ಅಂಕಣ

mail-img print-img

ಭಾರತ-ಅಮೆರಿಕ ದೇಶದ ನೂತನ ವಸಾಹತು

ಗುರುವಾರ - ಫೆಬ್ರವರಿ -23-2012

ಸಾಮ್ರಾಜ್ಯವಾದಿ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್... ದೇಶಗಳು ಇಂದು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿವೆ. 1914ನೆ ಮೊದಲನೆ ಮಹಾಯುದ್ಧ ಮತ್ತು 1939-45ರ ಎರಡನೆ ಮಹಾಯುದ್ಧಕ್ಕೆ ಕಾರಣವಾದ ಆರ್ಥಿಕ ಕುಸಿತ ಈಗ ಈ ಲಾಭ ಬಡುಕರನ್ನು ಕಾಡತೊಡಗಿವೆ. ಈ ಬಿಕ್ಕಟ್ಟಿನಿಂದ ಪಾರಾಗಲು ಈ ಸಾಮ್ರಾಜ್ಯಶಾಹಿಗಳು ಬಡ ದೇಶಗಳಿಗೆ ಸಾಲ ನೀಡಿ ಅವರ ಆರ್ಥಿಕತೆ ಯಲ್ಲಿ ಅಸ್ಥಿರತೆ ಉಂಟು ಮಾಡಿ ನಾಶಪಡಿಸುತ್ತಿವೆ. ಈ ಕುತಂತ್ರದ ಭಾಗವಾಗಿ 1982-83 ರಲ್ಲಿ ಅಂತಾರಾಷ್ಟ್ರೀಯ ಮಾರವಾಡಿ ಸಂಸ್ಥೆ (imf) ಅಂದಿನ ಇಂದಿರಾ ನೇತೃತ್ವದ ಸರಕಾರಕ್ಕೆ 5,000 ಮಿಲಿಯನ್ ಡಾಲರ್ ಸಾಲ ನೀಡಿ ಅನೇಕ ಷರತ್ತುಗಳನ್ನು ವಿಧಿಸಿತು. ನಮ್ಮ ಆರ್ಥಿಕತೆಯನ್ನು ಮುಕ್ತವಾಗಿ ತೆರೆಯುವುದು, ಆಮದು ವಸ್ತುಗಳ ಮೇಲೆ ಸುಂಕ ಕಡಿಮೆ ಮಾಡುವುದು, ದೇಶೀಯ ಕೈಗಾರಿಕೆಗಳಿಗೆ ನೀಡಿರುವ ಸವಲತ್ತುಗಳನ್ನು ಸಂಪೂರ್ಣವಾಗಿ ರದ್ದು ಮಾಡುವುದು... ಈ ರೀತಿ ಹತ್ತು ಹಲವಾರು ಷರತ್ತುಗಳನ್ನು ಬಲವಂತವಾಗಿ ಹೇರಲಾಯಿತು. ಅಂದಿನಿಂದ ಉದಾರೀಕರಣ ಪ್ರಕ್ರಿಯೆ ಪ್ರಾರಂಭಗೊಂಡು ನಮ್ಮ ಕೈಗಾರಿಕೆ, ಕೃಷಿ, ವ್ಯಾಪಾರ ವಿನಾಶದ ಅಂಚಿನಲ್ಲಿದೆ.

