ದುಬೈ ಸರಕು ಸಾಗಣೆ ವಿಮಾನ ದುರಂತ: ಇಬ್ಬರು ಪೈಲೆಟ್‌ಗಳು ಸಾವು

ದುಬೈ, ಸೆ. 4: ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇಲೇರಿದ ಎರಡೇ ನಿಮಿಷದಲ್ಲಿ ಸಂಭವಿಸಿದ ಸರಕು ಸಾಗಣೆಯ 747 ಬೊಯಿಂಗ್ ವಿಮಾನ ಅಪಘಾತದಲ್ಲಿ ಇಬ್ಬರು ಪೈಲೆಟ್‌ಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜರ್ಮನಿಯ ಕೊಲೊಗ್ನೆಗೆ ಹೊರಟ ವಿಮಾನವು ನಿಲ್ದಾಣದಿಂದ 20 ಕಿ.ಮೀ. ದೂರದಲ್ಲಿರುವ ಗ್ಲೋಬಲ್ ವಿಲೇಜ್ ಸಮೀಪದ ನಾಡ್ ಅಲ್ ಸೇಬಾ ಮಿಲಿಟರಿ ಶಿಬಿರದ ಪಕ್ಕ ಸುಮಾರು ೮ ಘಂಟೆಗೆ ಸಮಾರಿಗೆ ಪತನವಾಗಿತ್ತು. ಇಬ್ಬರು ಪೈಲೆಟ್‌ಗಳು ಸಾವಿಗಿಡಾಗಿದ್ದು, ದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.