ಅಂಕಣ

mail-img print-img

ಬಜೆಟ್ ಹಣ ನಿರ್ಬಳಕೆ: ಅಧಿಕಾರಿಗಳಿಗೆ ತಕ್ಕ ಶಿಕ್ಷೆ ಅಗತ್ಯ

ಗುರುವಾರ - ಜನವರಿ -26-2012

ಭಾರತ ದೇಶದ ಜನಸಂಖ್ಯೆ ನಮ್ಮ ರಾಜ್ಯವ ನ್ನೊಳಗೊಂಡು ಈಗ 121.02 ಕೋಟಿಗೆ ಏರಿದೆ. ನಮ್ಮ ಕರ್ನಾಟಕದ ಜನಸಂಖ್ಯೆ 6.11 ಕೋಟಿಗೆ ಏರಿದೆ. ಭೌಗೋಳಿಕ ವಿಸ್ತಾರ ಮಾತ್ರ ಇದ್ದಷ್ಟೇ ಇದ್ದು ಸಾಗುವಳಿ ಕ್ಷೇತ್ರ ಮಾತ್ರ ಕಡಿಮೆಯಾಗು ತ್ತಲೇ ಇದೆ. ಕೇಂದ್ರ ಸರಕಾರದ ರಾಜಸ್ವ ಆದಾಯ 2009-10ರಲ್ಲಿ 7.05 ಲಕ್ಷ ಕೋಟಿ ವಾಸ್ತವಿಕ ಇದ್ದದ್ದು ಈ ವರ್ಷ 2011-12ನೆ ಸಾಲಿಗೆ 9.41 ಲಕ್ಷ ಕೋಟಿಗೆ ಏರಲಿದೆ. ಅಂತೆಯೇ ನಮ್ಮ ಕರ್ನಾಟಕ ರಾಜ್ಯದ ರಾಜಸ್ವ ಆದಾಯ 2009-10ರಲ್ಲಿ ವಾಸ್ತವಿಕವಾಗಿ 49155.70 ಕೋಟಿ ಇದ್ದದ್ದು ಈ ವರ್ಷ 2011-12ನೆ ಸಾಲಿಗೆ 66313.27 ಕೋಟಿಗೆ ಏರಿದೆ. ಪ್ರತಿ ವರ್ಷ ರಾಜ್ಯ ಹಾಗೂ ಕೇಂದ್ರ ಸರಕಾರಗಳ ರಾಜಸ್ವ ಆದಾಯ ಏರುತ್ತಲೇ ಇದೆ. ಈ ಆದಾಯ ಪ್ರಜೆಗಳು ನೀಡುವ ಬಹುಪಾಲು ಕರ ಕಂದಾಯವೇ ಇರುತ್ತದೆ. ನಮ್ಮ ರಾಜ್ಯದ ರಾಜಸ್ವ ಆದಾಯ 29 ಇಲಾಖೆಗಳ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಾಲುವುದಿಲ್ಲವಾದ್ದರಿಂದ ಸಾರ್ವಜನಿಕ ಋಣ, ಸಾಲ ಮತ್ತು ಮುಂಗಡ, ಕಾಂಟಿಂಜೆನ್ಸಿ ನಿ, ಸಾರ್ವಜನಿಕ ಲೆಕ್ಕ, ಹಿಂದಿನ ವರ್ಷದ ಬಳಸದ ಶಿಲ್ಕು ಈ ಮೂಲಗಳಿಂದ ಹಣ ಪಡೆದು ಲಭ್ಯವಿದ್ದ ಒಟ್ಟು ಆದಾಯದ ಮೊತ್ತ 148831.38 ಕೋಟಿ ಹಣವನ್ನು 2011-12ರಲ್ಲಿ ರಾಜಸ್ವ ಹಾಗೂ ಬಂಡವಾಳ ಯೋಜನೆಗಳಿಗೆ ಬಟವಾಡೆ ಮಾಡಬೇಕಾಗುತ್ತದೆ.