ಮೊದಲ ಹಂತದಲ್ಲಿ ಲಾಭದಾಯಕದಲ್ಲಿದ್ದ 235 ಸಾರ್ವಜನಿಕ ಉದ್ದಿಮೆಗಳನ್ನು ಆಧುನೀಕರಿಸುವ ನೆಪದಲ್ಲಿ ಸಾಲ ನೀಡಿ, ಅವು ರೋಗಗ್ರಸ್ತವಾಗುವಂತೆ ಮಾಡಿ ನಂತರ ಆ ಉದ್ದಿಮೆಗಳನ್ನು ಖಾಸಗಿ ತಿಮಿಂಗಿಲಗಳಿಗೆ ಬಿಡಿಕಾಸಿಗೆ ಮಾರಾಟ ಮಾಡಲಾಯಿತು.1998ರಲ್ಲಿ ಈ ಉದ್ದಿಮೆಗಳ ಒಟ್ಟು ಮೌಲ್ಯ 1,48,000ಕೋಟಿ ರೂ.ಗಳಿಗೂ ಹೆಚ್ಚಿತ್ತು.ಉದಾ: ‘ಮಾರ್ಡನ್ ಫುಡ್’ ಕಾರ್ಖಾನೆಯನ್ನು ಜನವರಿ 31, 2000 ರಂದು ಬರೀ 105ಕೋಟಿ ರೂ.ಗೆ ಮಾರಲಾಯಿತು. ಹಿಂದಿನ ವರ್ಷ ಇದೇ ಕಾರ್ಖಾನೆ 180 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.

ದೆಹಲಿಯಲ್ಲಿ 116 ಕೋಟಿ ರೂ.ಬೆಲೆ ಬಾಳುವ 16 ಎಕರೆ ಜಮೀನು, ಮುಂಬೈನಲ್ಲಿ 18 ಎಕರೆ ಜಮೀನು, ಹಾಗೂ ಕಾನ್‌ಪುರ, ಚಂಡೀಘಡ ಮತ್ತು ಇನ್ನಿತರ ನಗರಗಳಲ್ಲಿ ಬೆಲೆ ಬಾಳುವ ಜಮೀನು ಹೊಂದಿತ್ತು. ಈ ಕಾರ್ಖಾನೆಯ ಒಟ್ಟು ಮೌಲ್ಯ 2,100 ಕೋಟಿಗೂ ಅಧಿಕ.ಸರಕಾರದ ಅಂಕಿ ಅಂಶ ಪ್ರಕಾರ ಈ ಕಾರ್ಖಾನೆಯ ಒಟ್ಟು ಮೌಲ್ಯ 1,100 ರೂ. ಕೋಟಿ. ಸಾವಿರಾರು ಕಾರ್ಮಿಕರು ಬೀದಿಪಾಲಾದರು.

ಮುಂಬೈನಲ್ಲಿ ಜವಳಿ ಕಾರ್ಖಾನೆಗಳು ಬೆಲೆ ಬಾಳುವ ಜಮೀನುಗಳನ್ನು ಹೊಂದಿದ್ದವು. ವಿದೇಶಿ ಬಂಡವಾದ ಒಳಹರಿಯುವಿಕೆಯಿಂದ ಭೂಮಿಗಳ ಬೆಲೆಗಳು ಗಗನಕ್ಕೆ ಮುಟ್ಟಿದವು.ಜವಳಿ ಕಾರ್ಖಾನೆ ಮಾಲಕರು ಬೇಕೆಂದೇ ಕಾರ್ಖಾನೆಗಳನ್ನು ನಷ್ಟದಲ್ಲಿ ಮುಳುಗಿಸಿ ಭೂಮಿಗಳನ್ನು ಸಾವಿರಾರು ಕೋಟಿ ರೂ.ಗಳಿಗೆ ಭೂ ಮಾಫಿಯಾಗಳಿಗೆ ಮಾರಾಟ ಮಾಡಿದರು.ದೇಶದ ಎಲ್ಲಾ ನಗರಗಳಲ್ಲೂ ಕಾರ್ಖಾನೆಗಳ ಭೂಮಿಗಳನ್ನು ಮಾರಲಾಯಿತು.5000ಕೋಟಿ. ರೂ. ಬೆಲೆ ಬಾಳುವ ಭಾರತ ಅಲ್ಯುಮಿನಿಯಂ ಕಂಪನಿ (balco)ನ್ನು ಕೇವಲ 551.5 ಕೋಟಿ ರೂ.ಗೆ. ಮಾರಾಟ ಮಾಡಲಾ ಯಿತು. ರಾಷ್ಟ್ರೀಯ ಜವಳಿ ನಿಗಮದ ಒಟ್ಟು 120 ಕಾರ್ಖಾನೆಗಳು ಕಾರ್ಖಾನೆಗಳ ಪೈಕಿ 78ನ್ನು ಮುಚ್ಚಲಾಗಿದೆ.

