ಅಂಕಣ - ಫೋಕಸ್‌

mail-img print-img

ಹಳಸಿದ ಅನ್ನ ಮತ್ತು ಹಸಿದ ನಾಯಿಗಳ ವರ್ತಮಾನ

ಶುಕ್ರವಾರ - ಜನವರಿ -27-2012

ಕರ್ನಾಟಕದ ವರ್ತಮಾನ ಅಂಥಾ ಆಶಾದಾ ಯಕವಾಗಿಯೇನೂ ಇಲ್ಲ. ಇದು ಯಡಿಯೂ ರಪ್ಪನವರ ಆರ್ಭಟ, ಕಾಂಗ್ರೆಸ್‌ನ ಹೋರಾ ಟದ ಮುಂಚಿನ ಶರಣಾಗತಿ, ಜೆಡಿಎಸ್‌ನ ಮೇರೆ ಇಲ್ಲದ ಅವಕಾಶವಾದ, ಇತ್ಯಾದಿಗಳನ್ನು ನೋಡಿ ಅನ್ನಿಸುತ್ತಿರುವ ಮಾತಲ್ಲ. ಈ ಪಕ್ಷಗಳು ಇದಕ್ಕಿಂತ ಡೈನಾಮಿಕ್ ಆಗಿದ್ದಾಗಲೂ ಸಾಮಾನ್ಯ ಜನರಿಗೆ ದಕ್ಕಿದ್ದೇನೂ ಇಲ್ಲ. ವರ್ತಮಾನ ಕರ್ನಾಟಕದ್ದು ಮಾತ್ರವಲ್ಲ, ಇಡೀ ದೇಶದ್ದು ಕೂಡಾ ಅಂಥಾ ಆಶಾದಾಯಕವಾಗಿಲ್ಲ ಎನ್ನಿಸಲು ಪ್ರಧಾನ ಕಾರಣ ಪ್ರಗತಿಪರ ಕುಟುಂಬದ ಒಂದು ಧಾರೆಯ ವರ್ತಮಾನದ ನಡೆನುಡಿಗಳು.ಪ್ರಗತಿಪರ ಚಳವಳಿಗಳು ಉತ್ತುಂಗದಲ್ಲಿದ್ದ ಕಾಲದಲ್ಲಿ ಜನ ಅವರ ಹಿಂದೆ ಇದ್ದರು. ನಾಯಕರಿಗೆ ವಿಧಾನಸೌಧಕ್ಕಿಂತ ತಮ್ಮ ಹಳ್ಳಿಯ ಜನತೆಯ ಸಮಸ್ಯೆಗಳು ಪ್ರಧಾನವಾಗಿತ್ತು. ಹೀಗಾಗಿ ವಿಧಾನ ಸೌಧ ತಮ್ಮ ಹಳ್ಳಿಗೆ ಸ್ಪಂದಿಸು ವಂತೆ ಮಾಡುವ ಹೋರಾಟ ರಾಜಕಾರಣದಲ್ಲಿ ಅಂದಿನ ಎಲ್ಲ ಪ್ರಗತಿಪರ ಚಳವಳಿಗಳು ತೊಡಗಿಕೊಂಡಿದ್ದವು. ಆ ಹೋರಾಟದ ಪ್ರಕ್ರಿ ಯೆಯಲ್ಲಿ ಈ ವಿಧಾನ ಸೌಧ ಹೇಗೆ ಸಾರಾಂಶ ದಲ್ಲಿ ಜನರ ಪ್ರಾತಿನಿಕ ಸಂಸ್ಥೆಯಾಗುಳಿದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುತ್ತಿದ್ದವು.

ವಿಧಾನಸೌಧದೊಳಗೆ ಹೋಗುವುದಕ್ಕಿಂತ ವಿಧಾನಸೌಧವೇ ಹಳ್ಳಿಗೆ ಬರುವ ರಾಜಕಾರಣ ಅರ್ಥಾತ್ ಪ್ರಜೆಗಳೇ ಪ್ರಭುಗಳಾಗುವ ರಾಜ ಕಾರಣವನ್ನು, ಹೋರಾಟ ನಿರತ ಪ್ರಗತಿಪರ ಸಂಘಟನೆಗಳು ಮಾಡುತ್ತಿದ್ದವು. ಈ ಪ್ರಕ್ರಿಯೆಯಲ್ಲಿ ಹಲವು ಜನವಿರೋ ಕಾನೂನುಗಳು ತಡೆಗಟ್ಟಲ್ಪಟ್ಟವು. ಎಲ್ಲಕ್ಕಿಂತ ಹೆಚ್ಚಾಗಿ ಜನರಿಗೆ ಈ ನೆಲದ ಪ್ರಭುಗಳು ನಾವು, ಸರಕಾರ, ಶಾಸಕ ಮತ್ತು ಅಕಾರಿ ತಮ್ಮ ಸೇವಕ ಅನ್ನುವ ನಿಜವಾದ ಪ್ರಜಾ ತಾಂತ್ರಿಕ ಪ್ರಜ್ಞೆ ಮೂಡತೊಡಗಿತ್ತು. ಹೀಗೆ ಸ್ವತಂತ್ರ ಭಾರತದಲ್ಲಿ ತಡವಾಗಿಯಾದರೂ
 

