ಅಂಕಣ - ತಾಯಿ ಬೇರು

mail-img print-img

ಜಮ್ಮು-ಕಾಶ್ಮೀರದ ಪಂಚಾಯತ್ ರಾಜ್ಯದಲ್ಲಿ ನ್ಯಾಯ ಪಂಚಾಯತ್ (ಪಂಚಾಯತ್ ಅದಾಲತ್)

ಗುರುವಾರ - ಜನವರಿ -26-2012

ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಪಂಚಾಯತ್ ಕಲರವ ಕೇಳಲಾರಂಭಿಸಿದ ವಿಚಾರವನ್ನು ಈ ಹಿಂದೆ ವಿವರಿಸಿದ್ದೆ. 36 ವರ್ಷಗಳ ಸುದೀರ್ಘ ಅಂತರದ ನಂತರ ಆ ರಾಜ್ಯದಲ್ಲಿ ಗ್ರಾಮ ಪಂಚಾಯತ್‌ಗಳಿಗೆ (ಹಲ್ಕಾ ಪಂಚಾಯತ್) ಚುನಾವಣೆ ನಡೆದು ಹೋಗಿದೆ.ಸತತವಾದ ಆಂತರಿಕ ಬೇಗುದಿಯಿಂದ ರೋಸಿ ಹೋಗಿರುವ ಜನತೆ ಶೇ.70ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನು ಸಾರಿ ಹೇಳಿದ ಚಾರಿತ್ರಿಕ ಘಟನೆ ಇದು.ಜಮ್ಮು ಮತ್ತು ಕಾಶ್ಮಿರ ರಾಜ್ಯದಲ್ಲಿ ಅಕಾರ ನಡೆಸುತ್ತಿರುವ ಉಮರ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನರೆನ್ಸ್ - ಕಾಂಗ್ರೆಸ್ ಮೈತ್ರಿಕೂಟದ ಸರಕಾರ ಕೂಡಾ ಪಂಚಾಯತ್ ರಾಜ್ ವ್ಯವಸ್ಥೆಗೆ ಶಕ್ತಿ ತುಂಬಲು ಪ್ರಯತ್ನಿಸುತ್ತಿದೆ.ಖಂಡಿತವಾಗಿಯೂ ಇದು ಸ್ವಾಗತಾರ್ಹ ಸಂಗತಿಯಾಗಿದೆ.ಸಂವಿಧಾನದ 73ನೆ ತಿದ್ದುಪಡಿಯಲ್ಲಿ ತಿಳಿಸಿರುವಂತೆ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲೂ ಮೂರು ಹಂತಗಳ ಪಂಚಾಯತ್ಗಳಿವೆ.ತಳಹಂತದಲ್ಲಿ ಹಲ್ಕಾ ಪಂಚಾಯತ್ (Halqa Panchayat)ಗಳು, ಮಧ್ಯಂತರ ಹಂತದಲ್ಲಿ ಬ್ಲಾಕ್ ಡೆವಲಪ್‌ಮೆಂಟ್ ಕೌನ್ಸಿಲ್ ಮತ್ತು ಜಿಲ್ಲಾ ಮಟ್ಟದಲ್ಲಿ ಡಿಸ್ಟ್ರಿಕ್ಟ್ ಪ್ಲಾನಿಂಗ್ ಮತ್ತು ಡೆವಲಪ್‌ಮೆಂಟ್ ಬೋರ್ಡ್ ಎನ್ನುವ ಸಂಸ್ಥೆಗಳನ್ನು ಜಮ್ಮು ಮತ್ತು ಕಾಶ್ಮೀರ ಪಂಚಾ ಯತ್ ರಾಜ್ ಕಾಯಿದೆ 1989ರ ಪ್ರಕಾರ ಅಸ್ತಿತ್ವಕ್ಕೆ ತರಲಾಗಿದೆ.