ಲಭ್ಯವಿದ್ದ ಹಣದಲ್ಲಿ 7ಲಕ್ಷಕ್ಕಿಂತ ಹೆಚ್ಚಿರುವ ರಾಜ್ಯ ಸರಕಾರದ ಸಿಬ್ಬಂದಿ ಹಾಗೂ ಅಕಾರಿಗಳಿಗೆ ವೇತನ, ಭತ್ತೆ, ಇತರೆ ಭತ್ತೆ ಹಾಗೂ ಆಡಳಿತ ವೆಚ್ಚಕ್ಕೆ ಶೇಕಡಾ ನೂರಕ್ಕೆ ನೂರರಷ್ಟು ಹಣ ವೆಚ್ಚ ಮಾಡಬೇಕಾಗುತ್ತದೆ. ಮಾಡಲಿ ಇದು ಅನಿವಾರ್ಯ. ಆದರೆ ಜನಪರ ಅಭಿವೃದ್ಧಿ ಯೋಜನಾ ಕಾರ್ಯಕ್ರಮಗಳಿಗೆ ವೆಚ್ಚ ಮಾಡಲೇ ಬೇಕಾದ ಹಣವನ್ನು ಪ್ರತಿವರ್ಷ ವೆಚ್ಚ ಮಾಡದೆ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿರು ವುದು ನ್ಯಾಯ ಸಮ್ಮತವಲ್ಲ. ಪ್ರತಿವರ್ಷ ಸರಕಾರಿ ಸಾಲ ಹೆಚ್ಚಿಸಿಕೊಳ್ಳುತ್ತ ಹೇರಳವಾದ ಸಾಲದ ಬಡ್ಡಿಯನ್ನು ಕೊಡುತ್ತ ರಾಜ್ಯದ ಸಾಲಭಾರವನ್ನು ಪ್ರತಿವರ್ಷ ಹೆಚ್ಚಿಸುತ್ತ ಹೋಗುವುದು ಸರಿಯಲ್ಲ.
 
ರಾಜ್ಯದ ಅಕಾರಿಗಳು ವಿವಿಧ ಇಲಾಖೆಗಳಲ್ಲಿಯೇ ಇರಲಿ ಅಥವಾ ಮೂರು ಹಂತದ ಪಂಚಾಯತ್‌ಗಳಲ್ಲೇ ಇರಲಿ ಅವರು ರಾಜ್ಯ ಜನತೆಗೆ ಅವರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮಾಡುವ ರಾಜಸ್ವ ವೆಚ್ಚವೇ ಇರಲಿ ಬಂಡವಾಳ ವೆಚ್ಚವೇ ಇರಲಿ ಅದನ್ನು ಮಾಡುವಲ್ಲಿ ಹಾಗೂ ಸರ್ವಾಂಗೀಣ ಅಭಿವೃದ್ಧಿ ಆಡಳಿತ ಸಾಸುವಲ್ಲಿ ತಮ್ಮ ಕರ್ತವ್ಯ ಅಥವಾ ಕೆಲಸ ಕಾರ್ಯವನ್ನು ತಪ್ಪದೇ ಮಾಡಲೇಬೇಕು ಆದರೆ? ಅಕಾರ ಶಾಹಿಯಲ್ಲಿ ಶೇಕಡಾ 75ರಷ್ಟು ಶ್ರೇಷ್ಠರು, ಯೋಗ್ಯರಾಗಿದ್ದು ಅವರೆಲ್ಲ ‘ಸರಕಾರದ ಕೆಲಸ ದೇವರ ಕೆಲಸ’ವೆಂದು ತಿಳಿದು ರಾಜ್ಯದ ಸಾರ್ವಜನಿಕರ ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಸರ್ವೋತ್ತಮ ಆಡಳಿತಕ್ಕಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಕಾರ್ಯ ಪ್ರಶಂಸನೀಯ. ರಾಜ್ಯದ ಜನತೆ ಚಿರಋಣಿ.