ಕೆಳಗಿನಿಂದ ಪ್ರಜಾತಂತ್ರ ಕುಡಿಯೊಡೆಯ ತೊಡಗಿತ್ತು. ಆದರೆ 1985ರಲ್ಲಿ ರಾಮಕೃಷ್ಣ ಹೆಗಡೆ ಯವರು ಪ್ರಾರಂಭಿಸಿದ ಮೌಲ್ಯಾಧಾರಿತ ರಾಜಕಾರಣ ಸಂಸದೀಯ ರಾಜಕಾರಣದಲ್ಲಿ ಮೌಲ್ಯದ ಹುಸಿ ಭ್ರಾಂತಿಯನ್ನೂ ಹುಟ್ಟು ಹಾಕಿತು. ಅದಕ್ಕಿಂತಲೂ ಹೆಚ್ಚಾಗಿ ಕೆಳಗಿನಿಂದ ಕುಡಿಯೊಡೆಯುತ್ತಿದ್ದ ನಿಜವಾದ ಪ್ರಜ್ಞಾ ಶೀಲ ಪ್ರಜಾತಾಂತ್ರಿಕ ರಾಜಕಾರಣವನ್ನು ಅಪಮೌಲ್ಯಗೊಳಿಸಲು ಪ್ರಾರಂಭಿಸಿತು. ಗುಡಿಸಲುಗಳಿಂದ ಗುಡುಗುತ್ತಿದ್ದ ಹಲವು ನಾಯಕರು ಬಂಗಲೆಗಳನ್ನು ಕಂಡಿದ್ದು, ರೈಲ್ವೆ ಸ್ಟೇಷನ್ನು ಮತ್ತು ಪಾರ್ಕುಗಳು ಬೀದಿಗಳಲ್ಲಿ ಜೀವದುಸಿರು ಪಡೆಯುತ್ತಿದ್ದ ಹೋರಾಟ ಗಳಿಗೆ ವಿಧಾನಸೌಧದಲ್ಲಿ ಚಿನ್ನದ ನೇಣು ಬಿಗಿದದ್ದು ಇದೇ ಕಾಲಘಟ್ಟದಲ್ಲಿ.

ಕೆಲವು ಸಂಘಟನೆ ಮತ್ತು ಕೆಲವು ಹೋರಾ ಟಗಳನ್ನು ಬಿಟ್ಟರೆ ಅಂದಿನಿಂದ ಇಂದಿನವರೆಗೆ ವಿಧಾನಸೌಧದ ಧೃತರಾಷ್ಟ್ರ ಆಲಿಂಗನದಿಂದ ಕರ್ನಾಟಕದ ಪ್ರಗತಿಪರ ರಾಜಕಾರಣದ ಬಹುದೊಡ್ಡ ಧಾರೆ ಪಾರಾಗಿಲ್ಲ. ಎಡಪಂಥೀಯ ಸಂಘಟನೆಗಳ ಶರತ್ತುಬದ್ಧ ಸಂಸತ್ ಆಲಿಂಗನ ನಿಧಾನವಾಗಿ ಅವರ ರಾಜಕಾರಣದ ಕ್ರಾಂತಿ ಕಾರಿ ಸತ್ವವನ್ನೇ ನುಂಗಿಹಾಕಿದ್ದನ್ನು ನೋಡುತ್ತಿರು ವಂತೆ ಕರ್ನಾಟಕದ ರೈತಸಂಘ, ದಲಿತ ಸಂಘರ್ಷ ಸಮಿತಿಗಳು, ಹೊಸತಾಗಿ ಲಂಕೇಶ್ ಅವರು ಹುಟ್ಟುಹಾಕಿದ ಪ್ರಗತಿರಂಗ ಇತ್ಯಾದಿಗಳು ಸಹ ವಿಧಾನಸೌಧವನ್ನು ಒಳಗಿಂದ ಬದಲಾವಣೆ ಮಾಡುವ ರಾಜಕಾರಣ ಮಾಡುವ ಬೃಹತ್ ಪ್ರಯಾಸಕ್ಕೆ ಕಾಲಬಾಹಿರವಾಗಿ ಮತ್ತು ಜನರನ್ನು ಸಾಕಷ್ಟು ಸಜ್ಜುಗೊಳಿಸದೆ ಕೈಹಾಕಿ ವಿಲಗೊಂಡವು.

ಆ ಪ್ರಯತ್ನದಲ್ಲಿ ಕೆಲವು ಸಂಘಟನೆ ಮತ್ತು ನಾಯಕರಂತೂ ವಿಧಾನಸೌಧವನ್ನು ಬದಲಿಸದೆ ತಾವೇ ಬದಲಾಗಿ ವಿಧಾನಸೌಧದ ವಕ್ತಾರರಾಗಿಬಿಟ್ಟರು. ಅರ್ಥಾತ್ ಈ ನಾಡಿನ ಉಳ್ಳವರ, ಮತ್ತು ದಾಳಿ ಇಡುತ್ತಿರುವ ಜಾಗತಿಕ ಮಾರುಕಟ್ಟೆ ಶಕ್ತಿಗಳ ವಕ್ತಾರರಾಗಿಬಿಟ್ಟರು. ಹೀಗಾಗಿ ಹಲವು ಹೋರಾಟಗಳು ರಕ್ತಪಾತಕ್ಕೆ, ಇನ್ನುಳಿದವು ಗರ್ಭಪಾತಕ್ಕೆ, ಇನ್ನು ಕೆಲವು ಪ್ರಜ್ಞಾ ಪ್ರಪಾತಕ್ಕೆ ಉರುಳುತ್ತಿರುವ ಸನ್ನಿವೇಶದಲ್ಲಿ ಜಾಗತೀಕರಣದ ಶಕ್ತಿಗಳು ಪ್ರಭುತ್ವದ ಸ್ವರೂಪವನ್ನು, ಸಮಾಜದ ಶಕ್ತಿಗಳ ಸಮತೋಲನವನ್ನೂ, ಜನರ ಪ್ರಜ್ಞೆಯನ್ನು ತನ್ನ ಲಾಭಕ್ಕೆ ತಕ್ಕಂತೆ ಪುನರ್ ರೂಪಿಸುತ್ತಾ ದಮನಿತ ಜನಸಮುದಾಯದ ವರ್ತಮಾನ ಮತ್ತು ಭವಿಷ್ಯಕ್ಕೆ ದೊಡ್ಡ ಸವಾಲನ್ನು ಹಾಕುತ್ತಿವೆ.