5 ಜವಳಿ ಕಾರ್ಖಾನೆಗಳನ್ನು ಅಲೋಕ್ ಇಂಡಸ್ಟ್ರೀಸ್, ಪೈಟಲೂನ್ ರೀಟೈಲ್ ಇಂಡಿಯಾ ಲಿ. ಞ/ ಭಾಸ್ಕರ್ ಇಂಡಸ್ಟ್ರೀಸ್ ಲಿ.ಗೆ. ಮಾರಲಾಗಿದೆ. 62,613 ಕಾರ್ಮಿಕರು ಬೀದಿ ಪಾಲಾದರು. ರಾಷ್ಟ್ರೀಯ ಜವಳಿ ನಿಗಮ  6480.71 ಕೋಟಿ ಬೆಲೆ ಬಾಳುವ ಕಂಪನಿಗಳ ಆಸ್ತಿಗಳನ್ನು ಮಾರಾಟ ಮಾಡಿತು.ಸಾಮ್ರಾಜ್ಯವಾದಿಗಳಿಗೆ ಅನುಕೂಲವಾಗುವ ನೀತಿಯನ್ನು ನಂತರದ ಕೇಂದ್ರ ಸರಕಾರಗಳು ರಾಜೀವ್‌ಗಾಂಧಿ, ನರಸಿಂಹರಾವ್, ವಾಜಪೇಯಿ, ದೇವೇಗೌಡ, ಮನಮೋಹನ್ ಸಿಂಗ್ ನಾಯಕತ್ವದಲ್ಲಿ ಮುಂದುವರಿದವು. ಸರಕಾರದ ನೀತಿಗಳಿಂದಾಗಿ ಸಣ್ಣ ಕೈಗಾರಿಕೆ ಅವನತಿಯ ಹಾದಿಯಲ್ಲಿ ಸಾಗಿದೆ ಮತ್ತು ಈಗ ಖಾಸಗಿ ಚಿಲ್ಲರೆ ವ್ಯಾಪಾರ ಅಪಾಯವನ್ನು ಎದುರಿಸುತ್ತಿದೆ.

1996-97ರಲ್ಲಿ ದೇಶದಲ್ಲಿ 27ಲಕ್ಷ ಸಣ್ಣ ಕೈಗಾರಿಕೆಗಳಿದ್ದು (ssi­)ಅವುಗಳಲ್ಲಿ 1ಕೋಟಿ ಅರವತ್ತು ಲಕ್ಷ ಉದ್ಯೋಗಿಗಳಿದ್ದಾರೆ. ಇವುಗಳ ವಾರ್ಷಿಕ ಉತ್ಪಾದನೆ 4,12,636 ಕೋಟಿ ರೂ.ಮೀರಿತ್ತು.ಇದೇ ರೀತಿ ಚಿಲ್ಲರೆ ವ್ಯಾಪಾರ ರಂಗವು ಅತಿ ಹೆಚ್ಚು ಉದ್ಯೋಗವನ್ನು ಸೃಷ್ಟಿಸಿದೆ.ದೇಶದಲ್ಲಿ ಒಟ್ಟು 13ದಶಲಕ್ಷ ಚಿಲ್ಲರೆ ಅಂಗಡಿಗಳಿದ್ದು ನಾಲ್ಕು ಕೋಟಿ ಜನ ಇದನ್ನು ಅವಲಂಬಿಸಿದ್ದಾರೆ.2011ರಲ್ಲಿ ಚಿಲ್ಲರೆ ವ್ಯಾಪಾರದ ಒಟ್ಟು ವಹಿವಾಟಿನ ಮೊತ್ತ 580 ಬಿಲಿಯನ್ ಡಾಲರ್ಗಳು.ಬಡವರಿಗೆ, ಮಧ್ಯಮ ವರ್ಗಕ್ಕೆ,ರೈತರಿಗೆ ಮತ್ತು ಹಳ್ಳಿಯ ಕುಶಲಕರ್ಮಿಗಳಿಗೆ ಅನುಕೂಲವಾಗಿದ್ದ ಸಂತೆ ಮತ್ತು ರಸ್ತೆಬದಿಯ ವ್ಯಾಪಾರಗಳು ಸಾಮಾಜ್ರಶಾಹಿಳಿಂದ ಅಪಾಯವನ್ನು ಎದುರಿಸುತ್ತಿವೆ.‘ಶೇ.85 ರೈತರು ಬೇಸಾಯವನ್ನು ಬಿಟ್ಟು ಕೈಗಾರಿಕೆ ಮತ್ತು ವ್ಯಾಪಾರದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಪ್ರಧಾನಿ ಮನಮೋಹನ್ ಸಿಂಗ್ ಇತ್ತೀಚೆಗೆ ರೈತರಿಗೆ ಕರೆ ನೀಡಿದ್ದರು. ಈ ಮಾತಿನ ರಹಸ್ಯವೇನು?