ಆದರೆ ಇದಕ್ಕೆ ತದ್ವಿರುದ್ಧವಾಗಿ ಶೇಕಡಾ 25ರಷ್ಟು ಅಕಾರ ಶಾಹಿಯಲ್ಲಿ ಅನೇಕರು ಅನರ್ಹರು, ಕೆಟ್ಟವರು, ಅಯೋಗ್ಯರು, ಕನಿಷ್ಠರು, ಅಪ್ರಾಮಾಣಿಕರು, ಭ್ರಷ್ಟರು, ಜಾತಿವಾದಿಗಳು ಇದ್ದು ಸಾರ್ವ ಜನಿಕರಿಗೆ ಮಾರಕವಾಗಿ ಲಂಚ ನಿರೋಧ ಕಾಯ್ದೆ, ಇಂಡಿಯನ್ ಪಿನಲ್ ಕೋಡ್, ಲೋಕಾಯುಕ್ತ ಕಾಯ್ದೆ ಇತ್ಯಾದಿ ಕಾಯ್ದೆಗಳ ಅಡಿಯಲ್ಲಿ ತಪ್ಪಿಗಾಗಿ ಸಿಕ್ಕುಬೀಳುತ್ತಿದ್ದರೂ ಹೇಗಾದರೂ ಮಾಡಿ ಪಾರಾಗುತ್ತಿದ್ದಾರೆ ಹಾಗೂ ಅನೇಕರು ಸಿಕ್ಕು ಶಿಕ್ಷೆಗೆ ಒಳಗಾಗುತ್ತಿದ್ದಾರೆ. ಶೇಕಡಾ 75ಕ್ಕಿಂತ ಹೆಚ್ಚು ಉತ್ತಮರಿಗೆ ಹಾಗೂ ಸರಕಾರಕ್ಕೂ ಕಳಂಕ ತರುತ್ತಿದ್ದಾರೆ.ಸಾರ್ವಜನಿಕ ಅನೇಕ ಕಾಯ್ದೆಗಳು ಬೆದರುಗೊಂಬೆಗಳಾಗಿ ಹಲ್ಲಿಲ್ಲದ ಹುಲಿಯಂತಾಗಿದ್ದು, ಈ ಕಾಯ್ದೆಗಳನ್ನು ಸಬಲಗೊಳಿಸುವುದು ಸಾರ್ವಜನಿಕ ಉತ್ತಮ ಆಡಳಿತ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಅತ್ಯಾವಶ್ಯವೆಂಬುದನ್ನು ಸರಕಾರದಲ್ಲಿನ ಕಾನೂನು ಪಂಡಿತರು ಚಿಂತನೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುವುದು ಒಳ್ಳೆಯದು.

‘ದೇವರು ವರಕೊಟ್ಟರೂ ಪೂಜಾರಿ ಕೊಡಲಾರನೆಂಬ’ ಕವಿ ಸರ್ವಜ್ಞನ ನುಡಿಯಂತೆ ಸರಕಾರಿ ಯೋಜನೆಯ ಅನೇಕ ಅನುಷ್ಠಾನ ಅಕಾರಿಗಳಿಂದ ಸರಕಾರದ ಜನಪರ ಯೋಜನೆ ಸಕಾಲದಲ್ಲಿ ಜಾರಿಯಾಗುತ್ತಿಲ್ಲ. ಸರಕಾರ ಸಾಕಷ್ಟು ಹಣ ನಿಗದಿ ಮಾಡಿದರೂ,ನಿಗದಿತ ಹಣ ಬಿಡುಗಡೆಯಾದರೂ, ಈ ಹಣದ ಸದ್ಬಳಕೆಯಾಗದೆ ಇದೆ. ಅನೇಕ ಕಾರ್ಯಕ್ರಮಗಳು ಕಾರ್ಯಗತವಾಗದಿದ್ದರೂ ಆಗಿವೆ ಎಂದು ಖೊಟ್ಟಿ ಬಿಲ್ ತಯಾರಿಸಿ ಹಣ ಎತ್ತಿ ಹೊಡೆದ, ಕಳಪೆ ಕಾಮಗಾರಿ ಮಾಡಿದ, ಪೇಟೆ ದರಕ್ಕಿಂತ ಎಷ್ಟೋ ಪಟ್ಟು ಹೆಚ್ಚಿನ ಹಣ ನೀಡಿದ ಪ್ರಜೆಗಳಿಂದ, ಗುತ್ತಿಗೆದಾರರಿಂದ ಸಿಕ್ಕಾಪಟ್ಟೆ ಲಂಚ ಹೊಡೆದ, ಆದಾಯಕ್ಕಿಂತ ಹೆಚ್ಚು ಹಣ ಸಂಪಾದಿಸಿದ, ಕೆ.ಜಿ. ಗಟ್ಟಲೆ ಬಂಗಾರ, ಹೇರಳವಾದ ಹಣ, ಆಸ್ತಿ ಗಳಿಸಿದ, ಹೀಗೆ ಇನ್ನೂ ಅನೇಕ ಹಗರಣಗಳನ್ನು ಸ್ವಾತಂತ್ರ ಬಂದು ಪ್ರಜಾರಾಜ್ಯ ಅಸ್ತಿತ್ವದಲ್ಲಿ ಬಂದಾಗಿ ನಿಂದ ಇಂದಿನವರೆಗೂ ಸುದ್ದಿ ಮಾಧ್ಯಮಗಳ ಮುಖಾಂತರ ದಿನನಿತ್ಯ ಕಂಡು ಬರುತ್ತಿರು ವುದು ಪ್ರಜಾತಂತ್ರ ವ್ಯವಸ್ಥೆಯ ದುರಂತ ಹಾಗೂ ದುರ್ದೈವ.