ಈ ಸಂದರ್ಭ ಜನಪರ ಶಕ್ತಿಗಳಿಂದ ಬದಲಾಗು ತ್ತಿರುವ ವರ್ತಮಾನದ ಬಗ್ಗೆ, ಶಕ್ತಿಗಳ ಸಮೀಕರ ಣದ ಬಗ್ಗೆ ಆಳವಾದ ತಿಳವಳಿಕೆಯನ್ನು ಹಾಗೂ ಹಲವು ಆಮಿಷಗಳ ಬಿರುಗಾಳಿಯಲ್ಲಿ ತೇಲಿ ಹೋಗದೆ ದೃಢವಾಗಿ ನಿಲ್ಲಲು ಬೇಕಾದ ಗಟ್ಟಿಯಾದ ಸೈದ್ಧಾಂತಿಕ ಬೇರುಗಳನ್ನು ಮತ್ತು ಜನಪರ ಬದ್ಧತೆಯನ್ನು ಕೇಳುತ್ತಿದೆ. ಪ್ರತಿಗಾಮಿ ಗಳು ಅಜೆಂಡಾ ರೂಪಿಸುವ ಮತ್ತು ಅದಕ್ಕೆ ಪ್ರಗತಿಪರರು ಟೌನ್‌ಹಾಲ್ ಮೆಟ್ಟಿಲ ಮೇಲೆ ನಡೆಸುವ ಮೂರುಗಂಟೆಗಳ ಪ್ರತಿಭಟನೆಯೆ ನ್ನುವ ಅಲ್ಪತೃಪ್ತಿಯನ್ನು ಮೀರಿ ಜನಹೋರಾ ಟಗಳು ಮತ್ತೆ ಬೀದಿ ಸೇರಬೇಕಿದೆ. ವಿಧಾನ ಸೌಧದ ನೆರಳಿಂದ ಹೋರಾಟಗಳು, ಜಾಗತೀ ಕರಣದ ಲಾನುಭವಿಗಳ ಂಡಿನ ಹಂಗಿ ನಿಂದ ಸಂಘಟನೆಗಳು, ಕೆಲವೇ ವ್ಯಕ್ತಿಗಳ ಛಭಿಯಿಂದ ನಾಯಕತ್ವಗಳು ಹೊರಬಂದು ನಿಜಕ್ಕೂ ಜನರ ಆಕ್ರೋಶವನ್ನು ಕೂಡುಗಟ್ಟಿಸಿ ಪ್ರತಿಭಟನೆಯ ಘೋಷಣೆಗೆ ಪ್ರಾಮಾಣಿಕ ಧ್ವನಿ ಮತ್ತು ಕಸವು ತಂದುಕೊಡುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ.

ಆದರೆ ಕರ್ನಾಟಕದ ವರ್ತಮಾನದ ಪ್ರಗತಿಪರ ಹೋರಾಟಗಳ ಒಂದು ಪ್ರಧಾನ ಧಾರೆ ಮಾತ್ರ ಜನರಿಗಿಂತಲೂ ಹೆಚ್ಚಾಗಿ ಆಳುವ ಪಕ್ಷಗಳಲ್ಲಿ ಅಥವಾ ದಮನಿತ ಜಾತಿಯ ಹಿನ್ನೆಲೆಯೊಂದನ್ನು ಬಿಟ್ಟರೆ ಮಿಕ್ಕೆಲ್ಲಾ ರೀತಿಯಿಂದಲೂ ಜನಶೋಷಕರೇ ಆಗಿರುವ ವ್ಯಕ್ತಿಗಳ ಹಿಂದೆ ಗಿರಕಿ ಹೊಡೆಯುವ ಪ್ರವೃತ್ತಿ ಯನ್ನೇ ತೋರುತ್ತಿವೆ. ಇದು ಅತ್ಯಂತ ವಿಷಾದ ನೀಯ ಮತ್ತು ಅಪಾಯಕಾರಿ. ಅವರು ಮತ್ತೊಮ್ಮೆ ತಾವೂ ಮೋಸಗೋಗುವ ಮತ್ತು ಜನರನ್ನೂ ಮೋಸಹೋಗುವಂತೆ ಮಾಡುವ ಮತ್ತೊಂದು ಹೆಜ್ಜೆಯನ್ನು ಇಡುವಂತೆ ತೋರುತ್ತಿದೆ.

ಪ್ರಗತಿಪರರ ಒಂದು ಧಾರೆಯಲ್ಲಿ ಇದ್ದ ಈ ಬಗೆಯ ಆತ್ಮಘಾತುಕ ಅಪಾಯಕಾರಿ ಧಾರೆ ಶ್ರೀರಾಮುಲು ಬಿಜೆಪಿ ಬಿಟ್ಟು ಹೊರಬಂದ ಮೇಲೆ ಎಲ್ಲ ತರ್ಕವನ್ನು ಮೀರಿ ಅವಕಾಶ ವಾದಿ ರಾಜಕಾರಣದ ಕಡೆಗೆ ಧಾವಿಸು ತ್ತಿರುವಂತೆ ಕಂಡುಬರುತ್ತಿದೆ. ಶ್ರೀರಾಮುಲು ಬಳಿ ಜಾಗತೀಕರಣದ ಜನವಿರೋ ಆರ್ಥಿಕನೀತಿಗಳು ಸಕ್ರಮ ಮತ್ತು ಅಕ್ರಮ ಮಾರ್ಗಗಳ ದುರ್ಲಾಭ ಮಾಡಿಕೊಂಡು ಕೂಡಿಟ್ಟ ಸಾವಿರಾರು ಕೋಟಿ ಆಸ್ತಿ ಇದೆ. ಬದಲಾದ ರಾಜ ಕೀಯ ಸಮೀಕರಣದಲ್ಲಿ ಅದನ್ನು ಕಾಪಾ ಡಿಕೊಳ್ಳಲು ಹಲವು ನೂರು ಕೋಟಿ ಹೂಡಿ ರಾಜಕೀಯ ಅಕಾರ ಪಡೆದು ಕೊಳ್ಳಲು ಶ್ರೀರಾಮುಲು ಆ್ಯಂಡ್ ಕೋ...ಹಪಹಪಿಸುತ್ತಿದೆ.