ಸಾಮ್ರಾಜ್ಯವಾದಿ ದೇಶಗಳು ಆರ್ಥಿಕ ಕುಸಿತದ ಬಿಕ್ಕಟ್ಟಿನಿಂದ ಪಾರಾಗಲು ನಮ್ಮ ದೇಶದ ಆರ್ಥಿಕ ವ್ಯವಸ್ಥೆಯನ್ನು ಪುನಾರಚಿಸಲಾಗುತ್ತಿದೆ.5ರಿಂದ 6 ಕೋಟಿ ಜನ ನೆಲೆಸಬಹುದಾದ ‘ಬೃಹತ್ ನಗರಗಳನ್ನು’ ನಿರ್ಮಿಸಲಾಗುತ್ತಿದೆ. ಬೆಂಗಳೂರು, ಚೆನ್ನೈ, ಕೋಲ್ಕತಾ, ದೆಹಲಿ, ಮುಂಬೈ, ಹೈದರಾ ಬಾದ್.. ಇನ್ನು ಹಲವಾರು ‘ಬೃಹತ್ ನಗರ’ಗಳನ್ನು ನಿರ್ಮಿಸಲಾಗುತ್ತಿದೆ. ಈ ನಗರಗಳಲ್ಲಿ ವರ್ತುಲ ರಸ್ತೆಗಳು, ಮೆಟ್ರೋ ರೈಲ್ವೆ, ಮೇಲು ಸೇತುವೆ, ಬೃಹತ್ ಮಾಲ್‌ಗಳನ್ನು ನಿರ್ಮಿಸಲಾಗುತ್ತಿದೆ.ಈ ಬೃಹತ್ ನಗರಗಳು ಸಾಮ್ರಾಜ್ಯವಾದಿ ದೇಶಗಳು ತಮ್ಮ ಸರಕುಗಳನ್ನು ಮಾರಾಟ ಮಾಡಲು ಬೃಹತ್ ಮಾರುಕಟ್ಟೆಯಾಗುತ್ತದೆ.

