‘‘ ......ಅಲ್ಲಾಹನು ಮಾನವರ ಪಾಲಿಗೆ ತುಂಬಾ ಉದಾರನಾಗಿದ್ದಾನೆ. ಆದರೆ ಹೆಚ್ಚಿನ ಮಾನವರು ಕೃತಜ್ಞತೆ ಸಲ್ಲಿಸುವುದಿಲ್ಲ. ’’ (2: 243)
* * *
‘‘ ......ಅದೆಷ್ಟೋ ಸಲ ಒಂದು ಸಣ್ಣ ಗುಂಪು, ಅಲ್ಲಾಹನ ಅಪ್ಪಣೆಯಿಂದ, ದೊಡ್ಡ ಗುಂಪನ್ನು
![]() |
ಸೋಲಿಸಿದ್ದುಂಟು. ಮತ್ತು ಖಂಡಿತವಾಗಿಯೂ ಅಲ್ಲಾಹನು ಸಹನಶೀಲರ ಜೊತೆಗಿದ್ದಾನೆ. ’’ (2: 249)
* * *
‘‘ ಸೌಜನ್ಯದ ಒಂದು ಮಾತು ಮತ್ತು ಕ್ಷಮೆಯು, ದಾನ ಮಾಡಿ ಪೀಡಿಸುವುದಕ್ಕಿಂತ ಉತ್ತಮ...... ’’ (2: 263)
* * *
‘‘ ವಿಶ್ವಾಸಿಗಳೇ, ಅಲ್ಲಾಹನಲ್ಲಾಗಲಿ ಪರಲೋಕದಲ್ಲಾಗಲಿ ನಂಬಿಕೆ ಇಲ್ಲದೆ, ಕೇವಲ ಜನರಿಗೆ ತೋರಿಸುವುದಕ್ಕಾಗಿ ತನ್ನ ಸಂಪತ್ತನ್ನು ಖರ್ಚು ಮಾಡುವವನಂತೆ, ನೀವು ಋಣಭಾರ ಹೊರಿಸಿ ಮತ್ತು ಪೀಡಿಸಿ, ನಿಮ್ಮ ದಾನಗಳನ್ನು ವ್ಯರ್ಥಗೊಳಿಸಬೇಡಿ...... ’’ (2: 264)
* * *
‘‘ ಅವನು (ಅಲ್ಲಾಹನು) ತಾನಿಚ್ಛಿಸಿದವರಿಗೆ ಯುಕ್ತಿ (ಜಾಣ್ಮೆ)ಯನ್ನು ನೀಡುತ್ತಾನೆ. ಇನ್ನು, ಯಾರಿಗೆ ಯುಕ್ತಿಯನ್ನು ನೀಡಲಾಯಿತೋ ಅವನಿಗೆ ಧಾರಾಳ ಒಳಿತನ್ನು ನೀಡಲಾಯಿತು. ಬುದ್ಧಿಯುಳ್ಳವರ ಹೊರತು ಇತರರು ಪಾಠ ಕಲಿಯುವುದಿಲ್ಲ. ’’ (2: 269)
* * *
‘‘ ......ನೀವು ನಿಮ್ಮ ಮನದೊಳಗಿನ ವಿಚಾರಗಳನ್ನು ಬಹಿರಂಗಗೊಳಿಸಿದರೂ, ಗುಪ್ತವಾಗಿಟ್ಟರೂ ಅಲ್ಲಾಹನಂತು ಆ ಕುರಿತು ನಿಮ್ಮನ್ನು ವಿಚಾರಿಸುವನು...... ’’ (2: 284)
* * *
‘‘ ಅಲ್ಲಾಹನು ಯಾವ ಜೀವದ ಮೇಲೂ ಅದರ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊರೆ ಹೊರಿಸುವುದಿಲ್ಲ...... ’’ (2: 286) * * *
‘‘ ಖಂಡಿತವಾಗಿಯೂ ಭೂಮಿಯಲ್ಲಿ ಮತ್ತು ಆಕಾಶದಲ್ಲಿ ಇರುವ ಯಾವ ವಸ್ತುವೂ ಅಲ್ಲಾಹನಿಂದ ಮರೆಯಾಗಿಲ್ಲ. ’’ (3: 5)
* * *
‘‘ ಅವನೇ ಗರ್ಭದಲ್ಲೇ ನಿಮ್ಮನ್ನು ತಾನಿಚ್ಛಿಸುವಂತೆ ಚಿತ್ರಿಸುವವನು ..... ’’ (3: 6)
* * *
‘‘ ಹೇಳಿರಿ! ವಿಶ್ವ ಸಾಮ್ರಾಜ್ಯದ ಒಡೆಯನಾದ ಅಲ್ಲಾಹನೇ, ನೀನು ನೀನಿಚ್ಛಿಸಿದವರಿಗೆ ಸಾಮ್ರಾಜ್ಯವನ್ನು ನೀಡುವೆ ಮತ್ತು ನೀನಿಚ್ಛಿಸಿದವರಿಂದ ಸಾಮ್ರಾಜ್ಯವನ್ನು ಕಿತ್ತುಕೊಳ್ಳುವೆ. ಹಾಗೆಯೇ ನೀನು, ನೀನಿಚ್ಛಿಸಿದವರಿಗೆ ಗೌರವ ನೀಡುವೆ ಮತ್ತು ನೀನಿಚ್ಛಿಸಿದವರನ್ನು ಅಪಮಾನಿತರಾಗಿಸುವೆ. ಒಳಿತೆಲ್ಲವೂನಿನ್ನ ಕೈಯಲ್ಲಿದೆ. ಖಂಡಿತವಾಗಿಯೂ ನೀನು ಎಲ್ಲವನ್ನೂ ಮಾಡಬಲ್ಲವನು. ’’ (3: 26)