ಗಣಿದಣಿಗಳು ಹೀಗೆ ತಮ್ಮ ಬಂಡ ವಾಳಶಾಹಿ ಹಿತಾಸಕ್ತಿಗಳನ್ನು ಕಾಪಾಡಿ ಕೊಳ್ಳಲು ಮಾಡಬೇಕೆಂದಿರುವ ರಾಜಕಾ ರಣಕ್ಕೆ ಅಹಿಂದ ರಾಜಕಾರಣದ ತಾತ್ವಿ ಕತೆಯ ಚೌಕಟ್ಟನ್ನು ಕೊಡಲು ಪ್ರಗತಿಪರರ ಒಂದು ಗುಂಪು ಮುಂದೆ ಹೋಗಿದೆ. ಅವರಲ್ಲಿ ಕೆಲವರಿಗಂತೂ ಶ್ರೀರಾಮುಲು ವಿನಲ್ಲಿ ದೇವರಾಜ್ ಅರಸಿನ ಶಿಷ್ಯ ಕಾಣುತ್ತಿದ್ದಾನೆ. ಹೀಗೆ ಅರ್ಧರಾತ್ರಿಯಲ್ಲಿ ಶ್ರೀರಾಮುಲುವಿಗೆ ಅರಸುವಿನ ಪೋಷಾಕು ತೊಡಿಸಿ ಪ್ರಗತಿಪರರ ಮುಂದೆ ಮೆರವಣಿಗೆ ನಡೆಸಲು ಹೈದರಾಬಾದಿನ ೈವ್ ಸ್ಟಾರ್ ಹೊಟೇಲಿನಲ್ಲಿ ಯೋಜನೆ ಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ತಾವು ಮುಠ್ಠಾಳ ರಲ್ಲವೆಂದು, ಶ್ರೀರಾಮುಲು ಇನ್ನೂ ರಾಜಕೀಯ ಎಳಸು ಆದ್ದರಿಂದ ಆತನನ್ನು ಅಹಿಂದ ರಾಜಕಾರಣಕ್ಕೆ ಒಪ್ಪಿಸಬಹುದೆಂದೂ, ಮತ್ತು ಬಲಾಢ್ಯರೇ ತುಂಬಿರುವ ಶಕ್ತಿ ರಾಜಕಾರಣದಲ್ಲಿ ಅಹಿಂದ ರಾಜಕಾರಣಕ್ಕೆ ಬೇಕಾದ ಇಡುಗಂಟನ್ನು ಶ್ರೀರಾಮುಲುರಿಂದ ಪಡೆದುಕೊಂಡರೆ ತಪ್ಪೇನೆಂದು ಮರು ತರ್ಕ ಹೂಡುತ್ತಾರೆ. ಹಿಂದುಳಿದ ದಮನಿತ ಸಮು ದಾಯ ಅಕಾರಕ್ಕೆ ಬರಬೇಕೆಂದರೆ ಇವೆಲ್ಲಾ ಮಾಡಬೇಕೆಂದು ಸಮರ್ಥಿಸಿಕೊಳ್ಳುತ್ತಾರೆ!!

ಶ್ರೀರಾಮುಲು ಮತ್ತು ಅವರ ರೆಡ್ಡಿ ಸಖರು ಬಳ್ಳಾರಿಯಲ್ಲಿ ತಮ್ಮ ಸಾಮ್ರಾಜ್ಯ ಕಟ್ಟಿದ್ದೇ ಅಲ್ಲಿನ ಜನರ ಮತ್ತು ದೇಶದ ಸಂಪತ್ತನ್ನು ಲೂಟಿ ಮಾಡಿಯಲ್ಲವೇ? ಅವರ ಆರ್ಥಿಕ ಸಂಪನ್ನತೆಯಲ್ಲಿ ಯಾವ ಪರ್ಯಾಯ ಅಥವಾ ಜನಪರ ರಾಜಕಾರಣವಿದೆ?,ಇದಕ್ಕಿಂತ ಆತ್ಮ ವಂಚನೆ ಮತ್ತೊಂದಿಲ್ಲ. ಕರ್ನಾಟಕದ ಮಟ್ಟಿಗೆ ಈ ತರ್ಕ ಹೊಸತೂ ಅಲ್ಲ ಮೊದಲನೆಯದೂ ಅಲ್ಲ. ಎಲ್ಲ ಪ್ರಗತಿಪರ ಪಕ್ಷಗಳು ಮತ್ತು ಸಂಘಟನೆಗಳು ಅಕಾರ ರಾಜಕಾರಣದ ಗಟಾರಕ್ಕೆ ಇಳಿಯುವ ಮುನ್ನ ಇದೇ ಬಟ್ಟೆಗಳನ್ನು ತೊಟ್ಟಿದ್ದರು. ಗಟಾರದಲ್ಲಿ ಇರದಿದ್ದ ರತ್ನವನ್ನು ಹೆಕ್ಕಿ ತರಲು ಹೋದವರು ಇನ್ನೂ ವಾಪಸ್ ಬಂದಿಲ್ಲ. ಜನ ಅವರ ಬರುವಿಕೆಗೇನೂ ಕಾಯುತ್ತಿಲ್ಲ ಎನ್ನುವುದು ಬೇರೆ ಮಾತು.