ಈ ನಗರಗಳಲ್ಲಿ ಪ್ರಧಾನಮಂತ್ರಿ ಕರೆಕೊಟ್ಟ ಶೇ.85% ರೈತರು ಹಳ್ಳಿಗಳನ್ನು ತೊರೆದು ಬಂದು ನೆಲೆಸುತ್ತಾರೆ.ರೈತರು ತೊರೆದ ಭೂಮಿಗಳು ಬಹುರಾಷ್ಟ್ರೀಯ ಕಂಪೆನಿಗಳ ವಶವಾಗುತ್ತವೆ. ಈ ಬೃಹತ್ ನಗರಗಳಲ್ಲಿ ಬೆಲೆಗಳು ಗಗನಕ್ಕೆ ಮುಟ್ಟುತ್ತವೆ.ಅಶಕ್ತರು ಕೊಳೆಗೇರಿಗಳಲ್ಲಿ ವಾಸಿಸುತ್ತಾರೆ. ಇಲ್ಲಿ ಮಾಫಿಯಾಗಳು ಹುಟ್ಟಿಕೊಳ್ಳುತ್ತವೆ. ಅಪರಾಧ ಕೃತ್ಯಗಳು ಹೆಚ್ಚುತ್ತವೆ.ದೆಹಲಿಯಿಂದ-ಮುಂಬೈಯವರೆಗೆ ‘ಬೃಹತ್ ಕೈಗಾರಿಕಾ ವಲಯ’ವನ್ನು ನಿರ್ಮಿಸ ಲಾಗುತ್ತಿದೆ. 1483ಕಿ.ಮೀ.ಉದ್ದದ 5000- 5500 ಚದರ ಕಿ.ಮೀ. ವಿಸ್ತೀರ್ಣದ ‘ಕೈಗಾರಿಕಾ ನಗರ’ಗಳನ್ನು ನಿರ್ಮಿಸಲಾಗುತ್ತಿದೆ. ಮೊದಲನೆ ಹಂತದಲ್ಲಿ 5,00,000 ಎಕರೆ ಭೂಮಿಯನ್ನು ರೈತರಿಂದ ವಶಪಡಿಸಿಕೊಳ್ಳಲಾಗುತ್ತದೆ. ಈ ಯೋಜನೆಗೆ ಕೇಂದ್ರ ಸರಕಾರವು 17,500 ಕೋಟಿ ರೂ.ನೀಡಿದೆ. ಈ ಯೋಜನೆಯ ಶೇ.80 ಹಣ ಜಪಾನ್ ಹಣ ಕಾಸು ಸಂಸ್ಥೆ ನೀಡುತ್ತದೆ. ಈ ‘ಬೃಹತ್ ಕೈಗಾರಿಕಾ ವಲಯ’ಗಳಲ್ಲಿ ವಿದೇಶಿ ಕಂಪನಿಗಳಿಗೆ ಭೂಮಿ, ನೀರು, ವಿದ್ಯುಚ್ಛಕ್ತಿ ಎಲ್ಲವೂ ಪುಕ್ಕಟೆಯಾಗಿ ದೊರೆಯುತ್ತದೆ. ಸರಕಾರಕ್ಕೆ ಯಾವುದೇ ತೆರಿಗೆ ಕಟ್ಟುವಂತಿಲ್ಲ. ದೇಶದ ಯಾವುದೇ ಕಾನೂನು ಈ ವಲಯಗಳಿಗೆ ಅನ್ವಯವಾಗುವುದಿಲ್ಲ. ಈ ಪ್ರದೇಶವು ನಮ್ಮ ದೇಶದ ಜನರಿಗೆ ನಿಷಿದ್ಧ ಪ್ರದೇಶವಾಗುತ್ತದೆ.

ಕೇಂದ್ರ ಸರಕಾರ ಈವರೆಗೆ 500ಕ್ಕೂ ಹೆಚ್ಚು ‘ವಿಶೇಷ ಆರ್ಥಿಕ ವಲಯ’ (se್ಢ)ಗಳ ಸ್ಥಾಪನೆಗೆ ಅನುಮತಿ ನೀಡಿದೆ. ಇನ್ನೂ 500ಕ್ಕೂ ಹೆಚ್ಚು ಛ್ಢಿಗಳಿಗೆ ಅನು ಮತಿ ನೀಡಲಿದೆ. ಇವು ರೈತರಿಂದ ಭೂವಿು ಲಪಟಾಯಿಸಲು ಇರುವ ಯೋಜನೆಗಳಾ  ಗಿವೆ. 1947ರಿಂದ 2004ರವರೆಗೆ 6ಕೋಟಿ ಜನರನ್ನು ಭೂಮಿಯಿಂದ ಬಲಾತ್ಕಾರವಾಗಿ ಹೊರಹಾಕಲಾಗಿದೆ. ಇವರಿಂದ ಸಮು ದಾಯ ಭೂಮಿ, ಅರಣ್ಯಭೂಮಿ ಒಳ ಗೊಂಡಂತೆ 2.5 ಮಿಲಿಯನ್ ಹೆಕ್ಟೇರ್ ಭೂಮಿಯನ್ನು ದೋಚಲಾಗಿದೆ. ಭೂಮಿ ಯನ್ನು ಕಳೆದುಕೊಂಡ ಎಷ್ಟು ಜನರಿಗೆ ಪುನರ್‌ವಸತಿ ಕಲ್ಪಿಸಲಾಗಿದೆ? ಮೂವರಲ್ಲಿ ಒಬ್ಬರಿಗೆ ಮಾತ್ರ ಪುನರ್ ವಸತಿ ಕಲ್ಪಿಸಲಾಗಿದೆ.