ಈ ಮೂರು ಹಂತಗಳಲ್ಲಿ ದೊಡ್ಡ ವಿಶೇಷವೇನೂ ಇಲ್ಲ. ಸಂವಿಧಾನದ 73ನೆ ತಿದ್ದುಪಡಿಗೆ ಮುಂಚಿತವಾಗಿಯೇ ಇದ್ದ ರಾಜ್ಯದ ಕಾಯಿದೆಯನ್ನು ಇಷ್ಟು ವರ್ಷಗಳಾದ ನಂತರ ಜಾರಿಗೆ ತರಲಾಗಿದೆ. ಆದರೆ ಬೇರೆ ರಾಜ್ಯಗಳಲ್ಲಿ ಇಲ್ಲದ ಒಂದು ವಿಶೇಷತೆ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪಂಚಾಯತ್ ರಾಜ್ ಕಾಯಿದೆಯಲ್ಲಿ ಇದೆ. ಕಾಯಿದೆಯ 13ನೆ ಅಧ್ಯಾಯದಲ್ಲಿ ‘ಪಂಚಾಯತ್ ಅದಾಲತ್’ ಎನ್ನುವ ಸಾಂವಿಧಾನಿಕ ವ್ಯವಸ್ಥೆಯ ರಚನೆಯ ಕುರಿತು ತಿಳಿಸಲಾಗಿದೆ. ಏನಿದು ಪಂಚಾಯತ್ ಅದಾಲತ್?

ಲೋಕ್ ಅದಾಲತ್, ಪಾನಿ ಅದಾಲತ್‌ನಂತೆ ಪಂಚಾಯತ್ ಅದಾಲತ್ ಕೂಡಾ ಒಂದು ರೀತಿಯ ನ್ಯಾಯ ತೀರ್ಮಾನದ ವ್ಯವಸ್ಥೆ.ಆದರೆ ದೇಶದ ಯಾವುದೇ ರಾಜ್ಯಗಳಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅಕೃತವಾಗಿ ಕಾಣಸಿಗದಂತಹ ‘ನ್ಯಾಯ ಪಂಚಾಯತಿ’ ವ್ಯವಸ್ಥೆ ಜಮ್ಮು- ಕಾಶ್ಮೀರ ರಾಜ್ಯದಲ್ಲಿ ಅಸ್ತಿತ್ವ ಪಡೆದುಕೊಂಡಿರುವುದು ಗಮನಾರ್ಹ ಸಂಗತಿಯಾಗಿದೆ.ಈ ರಾಜ್ಯದ ಪಂಚಾಯತ್ ರಾಜ್ ಕಾಯಿದೆಯ ಪ್ರಕರಣ ಆಗಿ ಎಲ್ಲ ಹಲ್ಕಾ ಪಂಚಾಯತ್‌ಗಳು ಕೂಡಾ ಕಡ್ಡಾಯವಾಗಿ ‘ಪಂಚಾಯತ್ ಅದಾಲತ್’ಗಳನ್ನು ಹೊಂದಿರಬೇಕು ಎಂದು ತಿಳಿಸುತ್ತದೆ.ಈ ಹಿಂದೆ ಕರ್ನಾಟಕದಲ್ಲಿ ಅಬ್ದುಲ್ ನಜೀರ್ ಸಾಬ್ ಅವರು ರಾಮಕೃಷ್ಣ ಹೆಗಡೆ ಸರಕಾರದ ಅವಯಲ್ಲಿ ಜಾರಿಗೆ ತಂದ ದ್ವಿ-ಸ್ಥರದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲೂ ನ್ಯಾಯ ಪಂಚಾ ಯತಿಗಳನ್ನು ಅಸ್ತಿತ್ವಕ್ಕೆ ತರುವ ಪ್ರಯತ್ನವನ್ನು ಮಾಡಲಾಗಿತ್ತು.