63 ವರ್ಷಗಳ ಸ್ವತಂತ್ರ ಭಾರತದ ರಾಜಕಾರಣ ಸಾಕಷ್ಟು ಪಾಠಗಳನ್ನು ಹೊಟ್ಟೆಯಲ್ಲಿಟ್ಟುಕೊಂಡಿದೆ.ಜನರ ಎಲ್ಲ ಸಮಸ್ಯೆಗಳ ನಿವಾರಣೆಯ ಕೀಲಿಕೈ ರಾಜಕೀಯ ಅಕಾರದಲ್ಲಿದೆ ಎಂಬ ಅಂಬೇಡ್ಕರ್ ಮಾತು ಅಕ್ಷರಶಃ ಸತ್ಯ. ಆದರೆ ಈ ಸಂಸತ್ತು ಮತ್ತು ವಿಧಾನ ಸೌಧದಲ್ಲಿ ದಮನಿತ ಸಮುದಾಯದ ಪರವಾಗಿ ಕೆಲವರು ಪ್ರತಿನಿಗಳಾಗುವುದು ಸಮುದಾಯಗಳಿಗೆ ಮತ್ತು ವ್ಯಕ್ತಿಗಳಿಗೆ ರಾಜಕೀಯ ಅಕಾರವನ್ನು ತಂದುಕೊಡುತ್ತದೆಯೇ ಎಂಬುದು ಮುಖ್ಯ ಪ್ರಶ್ನೆ. ಮಿಕ್ಕೆಲ್ಲಾ ವಿಷಯಗಳ ಬಗ್ಗೆ ಅಂಬೇಡ್ಕರ್ ಮಾತುಗಳನ್ನು ಗುರಾಣಿಯನ್ನಾಗಿ ಮಾಡಿಕೊಳ್ಳುವ ಈ ನಮ್ಮ ಪ್ರಗತಿಪರ ಸ್ನೇಹಿತರು ಆರ್ಥಿಕ ಸಮಾನತೆ ಮೂಲಭೂತ ಹಕ್ಕಾಗದ ಸಂಸದೀಯ ಪ್ರಜಾತಂತ್ರ ಮತ್ತವರ ಸಂಸ್ಥೆಗಳು ರಾಜಕೀಯ ಸಮಾನತೆಯನ್ನು ನೀಡಿದರೂ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಶಾಶ್ವತಗೊಳಿಸುತ್ತವೆ ಎಂದು ಹೇಳಿದ್ದನ್ನು ಏಕೆ ಮರೆಯುತ್ತಾರೆ?

ತಳ ಮಟ್ಟದಲ್ಲಿ ದಲಿತ-ಶೂದ್ರ ಭೂ ಹೀನ ರೈತನಿಗೆ ಜಮೀನು, ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸಮಾನ ಅವಕಾಶ ದಕ್ಕದೆ ಅಥವಾ ದೇಶದ ಸಂಪತ್ತಿನಲ್ಲಿ ಸರಿಪಾಲು ದಕ್ಕದೆ ದಮನಿತ ಸಮುದಾಯಗಳು ಮೇಲ್ಚನೆ ಪಡೆಯುವುದೇ ಇಲ್ಲ. ಸಬಲೀಕರಣವಾಗುವುದಿಲ್ಲ. ದಮನಿತ ಸಮುದಾಯದ ಯಾವುದೇ ಪಕ್ಷ ಅಥವಾ ವ್ಯಕ್ತಿ ಚುನಾವಣಾ ಪ್ರಜಾತಂತ್ರದಲ್ಲಿ ವಿಧಾನ ಸೌಧ ಪ್ರವೇಶ ಮಾಡಿದ ನಂತರ ಸಂಸತ್ತಿನ ಪ್ರಜಾತಂತ್ರೀಕರಣದ ನೀತಿಯನ್ನು ಜಾರಿಗೆ ತರಲಿರಲಿ ಪ್ರಸ್ತಾಪವನ್ನೂ ಮಾಡಲಾಗಿಲ್ಲ. ಏಕೆ?

ಇವರು ಅಕಾರಕ್ಕೆ ಬಂದ ನಂತರ ತಕ್ಷಣ ತಳಮಟ್ಟದ ಸಮುದಾಯದ ಮೇಲ್ವರ್ಗ ಮತ್ತು ಮೇಲ್ಜಾತಿ ಶೋಷಕರ ಮೇಲಿನ ಅವಲಂಬಿತ ಬದುಕು ಏಕೆ ಬದಲಾಗಲಿಲ್ಲ? ದೇಶದ ಸಂಪತ್ತು ದಮನಿತ ಜನರೆಲ್ಲರಿಗೆ ದಕ್ಕುವಂತೆ ಏಕೆ ಮಾಡಲಾಗಲಿಲ್ಲ? ಎಡಪಕ್ಷಗಳಾಗಲೀ, ಬಿಎಸ್‌ಪಿ, ಎಸ್‌ಪಿ ಯಾಗಲೀ, ಅಲ್ಲಲ್ಲಿ ಎಂಎಲ್‌ಎಗಳಾದ ದಲಿತ ರೈತ ಪ್ರತಿನಿಗಳಾಗಲಿ ಯಾರೂ ಆ ಅಜೆಂಡಾವನ್ನು ಸಂಸತ್ತು ಅಥವಾ ವಿಧಾನಸೌಧದ ಬಾಗಿಲ ಒಳಗೂ ತರಲಾಗಲಿಲ್ಲ. ಏಕೆ? ಎಡಪಕ್ಷಗಳು 1957ರಲ್ಲಿ ಕೇರಳದಲ್ಲಿ ಆ ಛಾಯೆಯುಳ್ಳ ಕಾನೂನೊಂದನ್ನು ಜಾರಿಗೆ ತರುವ ಪ್ರಯತ್ನ ಮಾಡಿ ಅಕಾರ ಕಳೆದುಕೊಂಡಿತ್ತು. ನಂತರ ಅವು ಪ್ರಜ್ಞಾಪೂರ್ವಕವಾಗಿ ಆ ಅಜೆಂಡಾವನ್ನು ಕೈಬಿಟ್ಟಿದ್ದರೆ ಬಿಎಸ್‌ಪಿಗೆ ಆ ಅಜೆಂಡಾವೇ ಇಲ್ಲ.