 ವಿದೇಶದಿಂದ ಹರಿದು ಬರುವ ಸಾಲದ ಹಣ ಎಲ್ಲಿಂದ ಬರುತ್ತದೆ? ಕಾರ್ಮಿಕರಿಗೆ ಕಡಿಮೆ ಸಂಬಳ ನೀಡಿ, ಜನರ ಮೇಲೆ ಅತಿ ದುಬಾರಿ ಕಂದಾಯಗಳನ್ನು ಹೇರಿ ರೈತರ ಬೆಲೆಗಳಿಗೆ ಕಡಿಮೆ ದರ ನೀಡಿ ಲೂಟಿ ಮಾಡಿ, ಉಳಿಸಿದ ಹಣವನ್ನು ಭಾರತ ಸರಕಾರ ಅಮೆರಿಕ ಸರಕಾರದ ಬಾಂಡುಗಳಲ್ಲಿ ಹೂಡುತ್ತವೆ. ಅರಬ್ ದೇಶಗಳು ತೈಲ ಮಾರಾಟದಿಂದ ಬಂದ ಹಣವನ್ನು ಅಮೆರಿಕ ಸರಕಾರದಲ್ಲಿ ಹೂಡುತ್ತವೆ. ಚೀನಾ ದೇಶ 1 ಟ್ರಿಲಿಯನ್‌ಗೂ ಹೆಚ್ಚು ಹಣ (1000ಬಿಲಿಯನ್ ಡಾಲರ್) ಹೂಡಿದೆ. ಈ ರೀತಿ ಹೂಡಲಾದ ಹಣವನ್ನು ಅಮೆರಿಕ ದೇಶವು ತನ್ನ ದೈತ್ಯ ಮಿಲಿಟರಿ ರಕ್ಷಣಾ ವೆಚ್ಚಕ್ಕೆ ಬಳಸುತ್ತದೆ. ಮತ್ತು ತನ್ನ ದೇಶದ ಬ್ಯಾಂಕುಗಳಿಗೆ ಸಾಲವಾಗಿ ಅಥವಾ ಸಹಾಯಧನವಾಗಿ ನೀಡುತ್ತದೆ.  ಈ ಬ್ಯಾಂಕುಗಳು ಭಾರತ ಮತ್ತು ಇನ್ನಿತರ ತೃತೀಯ ರಾಷ್ಟ್ರಗಳಿಗೆ ಸಾಲ ನೀಡಿ ಅವುಗಳ ಆರ್ಥಿಕತೆಯ ಮೇಲೆ ಕಪಿಮುಷ್ಟಿ ಸಾಧಿಸುತ್ತವೆ. ಈ ಹಣವೇ ಭಾರತದ ಬ್ಯಾಂಕುಗಳಿಗೆ ಸಾಲದ ರೂಪದಲ್ಲಿ ಹರಿದು ಬಂದು, ಈ ಬ್ಯಾಂಕುಗಳು ರೈತರಿಗೆ ಅತಿಯಾದ ಬಡ್ಡಿ ದರದಲ್ಲಿ ಸಾಲ ನೀಡಿ ಅವರನ್ನು ಆತ್ಮಹತ್ಯೆಯ ಮೃತ್ಯು ಕೂಪಕ್ಕೆ ತಳ್ಳುತ್ತಿವೆ.