ಆ ಸಂದರ್ಭದಲ್ಲಿ ಸಿದ್ಧಪಡಿಸಲಾದ ಕಾಯಿದೆಯ ಹೆಸರೇ ಕರ್ನಾಟಕ ಮಂಡಲ ಪಂಚಾಯತ್, ಜಿಲ್ಲಾ ಪರಿಷತ್ ಮತ್ತು ನ್ಯಾಯ ಪಂಚಾಯತ್ ಕಾಯಿದೆ-1983 ಎಂದಾಗಿತ್ತು. ಆದರೆ ಗ್ರಾಮಗಳ ಮಟ್ಟದಲ್ಲಿ ನ್ಯಾಯ ಪಂಚಾಯತ್ ವ್ಯವಸ್ಥೆಗೆ ಜೀವ ತುಂಬುವ ನಜೀರ್ ಸಾಬ್ ಅವರ ಕನಸು ಈಡೇರಲಿಲ್ಲ. ಅದಕ್ಕೆ ಹಲವು ಕಾರಣಗಳಿರಬಹುದು.ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಪಂಚಾಯತ್ ವ್ಯವಸ್ಥೆ ಅತ್ಯಂತ ತಡವಾಗಿ ಕಾರ್ಯರೂಪಕ್ಕೆ ಬರುತ್ತಿದೆಯಾದರೂ ನ್ಯಾಯ ಪಂಚಾಯತ್‌ನ ವ್ಯವಸ್ಥೆಯನ್ನೂ ಜೊತೆ-ಜೊತೆಗೆ ಕಟ್ಟುವ ಪ್ರಯತ್ನ ನಡೆದಿದೆ. ಈಗಾಗಲೇ ಆ ರಾಜ್ಯದ ಬಹುತೇಕ ಎಲ್ಲ ಹಲ್ಕಾಗಳಲ್ಲಿ (ಗ್ರಾಮ) ಪಂಚಾಯತ್ ಅದಾಲತ್‌ಗಳು ರೂಪುಗೊಂಡಿದೆ. ಬ್ಲಾಕ್ ಮತ್ತು ಜಿಲ್ಲಾ ಮಟ್ಟಕ್ಕೆ ಇನ್ನೂ ಚುನಾವಣೆಗಳು ನಡೆದಿಲ್ಲ. ಅಲ್ಲಿನ ಹಲ್ಕಾ ಪಂಚಾಯತ್‌ಗಳಲ್ಲಿ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ವ್ಯವಸ್ಥಿತವಾಗಿ ನಡೆಸುವುದನ್ನು ಆರಂಭಿಸುವ ಮೊದಲೇ ‘ಪಂಚಾಯತ್ ಅದಾಲತ್’ಗಳಲ್ಲಿ ನ್ಯಾಯ ತೀರ್ಮಾನದ ತಕ್ಕಡಿ ತೂಗಲಾರಂಭಿಸಿದೆ. ಇದರ ಸಾಧಕ-ಬಾಧಕಗಳು ಇನ್ನಷ್ಟೇ ಬೆಳಕಿಗೆ ಬರಬೇಕಿದೆ.

ಪಂಚಾಯತ್ ಅದಾಲತ್ ರಚನೆ

ಜಮ್ಮು-ಕಾಶ್ಮೀರ ಪಂಚಾಯತ್ ರಾಜ್ ಕಾಯಿದೆಯ ಸೆಕ್ಷನ್ 48 ಪ್ರತಿಯೊಂದು ಹಲ್ಕಾ ಪಂಚಾಯತ್ ವ್ಯಾಪ್ತಿಗೂ ಒಂದು ‘ಪಂಚಾಯತ್ ಅದಾಲತ್’ ಸ್ಥಾಪನೆಯನ್ನು ಕಡ್ಡಾಯಗೊಳಿಸಿದೆ. ಪಂಚಾಯತ್ ಅದಾಲತ್‌ನ ರಚನೆಯ ಬಗ್ಗೆ ಕೂಡಾ ಈ ಸೆಕ್ಷನ್ ವಿವರ ನೀಡುತ್ತದೆ. ಪ್ರತಿಯೊಂದು ‘ಪಂಚಾಯತ್ ಅದಾಲತ್’ ನಲ್ಲೂ ಐದು ಮಂದಿ ಸದಸ್ಯರು ಬೇಕೆಂದು ಕಾಯಿದೆ ಹೇಳುತ್ತದೆ. ಈ ಐದು ಮಂದಿ ಸದಸ್ಯರನ್ನು ಹಲ್ಕಾ ಪಂಚಾಯತ್ (ಗ್ರಾಮ ಪಂಚಾಯತ್)ನಿಂದ ನಿರ್ದೇಶಿಸಲ್ಪಟ್ಟ ಸದಸ್ಯರ ಒಂದು ತಂಡ ಶಿಾರಸು ಮಾಡುತ್ತದೆ. ಹೀಗೆ ಶಿಾರಸು ಮಾಡಲ್ಪಡುವವರಿಗೆ ಕನಿಷ್ಠ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. 1. ಅವರು ಹಲ್ಕಾ ಪಂಚಾಯತ್ ವ್ಯಾಪ್ತಿಯ ನಿವಾಸಿಗಳಾಗಿರಬೇಕು. 2. ಅಕ್ಷರಸ್ಥರಾಗಿರಬೇಕು.
3. 30 ವರ್ಷ ವಯಸ್ಸು ದಾಟಿರಬೇಕು.
4. ಹಲ್ಕಾ ಪಂಚಾಯತ್‌ನ ಸರಪಂಚ್ ಅಥವಾ ಸಾಯಿಬ್ ಸರಪಂಚ್ (ಉಪಾಧ್ಯಕ್ಷ) ಆಗಿರಬಾರದು.
5. ಸರಕಾರ, ಸ್ಥಳೀಯಾಡಳಿತ ಸಂಸ್ಥೆ, ನಿಗಮ, ಮಂಡಳಿಗಳ ನೌಕರರಾಗಿರಬಾರದು.