ತಳಸಮುದಾಯದ ದೃಷ್ಟಿಯಿಂದ ನೋಡಿದರೆ ಸಾಂಕೇತಿಕ ಅಕಾರ ಧನ್ಯತೆಯನ್ನು ಬಿಟ್ಟರೆ ಈ ಪಕ್ಷಗಳು ಅಕಾರಕ್ಕೆ ಬಂದದ್ದು ದಮನಿತ ಸಮುದಾಯಗಳ ಬದುಕಿನಲ್ಲಿ ಜಾಗತೀಕರಣದ ಕಾಲಘಟ್ಟದಲ್ಲಿ ಯಾವ ಮೂಲಭೂತ ಬದಲಾವಣೆಯನ್ನೂ ತಂದಿಲ್ಲ. ಎಡಪಕ್ಷಗಳು ಜನಪರ ನೀತಿಗಳನ್ನು ಜಾರಿಗೆ ತಂದದ್ದೆಲ್ಲಾ 1991ಕ್ಕೆ ಮುಂಚೆ..ಅದೂ ಹಲವಾರು ರಾಜಿಗಳಿಂದ ನಜ್ಜುಗುಜ್ಜಾದ ನೀತಿಗಳಾಗಿದ್ದವು. ಅದಕ್ಕೆ ಅವರು ಅಕಾರ ಸಿಕ್ಕ ಕ್ಷಣ ಬದಲಾದರು ಎಂಬ ಕಾರಣ ಮಾತ್ರವೇ ಸಮಾಧಾನಕರವಾದುದಲ್ಲ. ಬದಲಿಗೆ ಜಾಗತೀಕರಣದ ಕಾಲಘಟ್ಟದಲ್ಲಿ ಪ್ರಭುತ್ವ ಮತ್ತು ನಮ್ಮ ಆರ್ಥಿಕ ವ್ಯವಸ್ಥೆ ಕೇವಲ ಶಾಸನಾತ್ಮಕವಾಗಿಯೇ ಜನವಿರೋಯಾಗಿ ಬದಲಾಗಿದೆ.

ದೇಶದ ಸಂಪತ್ತಿನ ಮಾಲಕತ್ವವನ್ನು ಸಂವಿಧಾನದ ನಜರಿನಲ್ಲೇ ದೇಶದ ಮತ್ತು ಪರದೇಶದ ಬಂಡವಾಳಶಾಹೀ ಶಕ್ತಿಗಳಿಗೆ ಶಾಸನಬದ್ಧವಾಗಿ ಪರಭಾರೆ ಮಾಡಲಾಗಿದೆ. ಈ ಮಾರಾಟದಲ್ಲಿ ಸ್ಥಳೀಯರು ಲಾಭ ಪಡೆದುಕೊಂಡಿದ್ದಾರೆ. ಹೀಗೆ ಜನರಿಗೆ ಸೇರಬೇಕಾದ ಸಂಪತ್ತಿನಲ್ಲಿ ಆದ ವಂಚನೆಯ ಲಾನುಭವಿಗಳೇ ಅಹಿಂದ ಸಮುದಾಯದ ಶ್ರೀರಾಮುಲುಗಳು, ರೆಡ್ಡಿಗಳು, ಬ್ರಾಹ್ಮಣ ನಾರಾಯಣಮೂರ್ತಿಗಳು, ಮೇಲ್ಜಾತಿ ಅಂಬಾನಿಗಳು, ಮುಸ್ಲಿಮ್ ಪ್ರೇಂಜಿಗಳು. ಇವರೆಲ್ಲಾ ಜಾಗತೀಕರಣವೆಂಬ ಜನವಿರೋ ಆರ್ಥಿಕ ನೀತಿಗಳ ಜಾತ್ಯತೀತ ಶನಿಸಂತಾನಗಳು...ಅವುಗಳಿಂದ ಪೋಷಿತವಾದ ರಾಜಕೀಯ ಪಕ್ಷ ಮತ್ತು ಸಿದ್ಧಾಂತಗಳು ಅದರ ಶನಿಸಂತಾನಗಳಷ್ಟೆ ಆಗುತ್ತವೆ. ಅಲ್ಲವೇ? ಇದು ಬದಲಾಗಲು ಬೇಕಿರುವುದು ಈ ಶೋಷಕ ವ್ಯವಸ್ಥೆಯಲ್ಲಿ ಪಾಲಲ್ಲ. ಬದಲಿಗೆ ಅದನ್ನೂ ಜನಪರವಾಗಿ ಬದಲುಗೊಳಿಸುವ, ಪ್ರಜಾತಂತ್ರವನ್ನು ನಿಜಕ್ಕೂ ಜನತಂತ್ರವನ್ನಾಗಿಸುವ ರಾಜಿರಹಿತ ಹೋರಾಟ.
 