ಒಂದು ಯುದ್ಧದಲ್ಲಿ ಸತ್ತ ಸೈನಿಕರಿಗಿಂತ ಹೆಚ್ಚು ಜನರು ಸರಕಾರಿ ಬ್ಯಾಂಕುಗಳ ಮತ್ತು ಬಡ್ಡಿ ವ್ಯಾಪಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ಅಂದಾಜಿನ ಪ್ರಕಾರ 1971ರ ಯುದ್ಧದಲ್ಲಿ 5000 ಸೈನಿಕರು ಸತ್ತರೆ, ಕಾರ್ಗಿಲ್ ಯುದ್ಧದಲ್ಲಿ 700 ಸೈನಿಕರು ಪ್ರಾಣ ಬಿಟ್ಟಿರುತ್ತಾರೆ. ಆದರೆ ಈ ಸರಕಾರಿ ಬ್ಯಾಂಕುಗಳ ಮತ್ತು ಬಡ್ಡಿ ವ್ಯಾಪಾರಿಗಳ ಕಿರುಕುಳ ತಡೆಯಲಾರದೆ ಕಳೆದ ಹತ್ತು ವರ್ಷದಲ್ಲಿ ವಿಷ ಕುಡಿದು ಅಥವಾ ನೇಣು ಹಾಕಿಕೊಂಡು 2,50,000ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕದೆ ಸರಕಾರ ದಮನಕಾರ್ಯ ಫ್ಯಾಸಿಸ್ಟ್ ನೀತಿಯನ್ನು ಅನುಸರಿಸುತ್ತಿದೆ. ಜನರನ್ನು ದಮನಿಸಲು ನಾಜಿ ಪ್ಯಾಸಿಸ್ಟ್ ಅರೆ ಸೇನಾಪಡೆಗಳಾದ ಸೆಲ್ವ ಜುಡಂ, ಆರೆಸ್ಸೆಸ್, ಬಜರಂಗದಳ, ಶ್ರೀರಾಮ ಸೇನೆಗಳನ್ನು ಸರಕಾರಗಳು ಹುಟ್ಟಿ ಹಾಕಿವೆ. ಜನರ ಮೇಲೆ ಯುದ್ಧವನ್ನು ಸಾರಿದೆ.

ಜನರಿಗೆ ಉದ್ಯೋಗ, ಆಹಾರ, ಬದುಕುವ ಹಕ್ಕನ್ನು ನೀಡುವುದರ ಬದಲು, ಪೊಲೀಸ್, ಜೈಲು, ನ್ಯಾಯಾಲಯ, ಆಡಳಿತ ಯಂತ್ರಾಂಗವನ್ನು ಬಲಪಡಿಸುತ್ತಿದೆ. ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳದೆ ಮಾರಕ ಅಸ್ತ್ರಗಳಿಗೆ ಸಾವಿರಾರು ಕೋಟಿ ರೂ. ಹಣ ವ್ಯಯ ಮಾಡುತ್ತಿದೆ. ಜನರ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ. ಭಾರತ ದೇಶ ದಕ್ಷಿಣ ಏಷಿಯಾದಲ್ಲಿ ಅಮೆರಿಕದ ‘ಬಾಳೆಹಣ್ಣು ಗಣರಾಜ್ಯ’ (banana republic)ವಾಗಿ ಮಾರ್ಪಟ್ಟಿದೆ. ಹಂತಕರ ತಂಡಗಳು (death squads) ಕೆಲಸ ಮಾಡುತ್ತಿವೆ. ಜನರು ಕಣ್ಮರೆಯಾಗುತ್ತಿದ್ದಾರೆ. ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಂದಿರು ರೋಧಿಸುತ್ತಿದ್ದಾರೆ.




Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಶಿಲಾಯುಗದ ಸಂಸ್ಕೃತಿ

ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...


ನಿಮ್ಮ ಅನಿಸಿಕೆ

postClick here to post your views
EPAPER
access

ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ

ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...


- ಸನತ್‌ಕುಮಾರ ಬೆಳಗಲಿ

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್