ಇವರ ಅಧಿಕಾರಾವಧಿ ಐದು ವರ್ಷಗಳವರೆಗೆ ಇರುತ್ತದೆ. ಪಂಚಾಯತ್ ಅದಾಲತ್ ಸಭೆ ನಡೆಸಲು ಕನಿಷ್ಠ 3 ಸದಸ್ಯರ ಕೋರಂ ಇರಬೇಕು ಎಂದು ಕಾಯಿದೆ ಸ್ಪಷ್ಟಪಡಿಸುತ್ತದೆ. ಹಾಗೆಯೇ ಐದು ಸದಸ್ಯರು ತಮ್ಮ ಪೈಕಿ ಒಬ್ಬರನ್ನು ಅದಾ ಲತ್‌ನ ಅಧ್ಯಕ್ಷರಾಗಿ ಆಯ್ಕೆಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹಲ್ಕಾ ಪಂಚಾಯತ್‌ನ ಕಾರ್ಯದರ್ಶಿ ‘ಪಂಚಾಯತ್ ಅದಾಲತ್’ನ ಗುಮಾಸ್ತರಾಗಿ ಕಾರ್ಯ ನಿರ್ವಹಿಸುತ್ತಾರೆ. ಅವರು ಅದಾಲತ್‌ನ ಎಲ್ಲ ನಡವಳಿ ಮತ್ತು ನಿರ್ಣಯಗಳನ್ನು ದಾಖಲಿಸು ತ್ತಾರೆ ಮತ್ತು ಸಂರಕ್ಷಿಸುತ್ತಾರೆ. ‘ಪಂಚಾಯತ್ ಅದಾಲತ್’ಗೆ ಸಾಕಷ್ಟು ಅಕಾರಗಳನ್ನು ಕೂಡಾ ನೀಡಲಾಗಿದೆ. ವಿವಾದಗಳ ಕುರಿತಂತೆ ತನಿಖೆ ನಡೆಸುವ ಜೊತೆಗೆ ತಪ್ಪಿತಸ್ಥ ರೆಂದು ಕಂಡು ಬಂದಲ್ಲಿ ದಂಡ ವಿ ಸುವ ಅಕಾರವೂ ಅದಕ್ಕೆ ಇದೆ. ಗರಿಷ್ಠ ರೂ.1000ದವರೆಗೆ ದಂಡ ವಿಸಬಹುದಾಗಿದೆ. ಮೇಲಿನ ಹಂತದ ನ್ಯಾಯಾಲಯಗಳ ನ್ಯಾಯಾಧೀಶರು ಹಲ್ಕಾ ಪಂಚಾಯತ್ ವ್ಯಾಪ್ತಿಗಳಲ್ಲಿ ನಡೆಯುವ ಅಪರಾಧಗಳ ಕುರಿತಂತೆ ತನಿಖೆ ನಡೆಸಿ ವರದಿ ನೀಡುವಂತೆ ಪಂಚಾಯತ್ ಅದಾಲತ್‌ಗಳನ್ನು ಕೇಳಿಕೊಳ್ಳಬಹುದು.

ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ವಿಚಾರಣೆ ನಡೆಸಿ ವಿವಾದಗಳನ್ನು ಬಗೆಹರಿಸುವ ಅಕಾರ ವನ್ನು ಅದಾಲತ್‌ಗಳಿಗೆ ನೀಡಲಾಗಿದೆ. ಆದರೆ ಈ ನಿಟ್ಟಿನಲ್ಲಿ ಕೆಲವು ಮಿತಿಗಳನ್ನು ನಿಗದಿಪಡಿಸಲಾಗಿದೆ. ಎಷ್ಟು ಸರಿ...? ಗ್ರಾಮ ಪಂಚಾಯತ್ ಅಕಾರ ವ್ಯಾಪ್ತಿಗೆ ನ್ಯಾಯ ತೀರ್ಮಾನದ ಅಕಾರವನ್ನು ನೀಡು ವುದು ಎಷ್ಟು ಸರಿ ಎನ್ನುವ ಪ್ರಶ್ನೆ ಮೊದಲಿ ನಿಂದಲೂ ಇದೆ. ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ ಆಶಯದಲ್ಲಿ ನ್ಯಾಯ ಪಂಚಾಯತ್ ಪರಿಕಲ್ಪನೆಯೂ ಸೇರಿಕೊಂಡಿತ್ತು. ಆದರೆ ಡಾ.ಬಿ.ಆರ್. ಅಂಬೇಡ್ಕರ್ ಅದನ್ನು ವಿರೋಧಿಸಿದ್ದರು. ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಕೂಡಾ ಬಲಿಷ್ಠರಾಗಿರುವ ಪಾಳೇಗಾರಿ ಮನಸ್ಥಿತಿಗಳು ನ್ಯಾಯ ಪಂಚಾಯತ್ ವ್ಯವಸ್ಥೆಯನ್ನು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಉಪಯೋಗಿಸು ತ್ತಾರೆ. ಇದರಲ್ಲಿ ಸಾಮಾಜಿಕ ನ್ಯಾಯ ನಿರಾಕರಿ ಸಲ್ಪಡುತ್ತದೆ ಎನ್ನುವ ಅವರ ಆತಂಕ ಇನ್ನೂ ಕೂಡಾ ಹಾಗೆಯೇ ಉಳಿದಿದೆ.

ಜಮ್ಮು-ಕಾಶ್ಮೀರ ರಾಜ್ಯವೂ ಇದಕ್ಕೆ ಹೊರತಾಗಿಲ್ಲ. ಅಲ್ಲಿನ ಪಂಚಾಯತ್ ರಾಜ್ ವ್ಯವಸ್ಥೆ ಇನ್ನೂ ಆರಂಭಿಕ ಹಂತದಲ್ಲೇ ಇದೆ.ಅದರ ಬೇರುಗಳು ನೆಲದ ಆಳಕ್ಕೆ ಇಳಿದಿಲ್ಲ. ಕಾಯಿದೆಯಲ್ಲೂ ಸಾಕಷ್ಟು ಸಮಸ್ಯೆಗಳಿವೆ. ಹಲ್ಕಾ ಪಂಚಾಯತ್ ಅಧ್ಯಕ್ಷರನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲ ಮತದಾರರು ಮತದಾನದ ಮೂಲಕ ನೇರ ಆಯ್ಕೆ ಮಾಡುವ ಪದ್ಧತಿ ಇರುವುದರಿಂದ ಆರ್ಥಿಕವಾಗಿ ಪ್ರಬಲರಾಗಿರುವವರು ಮಾತ್ರ ಸರಪಂಚ್ ಆಗಿ ಆಯ್ಕೆಯಾಗುತ್ತಿದ್ದಾರೆ. ಈ ಎಲ್ಲ ಹಿನ್ನೆಲೆಗಳ ಆಧಾರದಲ್ಲಿ ಅಲ್ಲಿನ ಪಂಚಾಯತ್ ಅದಾಲತ್‌ನ ಸಾಧಕ-ಬಾಧಕಗಳು ವಿಶ್ಲೇಷಣೆ ಆಗಬೇಕಿದೆ. ಇಲ್ಲದೆ ಹೋದಲ್ಲಿ ಹಳೇ ಕಾಲದ ಕಟ್ಟೆ ಪಂಚಾಯತ್ ವ್ಯವಸ್ಥೆಯ ಎಲ್ಲ ಅಪಾಯಗಳು ಎದುರಾಗುವ ಸಾಧ್ಯತೆಗಳಿದ್ದು, ಶೈಶವಾವಸ್ಥೆಯಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಪಂಚಾಯತ್ ರಾಜ್ ವ್ಯವಸ್ಥೆಗೆ ಇದರಿಂದ ಮಾರಕವಾಗಬಹುದು ಅಲ್ಲವೇ....?