ರಾಜಕೀಯ ಅಕಾರ ಬೇಕೇ ಬೇಕು. ಆದರೆ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯಿಲ್ಲದ ದೇಶದಲ್ಲಿ ರಾಜಕೀಯ ಅಕಾರ ನಮ್ಮ ಲೂಟಿಗೆ ನಾವೇ ಕೊಡುವ ಪರವಾನಗಿ ಅಷ್ಟೆ. ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯನ್ನು ಕಡ್ಡಾಯ ಮಾಡದೆ ಕೇವಲ ಆಸ್ತಿ ಸ್ವಾತಂತ್ರ್ಯವನ್ನು ಮಾತ್ರ ಖಾತರಿಗೊಳಿಸುವ ಸಂಸದೀಯ ಪ್ರಜಾತಂತ್ರದಲ್ಲಿ, ಪ್ರಾತಿನಿಕ ಪ್ರಜಾತಂತ್ರ ದಮನಿತ ಸಮುದಾಯದ ಹೆಸರಲ್ಲಿ ಆ ಸಮುದಾಯದ ಒಂದು ವರ್ಗವನ್ನು ಮಾತ್ರ ಬೆಳೆಸುತ್ತಿರುತ್ತದೆ. ಆ ವರ್ಗ ಆ ಸಮುದಾಯದ ಮೇಲಿನ ಪ್ಯಾರಾಸೈಟಿನಂತೆ ಅದನ್ನೇ ತಿಂದು ಬೆಳೆಯುತ್ತಿರುತ್ತದೆ.

63 ವರ್ಷಗಳ ಅಕಾರ ರಾಜಕಾರಣ, ಕಳೆದ ಮೂರು ದಶಕಗಳ ಹೋರಾಟ ರಾಜಕಾರಣ ಅದನ್ನೇ ಹೇಳುತ್ತದೆ. ಈ ಸಂಸದೀಯ ಪ್ರಜಾತಂತ್ರ ದಮನಿತ ಸಮುದಾಯವನ್ನು ಸಬಲೀಕರಿಸಿ ನಿಜವಾದ ಪ್ರಭುವನ್ನಾಗಿಸಬೇಕೆಂದರೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಪೂರ್ವ ಶರತ್ತಾಗುತ್ತದೆ. ಅದು ಶಾಸನ ಸಭೆಯಲ್ಲಿ ನಡೆಯುವ ರಾಜಿಗಳಿಂದ ಮತ್ತು ಭಾಷಣಗಳಿಂದ ಸಾಧ್ಯವಾಗುವುದಿಲ್ಲ. ಬೀದಿಯಲ್ಲಿ, ಗಲ್ಲಿಯಲ್ಲಿ, ಹಳ್ಳಿಗಳಲ್ಲಿ ಈ ದೇಶದ ಮತ್ತು ಪ್ರದೇಶದ ಬಲಾಢ್ಯ ಆರ್ಥಿಕ ಮತ್ತು ಸಾಮಾಜಿಕ ಶಕ್ತಿಗಳೊಂದಿಗೆ ಜನಶಕ್ತಿ ನಡೆಸುವ ಸಂಘರ್ಷದ ಮೂಲಕ ಮಾತ್ರ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಅರಳುತ್ತದೆ. ಆ ಪ್ರಕ್ರಿಯೆಯಲ್ಲೇ ಯಾವ ಹೀರೋಗೂ ಕಾಯಬೇಕಿಲ್ಲದ ಸಮಾಜ, ಹೊಸ ಮೌಲ್ಯಗಳುಳ್ಳ ಮನುಷ್ಯನೂ ರೂಪುಗೊಳ್ಳುತ್ತಾನೆ. ಇದೇ ಕೆಳಗಿಂದ ರೂಪುಗೊಳ್ಳಬೇಕಾದ ಪ್ರಜಾತಂತ್ರ. ಅದಾಗಬೇಕೆಂದರೆ ಹೋರಾಟಗಳು ವಿಧಾನಸೌಧವೆಂಬ ಹಾವಿನ ಹೆಡೆಯಿಂದ ಹೊರಬರಬೇಕು.