ಅಧಿಕಾರಶಾಹಿ ಬಜೆಟ್ ಪ್ರಕಾರ ನಿಗದಿತ ತಮ್ಮ ಹಣವನ್ನು ನೂರಕ್ಕೆ ನೂರರಷ್ಟು ವೆಚ್ಚ ಮಾಡುತ್ತಿರುವಾಗ, ಪ್ರಜೆಗಳ ಅಭಿವೃದ್ಧಿಗಾಗಿ ನಿಗದಿತ ಹಣವನ್ನು ನೂರಕ್ಕೆ ನೂರರಷ್ಟು ವೆಚ್ಚ ಮಾಡದ ಪ್ರತಿವರ್ಷ ಸಹಸ್ರಾರು ಕೋಟಿ (2009-10ರಲ್ಲಿ 11878.14 ಕೋಟಿ) ಹಣವನ್ನು ಬಳಸದೆ ಉಳಿಸಿರುವುದು ಹಾಗೂ ಕೆಲವು ಯೋಜನೆಗಳಿಗೆ ಬಜೆಟ್ ಮೀರಿ ಹೆಚ್ಚು ಖರ್ಚು ಮಾಡಿ 31-03-2010ಕ್ಕೆ 10932 ಕೋಟಿ ಬಳಸದೆ ಶಿಲ್ಕು ಉಳಿಸಿರುವುದು ಸಂಬಂಸಿದ ಅಕಾರಿಗಳ ಅಕ್ಷಮ್ಯ ಅಪರಾಧ. ಹೀಗೆ ಶಿಲ್ಕು ಉಳಿಸುತ್ತಿರುವುದು ಬಹು ವರ್ಷಗಳಿಂದ ನಡೆದು ಬಂದಿದ್ದು, ಇದು ಹಾಗೆಯೇ ಮುಂದುವರಿಯುತ್ತಿದೆ. ಇದಕ್ಕೆ ಶಾಸಕರು, ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಗಮನಿಸಿ ಸೂಕ್ತ ಕ್ರಮ ತೆಗೆದು ಕೊಳ್ಳುವುದು ಒಳ್ಳೆಯದು.

ಬಹುತೇಕ ಇಲಾಖೆಗಳಲ್ಲಿ ಹಿರಿಯ ಐಎಎಸ್ ಅಧಿಕಾರಿಗಳು ಪ್ರಧಾನ ಕಾರ್ಯದರ್ಶಿಗಳು ಇದ್ದು ಹಣ ಬಳಸದೆ ಆರ್ಥಿಕ ಹಾಗೂ ಭೌತಿಕ ಅಭಿವೃದ್ಧಿ ಸಾಸದಿರಲು ಕಾರಣರಾದವರ ಮೇಲೆ ಸಹ ಈಗಿನ ಮುಖ್ಯಮಂತ್ರಿಗಳು ದಿಟ್ಟ ಕ್ರಮ ತೆಗೆದುಕೊಂಡರೆ ಶ್ಲಾಘನೀಯ. ಈ ದಿಶೆಯಲ್ಲಿ ಎಲ್ಲರ ಚಿಂತನ- ಮಂಥನ, ಸೂಚನೆ ಅತ್ಯಗತ್ಯ. ದೇಶದಲ್ಲಿ ಅಲ್ಲಲ್ಲಿ ಕೆಲವು ಶಾಸಕರು, ಸಂಸದರು, ರಾಜ್ಯ ಮಂತ್ರಿಗಳು, ಕೇಂದ್ರ ಮಂತ್ರಿಗಳು, ಉಚ್ಛ ಅಧಿಕಾರಿಗಳು ಅನೇಕ ಆರೋಪಗಳಿಗೆ ಬಲಿಯಾಗಿ ಜೈಲು ಸೇರುತ್ತಿದ್ದು, ಇದು ಪ್ರಜಾಸತ್ತೆಗೆ ಅಪಮಾನಕರ ಹಾಗೂ ಕಳಂಕವಾಗಿದ್ದು, ಹೀಗಾಗದಂತೆ ವಿವಿಧ ಸಾರ್ವಜನಿಕ ಜನಪ್ರತಿನಿಗಳು ಮುಂಜಾಗ್ರತೆ ವಹಿಸಿದರೆ ಅವರಿಗೆ ಸಮಾಜ ಚಿರಋಣಿ.




Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಕಗ್ಗತ್ತಲ ಕೋಣೆಯಲ್ಲಿ ನರಳುತ್ತಿರುವ ಶಿಕ್ಷಣ

ನಮ್ಮ ಶಿಕ್ಷಣ ವ್ಯವಸ್ಥೆಯ ರುದ್ರ ರೂಪವೊಂದು ಹರ್ಯಾಣದ ಅನ್ವಾಂಟ್ ಶಾಲೆಯೊಂದರಲ್ಲಿ ಪ್ರಕಟವಾಗಿದೆ.ಹೋಮ್ ವರ್ಕ್ ಮಾಡದ ಒಂದೇ ಒಂದು ಕಾರಣಕ್ಕಾಗಿ ಎಲ್‌ಕೆಜಿ ವಿದ್ಯ ...


ನಿಮ್ಮ ಅನಿಸಿಕೆ

postClick here to post your views
EPAPER
access

ಭಾರತ-ಅಮೆರಿಕ ದೇಶದ ನೂತನ ವಸಾಹತು

ಸಾಮ್ರಾಜ್ಯವಾದಿ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್... ದೇಶಗಳು ಇಂದು ತೀವ್ರ ಆರ್ಥಿಕ ...


- ಶ್ರೀ ರಾಮ್, ಬೆಂಗಳೂರು

ಬಿಜೆಪಿಯ ‘ಟೀಮ್ ಬಿ’

ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಆರೆಸ್ಸೆಸ್ ಬೆಂಬಲ ನೀಡಿತ್ತು ಎಂದು ಕಳ ...


ಜನ ಚಳವಳಿಗೆಲ್ಲ ಹೀಗೇಕಾಗಿವೆ?

ನವ ಉದಾರೀಕರಣದ ದುರಾಕ್ರಮಣದ ಈ ಕಾಲದಲ್ಲಿ ಕೋಮುವಾದ ನಾನಾ ವೇಷಧರಿಸಿ ವಕ್ಕರಿಸುತ್ತಿರುವ ಆತಂಕದ ...


- ಸನತ್‌ ಕುಮಾರ ಬೆಳಗಲಿ

ಮಾನ ಮರ್ಯಾದೆ ಇಲ್ಲದ ಜನರೆಲ್ಲ ಎಲ್ಲಿ ಹೋದರು?

ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಯಾದುದೇ ಬಿಜೆಪಿ, ಅರ್ಹ ಅಭ್ಯರ್ಥಿಯನ್ನು ಹ ...


ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?

‘ಸತ್ಯಂ ಶಿವಂ ಸುಂದರಂ...’ ಎಂಬ ಹಿಂದಿ ಸಿನಿಮಾದ ಈ ಶೀರ್ಷಿಕೆಯ ಹಾಡನ್ನು ಮತ್ತೆ ಮತ್ತೆ ಹಾಡಿಕ ...


- ಜ್ಯೋತಿ ಗುರುಪ್ರಸಾದ್

ಅಂಬೇಡ್ಕರರನ್ನು ಗೌರವಿಸುವಲ್ಲಿ ಹಿಂದೆ ಬಿದ್ದ ಭಾರತ

ಇತ್ತೀಚೆಗೆ ಎಲ್ಲೆಂದರಲ್ಲಿ ಒಂದು ಬೇಡಿಕೆ ಸಹಜ ವೆಂಬತೆ ಎದ್ದಿದೆ. ಅದು ಸಚಿನ್‌ತೆಂಡೂಲ್ಕರ್‌ಗೆ ಭಾರತ ರತ ...


- ರಘೋತ್ತಮ ಹೊ.ಬ.

ಪಠ್ಯಪುಸ್ತಕಗಳ ಕೇಸರೀಕರಣ ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್

ಪಠ್ಯಪುಸ್ತಕಗಳ ಕೇಸರೀಕರಣ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್