 

ವಿಲ್ಫ್ರೆಡ್ ಡಿಸೋಜಾ
ಇ-ಮೇಲ್‌: wdshejje@gmail.com


Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಕಗ್ಗತ್ತಲ ಕೋಣೆಯಲ್ಲಿ ನರಳುತ್ತಿರುವ ಶಿಕ್ಷಣ

ನಮ್ಮ ಶಿಕ್ಷಣ ವ್ಯವಸ್ಥೆಯ ರುದ್ರ ರೂಪವೊಂದು ಹರ್ಯಾಣದ ಅನ್ವಾಂಟ್ ಶಾಲೆಯೊಂದರಲ್ಲಿ ಪ್ರಕಟವಾಗಿದೆ.ಹೋಮ್ ವರ್ಕ್ ಮಾಡದ ಒಂದೇ ಒಂದು ಕಾರಣಕ್ಕಾಗಿ ಎಲ್‌ಕೆಜಿ ವಿದ್ಯ ...


ನಿಮ್ಮ ಅನಿಸಿಕೆ

postClick here to post your views
EPAPER
access

ಭಾರತ-ಅಮೆರಿಕ ದೇಶದ ನೂತನ ವಸಾಹತು

ಸಾಮ್ರಾಜ್ಯವಾದಿ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್... ದೇಶಗಳು ಇಂದು ತೀವ್ರ ಆರ್ಥಿಕ ...


- ಶ್ರೀ ರಾಮ್, ಬೆಂಗಳೂರು

ಬಿಜೆಪಿಯ ‘ಟೀಮ್ ಬಿ’

ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಆರೆಸ್ಸೆಸ್ ಬೆಂಬಲ ನೀಡಿತ್ತು ಎಂದು ಕಳ ...


ಜನ ಚಳವಳಿಗೆಲ್ಲ ಹೀಗೇಕಾಗಿವೆ?

ನವ ಉದಾರೀಕರಣದ ದುರಾಕ್ರಮಣದ ಈ ಕಾಲದಲ್ಲಿ ಕೋಮುವಾದ ನಾನಾ ವೇಷಧರಿಸಿ ವಕ್ಕರಿಸುತ್ತಿರುವ ಆತಂಕದ ...


- ಸನತ್‌ ಕುಮಾರ ಬೆಳಗಲಿ

ಮಾನ ಮರ್ಯಾದೆ ಇಲ್ಲದ ಜನರೆಲ್ಲ ಎಲ್ಲಿ ಹೋದರು?

ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಯಾದುದೇ ಬಿಜೆಪಿ, ಅರ್ಹ ಅಭ್ಯರ್ಥಿಯನ್ನು ಹ ...


ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?

‘ಸತ್ಯಂ ಶಿವಂ ಸುಂದರಂ...’ ಎಂಬ ಹಿಂದಿ ಸಿನಿಮಾದ ಈ ಶೀರ್ಷಿಕೆಯ ಹಾಡನ್ನು ಮತ್ತೆ ಮತ್ತೆ ಹಾಡಿಕ ...


- ಜ್ಯೋತಿ ಗುರುಪ್ರಸಾದ್

ಅಂಬೇಡ್ಕರರನ್ನು ಗೌರವಿಸುವಲ್ಲಿ ಹಿಂದೆ ಬಿದ್ದ ಭಾರತ

ಇತ್ತೀಚೆಗೆ ಎಲ್ಲೆಂದರಲ್ಲಿ ಒಂದು ಬೇಡಿಕೆ ಸಹಜ ವೆಂಬತೆ ಎದ್ದಿದೆ. ಅದು ಸಚಿನ್‌ತೆಂಡೂಲ್ಕರ್‌ಗೆ ಭಾರತ ರತ ...


- ರಘೋತ್ತಮ ಹೊ.ಬ.

ಪಠ್ಯಪುಸ್ತಕಗಳ ಕೇಸರೀಕರಣ ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್

ಪಠ್ಯಪುಸ್ತಕಗಳ ಕೇಸರೀಕರಣ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್