ಶಾಸಕರ ಭವನದಿಂದ ಸೆಮಿನಾರ್ ಹಾಲ್‌ಗಳಿಂದ ಹೋರಾಟಗಳು ಬೀದಿಗೆ ಮರಳಬೇಕು. ಹಳ್ಳಿಯನ್ನು ತಲುಪಬೇಕು. ನಾಯಕರು ಕಾರುಗಳಿಂದ ಕಾಲ್ನಡಿಗೆಗಳಿಗೆ ಮರಳಬೇಕು. ಮಟನ್ ಬಿರಿಯಾನಿ, ಕೋಳಿಸಾರು ಸಿಗದಿದ್ದರೂ ಬೀದಿಬದಿಯ ಚಿತ್ರಾನ್ನ, ಬೈಟು ಟೀಯ ಬದುಕಿಗೆ ವಾಪಸಾಗಬೇಕು.ಬಿಸಿನೀರಿನ ಸ್ನಾನಕ್ಕಿಂತ ಧೂಳಿನ ಸ್ನಾನ ಸಾಮಾಜಿಕ ಕಾರ್ಯಕರ್ತನ ಅಂತಸ್ಸಾಕ್ಷಿಯನ್ನು ಶುಭ್ರಗೊಳಿಸುತ್ತದೆ.ಇದು ಪರೀಕ್ಷೆಗಳ ಕಾಲ. ಆಮಿಷಗಳು ನಾಯಕರನ್ನು ಹೋರಾಟಗಳನ್ನು ಕೊಳೆಸಲು ಕಾದುಕೂತಿರುವ ಸಂದರ್ಭ. ಕವಿ ೈಝ್ ಹೇಳುವಂತೆ ‘ಪ್ರತಿಮನದ ಪಡಸಾಲೆಯಲ್ಲಿ ಸತ್ತ ದೀಪಗಳ ಸಾಲುಗಟ್ಟಿರುವ’ ಸಂದರ್ಭ. ನಾಯಿಗಳು ಹಸಿದು ಕೂತಿರುವ ಸಂದರ್ಭದಲ್ಲಿ ನಮ್ಮ ತಟ್ಟೆಯ ಅನ್ನ ಹಳಸದಂತೆ ನೋಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಅಡಿಗರಂತಹ ಅಡಿಗರೂ ಹೇಳುವಂತೆ ಕೊಳೆಯಲು ಪ್ರಾರಂಭಿಸಿದರೆ ಒಳ್ಳೆಯದಾದರೂ ಕೆಟ್ಟದಾದರೂ ಎಲ್ಲವೂ ಒಂದೇ. ದುರ್ನಾತ. ಅಂತಸ್ಸಾಕ್ಷಿ ಕೊಳೆಯಬಾರದು. ಶತ್ರು ನಮ್ಮದೇ ವೇಷ ಹಾಕಿದ್ದರೂ ರಾಜಿಯಾಗಬಾರದು. ಮೋಸ ಹೋಗಬಾರದು. ಎಲ್ಲಕ್ಕಿಂತ ಹೆಚ್ಚಾಗಿ ಜನರಿಗೆ ಮೋಸ ಮಾಡಬಾರದು.


Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಕಗ್ಗತ್ತಲ ಕೋಣೆಯಲ್ಲಿ ನರಳುತ್ತಿರುವ ಶಿಕ್ಷಣ

ನಮ್ಮ ಶಿಕ್ಷಣ ವ್ಯವಸ್ಥೆಯ ರುದ್ರ ರೂಪವೊಂದು ಹರ್ಯಾಣದ ಅನ್ವಾಂಟ್ ಶಾಲೆಯೊಂದರಲ್ಲಿ ಪ್ರಕಟವಾಗಿದೆ.ಹೋಮ್ ವರ್ಕ್ ಮಾಡದ ಒಂದೇ ಒಂದು ಕಾರಣಕ್ಕಾಗಿ ಎಲ್‌ಕೆಜಿ ವಿದ್ಯ ...


ನಿಮ್ಮ ಅನಿಸಿಕೆ

postClick here to post your views
EPAPER
access

ಭಾರತ-ಅಮೆರಿಕ ದೇಶದ ನೂತನ ವಸಾಹತು

ಸಾಮ್ರಾಜ್ಯವಾದಿ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್... ದೇಶಗಳು ಇಂದು ತೀವ್ರ ಆರ್ಥಿಕ ...


- ಶ್ರೀ ರಾಮ್, ಬೆಂಗಳೂರು

ಬಿಜೆಪಿಯ ‘ಟೀಮ್ ಬಿ’

ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಆರೆಸ್ಸೆಸ್ ಬೆಂಬಲ ನೀಡಿತ್ತು ಎಂದು ಕಳ ...


ಜನ ಚಳವಳಿಗೆಲ್ಲ ಹೀಗೇಕಾಗಿವೆ?

ನವ ಉದಾರೀಕರಣದ ದುರಾಕ್ರಮಣದ ಈ ಕಾಲದಲ್ಲಿ ಕೋಮುವಾದ ನಾನಾ ವೇಷಧರಿಸಿ ವಕ್ಕರಿಸುತ್ತಿರುವ ಆತಂಕದ ...


- ಸನತ್‌ ಕುಮಾರ ಬೆಳಗಲಿ

ಮಾನ ಮರ್ಯಾದೆ ಇಲ್ಲದ ಜನರೆಲ್ಲ ಎಲ್ಲಿ ಹೋದರು?

ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಯಾದುದೇ ಬಿಜೆಪಿ, ಅರ್ಹ ಅಭ್ಯರ್ಥಿಯನ್ನು ಹ ...


ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?

‘ಸತ್ಯಂ ಶಿವಂ ಸುಂದರಂ...’ ಎಂಬ ಹಿಂದಿ ಸಿನಿಮಾದ ಈ ಶೀರ್ಷಿಕೆಯ ಹಾಡನ್ನು ಮತ್ತೆ ಮತ್ತೆ ಹಾಡಿಕ ...


- ಜ್ಯೋತಿ ಗುರುಪ್ರಸಾದ್

ಅಂಬೇಡ್ಕರರನ್ನು ಗೌರವಿಸುವಲ್ಲಿ ಹಿಂದೆ ಬಿದ್ದ ಭಾರತ

ಇತ್ತೀಚೆಗೆ ಎಲ್ಲೆಂದರಲ್ಲಿ ಒಂದು ಬೇಡಿಕೆ ಸಹಜ ವೆಂಬತೆ ಎದ್ದಿದೆ. ಅದು ಸಚಿನ್‌ತೆಂಡೂಲ್ಕರ್‌ಗೆ ಭಾರತ ರತ ...


- ರಘೋತ್ತಮ ಹೊ.ಬ.

ಪಠ್ಯಪುಸ್ತಕಗಳ ಕೇಸರೀಕರಣ ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್

ಪಠ್ಯಪುಸ್ತಕಗಳ ಕೇಸರೀಕರಣ; ಭಾಗ-2

ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...


- ಶಿವಸುಂದರ್