* * *
‘‘ ........ಅಲ್ಲಾಹನು, ದಾಸರ ಪಾಲಿಗೆ ತುಂಬಾ ವಾತ್ಸಲ್ಯಮಯಿಯಾಗಿದ್ದಾನೆ. ’’ (3: 30) ‘‘ (ದೂತರೇ) ಹೇಳಿರಿ; (ಜನರೇ ), ನೀವು ಅಲ್ಲಾಹನನ್ನು ಪ್ರೀತಿಸುವಿರಾದರೆ, ನನ್ನನ್ನು ಅನುಸರಿಸಿರಿ. ಆಗ ಅಲ್ಲಾಹನು ನಿಮ್ಮನ್ನು ಪ್ರೀತಿಸುವನು ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುವನು..... ’’ (3: 31)
* * *
‘‘ ಅವರೇನು, ಅಲ್ಲಾಹನ ಧರ್ಮದ ಬದಲು ಬೇರೇನನ್ನಾದರೂ ಹುಡುಕುತ್ತಿದ್ದಾರೆಯೇ? ನಿಜವಾಗಿ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲವೂ ತಮ್ಮಿಚ್ಛೆಯಿಂದಲೂ ಅನಿವಾರ್ಯವಾಗಿಯೂ ಅವನಿಗೆ ಶರಣಾಗಿ ಬಿಟ್ಟಿವೆ ಮತ್ತು ಎಲ್ಲರೂ ಅವನ ಕಡೆಗೇ ಮರಳಿಸಲ್ಪಡುವರು. ’’ (3: 83)
* * *
‘‘ ನಿಮಗೆ ಪ್ರಿಯವಾದುದನ್ನು ನೀವು (ಅಲ್ಲಾಹನ ಮಾರ್ಗದಲ್ಲಿ) ಖರ್ಚು ಮಾಡಿಬಿಡುವ ತನಕ, ನೀವು ಒಳಿತಿನ ಸ್ಥಾನವನ್ನು ತಲುಪಲಾರಿರಿ. ಇನ್ನು ನೀವು ಮಾಡುವ ಪ್ರತಿಯೊಂದು ಖರ್ಚಿನ ಬಗ್ಗೆಯೂ ಅಲ್ಲಾಹನು ಬಲ್ಲವನಾಗಿದ್ದಾನೆ. ’’ (3: 92)
* * *
‘‘ ಇನ್ನು ನೀವೆಲ್ಲ ಜೊತೆಯಾಗಿ ಅಲ್ಲಾಹನ ಪಾಶವನ್ನು ಭದ್ರವಾಗಿ ಹಿಡಿಯಿರಿ ಮತ್ತು ವಿಚ್ಛಿದ್ರರಾಗಬೇಡಿರಿ...... ’’ (3: 103)
* * *
‘‘ (ಜನರನ್ನು) ಒಳಿತಿನೆಡೆಗೆ ಆಮಂತ್ರಿಸುವ ಹಾಗೂ ಸತ್ಕಾರ್ಯವನ್ನು ಆದೇಶಿಸುವ ಮತ್ತು ಕೆಡುಕಿನಿಂದ ತಡೆಯುವ ಗುಂಪೊಂದು ನಿಮ್ಮಲ್ಲಿರಬೇಕು. ಅವರೇ ವಿಜಯಿಗಳಾಗುವವರು. ’’ (3: 104)
ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...
Click here to post your views ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...
ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...
ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...
ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...
‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...
ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...
ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...
ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...