಣಿಗೆ ನಿಜಕ್ಕೂ ಆತಂಕಕಾರಿ. ಹಣವಿಲ್ಲದವನು ಪಂಚಾಯತ್ ಚುನಾವಣೆಯಲ್ಲೂ ಸ್ಪರ್ಧಿಸಲು ಅಸಾಧ್ಯವೇನೋ ಎಂಬ ಆತಂಕವೂ ಹಲವರನ್ನು ಕಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಇರುವುದು ಒಂದೇ ದಾರಿ. ಅದು ಮತದಾರರನ್ನು ಜಾಗೃತಿ ಗೊಳಿಸುವುದು.

ರಾಷ್ಟ್ರೀಯ ಮತದಾರರ ದಿನಾಚರಣೆಯ ಉದ್ದೇಶ:ಎಲ್ಲಿಯವರೆಗೆ ಮತದಾರ ಭ್ರಷ್ಟನಾಗಿರುತ್ತಾನೋ ಅಲ್ಲಿಯವರೆಗೆ ಜನ ಪ್ರತಿನಿಧಿಯೂ ಭ್ರಷ್ಟನೇ. ಎಲ್ಲಿಯವರೆಗೆ ಜನಪ್ರತಿನಿಧಿಯೂ ಭ್ರಷ್ಟನಾಗಿರುತ್ತಾನೋ ಅಲ್ಲಿಯವರೆಗೆ ಮತದಾರರೂ ಭ್ರಷ್ಟರೆ.
ಇದನ್ನು ಎಲ್ಲಿಂದ ಸುಧಾರಿಸುವುದು? ಆದರೆ ಸುಧಾರಿಸಬೇಕಾದ ಜರೂರತ್ ಅಂತೂ ಇದೆ. ತಾಂತ್ರಿಕ ಸುಧಾರಣೆಯ ಜೊತೆಯಲ್ಲಿ, ಮಾಂತ್ರಿಕ ಸುಧಾರಣೆಯ ಅಗತ್ಯವೂ ಅಷ್ಟೇ ಇದೆ. ಇದಕ್ಕಾಗಿ ಒಂದು ಮಹತ್ವದ ಹೆಜ್ಜೆಯೇ ‘ರಾಷ್ಟ್ರೀಯ ಮತದಾರರ ದಿನಾಚರಣೆ’.

‘‘ಹಲವು ಜನಪ್ರತಿನಿಧಿಗಳು ಭ್ರಷ್ಟರು, ಚುನಾವಣೆ ವ್ಯವಸ್ಥೆ ಸರಿ ಇಲ್ಲ ಹಾಗಾಗಿ ನಾವು ಮತದಾನ ಮಾಡೋದಿಲ್ಲ’’ ಎನ್ನುವವರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಬಹುಪಾಲು ವಿದ್ಯಾವಂತರೇ ಎನ್ನುವುದು ಆತಂಕಕಾರಿ ಸಂಗತಿ. ವ್ಯವಸ್ಥೆ ಯನ್ನು ದೂರಿ ಮತದಾನ ಪ್ರಕ್ರಿಯೆ ಯಿಂದಲೇ ದೂರ ಉಳಿಯುವುದು ಕೂಡಾ ಒಂದು ಪಥ ಭ್ರಷ್ಟ ಕ್ರಮ.ಇವೆಲ್ಲಾ ಕೋನಗಳಿಂದ ನೋಡಿದಾಗ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಹಾಲಿ ಮತ್ತು ಭಾವಿ ಮತದಾರ ಸಮುದಾಯದ ಮುಂದೆ ಪರಿಣಾಮಕಾರಿಯಾಗಿ ಆಚರಿಸಬೇಕಾದ ಅಗತ್ಯವಿದೆ.

* ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡುವಂತೆ ಪ್ರೇರಣೆ.

* ಮುಕ್ತ ನ್ಯಾಯ ಸಮ್ಮತ ಮತದಾರ ಪ್ರಕ್ರಿಯೆಗಾಗಿ ಜಾಗೃತಿ.

*ಜಾತಿ ಧರ್ಮ ಕೋಮುಗಳ ದಯೆ ದಾಕ್ಷಿಣ್ಯಕ್ಕೆ ಒಳಗಾಗದೆ ಇದ್ದವರಲ್ಲಿ ಉತ್ತಮರನ್ನು ಆರಿಸುವಂತೆ ಜಾಗೃತಿ ಮೂಡಿಸುವುದು.

* ಮತದಾನ ಪ್ರಕ್ರಿಯೆಯಿಂದ ಅರಿವಿದ್ದೂ ದೂರ ಉಳಿಯುವ ವಿದ್ಯಾವಂತರನ್ನು ಹಾಗೂ ಅರಿವಿಲ್ಲದೆ ದೂರ ಉಳಿಯುವ ಅವಿದ್ಯಾವಂತರಲ್ಲಿ ಮತದಾನ ಪವಿತ್ರ ಹಕ್ಕು ಎಂದು ಅವರ ಅಂತರಾತ್ಮವನ್ನು ಬಡಿದೆಬ್ಬಿಸುವುದು. * 18 ವರ್ಷ ತುಂಬಿದ ವಯಸ್ಕರಲ್ಲಿ ಮತದಾನದ ಹಕ್ಕು ಪಡೆಯುವಂತೆ ಸ್ಫೂರ್ತಿ ನೀಡುವುದು.

* ದೇಶದ ಭಾವಿ ಮತದಾರರಿಗೆ ಪ್ರಜಾಪ್ರಭುತ್ವದ ಅಗತ್ಯತೆ ಅನಿವಾರ್ಯತೆ ಯನ್ನು ಒತ್ತಿ ಹೇಳಿ ಪ್ರಬುದ್ಧ ಮತದಾರ ರಾಗಿ ಕಾರ್ಯನಿರ್ವಹಿಸುವಂತೆ ಉತ್ತೇಜಿಸುವುದು.

ಈ ಎಲ್ಲ ಉದ್ದೇಶಗಳನ್ನು ಇಟ್ಟುಕೊಂಡು ಇಂದು ಆಚರಿಸಲ್ಪಡುವ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಮತದಾನದ ಪವಿತ್ರ ಹಕ್ಕನ್ನು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಚಲಾಯಿಸುವಂತೆ ಪ್ರತಿಜ್ಞೆ ಮಾಡುವ ಮಾಡಿಸುವ ಮೂಲಕ ಆಚರಿಸಬೇಕಾಗಿದೆ.

‘ಜೈ ಮತದಾನ್’







Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಶಿಲಾಯುಗದ ಸಂಸ್ಕೃತಿ

ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...


ನಿಮ್ಮ ಅನಿಸಿಕೆ

postClick here to post your views
EPAPER
access

ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ

ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...


- ಸನತ್‌ಕುಮಾರ ಬೆಳಗಲಿ

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್