ಹೊಸದಿಲ್ಲಿ, ಜ. 27: ಕೇರಳ ರಾಜ್ಯಪಾಲ ಎಂ.ಒ.ಎಚ್. ಫರೂಕ್ ಗುರುವಾರ ರಾತ್ರಿ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದು, ಅವರ ನಿಧನಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಸಹಿತ ಹಲವು ಗಣ್ಯರು ಇಂದು ಸಂತಾಪ ಸೂಚಿಸಿದ್ದಾರೆ. ಫರೂಕ್‌ರ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ಮನಮೋಹನ್ ಸಿಂಗ್, ತನ್ನ ಆಡಳಿತ ಸಾಮರ್ಥ್ಯಕ್ಕಾಗಿ ಮತ್ತು ಅವರು ಪ್ರತಿನಿಧಿಸುತ್ತಿದ್ದ ಜನರೊಂದಿಗೆ ಪ್ರಬಲ ಬಾಂಧ್ಯವ್ಯ ಹೊಂದಿದುಕ್ಕಾಗಿ ಅವರನ್ನು ಸ್ಮರಿಸಬೇಕಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಫರೂಕ್‌ರ ಮಗ ಫರೂಕ್ ಶಾಜಹಾನ್‌ಗೆ ಸಂತಾಪ ಸಂದೇಶ ರವಾನಿಸಿರುವ ಮನಮೋಹನ್ ಸಿಂಗ್, ‘‘ಕೇರಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಎಂ.ಒ.ಎಚ್. ಫರೂಕ್‌ರ ನಿಧನದ ಸುದ್ದಿ ತಿಳಿದು ನನಗೆ ತುಂಬಾ ಬೇಸರವಾಯಿತು’’ ಎಂದು ತಿಳಿಸಿದ್ದಾರೆ. ‘‘ಎಂ.ಒ.ಎಚ್. ಫರೂಕ್‌ರ ನಿಧನದಿಂದ ದೇಶವು ಓರ್ವ ಹಿರಿಯ ರಾಜಕಾರಣಿ ಹಾಗೂ ಜನರ ನಾಯಕನನ್ನು ಕಳೆದುಕೊಂಡಂತಾಗಿದೆ. ಅವರು ವಿಭಿನ್ನ ಸಾಮರ್ಥ್ಯದಲ್ಲಿ ಐದು ದಶಕಗಳ ಕಾಲ ಸಾರ್ವಜನಿಕ ಜೀವನ ನಡೆಸಿದ ದೇಶದ ಹಿರಿಯ ರಾಜಕಾರಣಿಗಳಲ್ಲಿ ಓರ್ವರಾಗಿದ್ದರು’’ ಎಂದು ಮನಮೋಹನ್ ಸಿಂಗ್ ತಿಳಿಸಿದ್ದಾರೆ.
‘‘ಅವರು ಮೂರು ಬಾರಿ ಪಾಂಡಿಚೇರಿಯ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು ಮತ್ತು 90ರ ದಶಕದ ಆರಂಭದಲ್ಲಿ ಕೇಂದ್ರ ಸಚಿವ ಮಂಡಳಿಯಲ್ಲೂ ಸೇವೆ ಸಲ್ಲಿಸಿದ್ದರು. ತನ್ನ ದೀರ್ಘಾವಧಿ ಸಾರ್ವಜನಿಕ ಜೀವನದಲ್ಲಿ ಎಂ.ಒ.ಎಚ್. ಫರೂಕ್ ಅತ್ಯುನ್ನತ ಸಂಪ್ರದಾಯವನ್ನು ಹೊಂದಿದ್ದರು’’ ಎಂದು ಪ್ರಧಾನಿ ತಿಳಿಸಿದ್ದರು.
75ರ ಹರೆಯದ ಎಂ.ಒ.ಎಚ್. ಫರೂಕ್ ಗುರುವಾರ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಕೇರಳದಲ್ಲಿ ಅವರ ನಿಧನದ ಪ್ರಯುಕ್ತ ಏಳು ದಿನಗಳ ಶೋಕಾಚರಣೆ ಘೋಷಿಸಲಾಗಿದೆ.
ನಮ್ಮ ಶಿಕ್ಷಣ ವ್ಯವಸ್ಥೆಯ ರುದ್ರ ರೂಪವೊಂದು ಹರ್ಯಾಣದ ಅನ್ವಾಂಟ್ ಶಾಲೆಯೊಂದರಲ್ಲಿ ಪ್ರಕಟವಾಗಿದೆ.ಹೋಮ್ ವರ್ಕ್ ಮಾಡದ ಒಂದೇ ಒಂದು ಕಾರಣಕ್ಕಾಗಿ ಎಲ್‌ಕೆಜಿ ವಿದ್ಯ ...
Click here to post your views ಸಾಮ್ರಾಜ್ಯವಾದಿ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್... ದೇಶಗಳು ಇಂದು ತೀವ್ರ ಆರ್ಥಿಕ ...
ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಆರೆಸ್ಸೆಸ್ ಬೆಂಬಲ ನೀಡಿತ್ತು ಎಂದು ಕಳ ...
ನವ ಉದಾರೀಕರಣದ ದುರಾಕ್ರಮಣದ ಈ ಕಾಲದಲ್ಲಿ ಕೋಮುವಾದ ನಾನಾ ವೇಷಧರಿಸಿ ವಕ್ಕರಿಸುತ್ತಿರುವ ಆತಂಕದ ...
ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಯಾದುದೇ ಬಿಜೆಪಿ, ಅರ್ಹ ಅಭ್ಯರ್ಥಿಯನ್ನು ಹ ...
‘ಸತ್ಯಂ ಶಿವಂ ಸುಂದರಂ...’ ಎಂಬ ಹಿಂದಿ ಸಿನಿಮಾದ ಈ ಶೀರ್ಷಿಕೆಯ ಹಾಡನ್ನು ಮತ್ತೆ ಮತ್ತೆ ಹಾಡಿಕ ...
ಇತ್ತೀಚೆಗೆ ಎಲ್ಲೆಂದರಲ್ಲಿ ಒಂದು ಬೇಡಿಕೆ ಸಹಜ ವೆಂಬತೆ ಎದ್ದಿದೆ. ಅದು ಸಚಿನ್‌ತೆಂಡೂಲ್ಕರ್‌ಗೆ ಭಾರತ ರತ ...
ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...
ಕಳೆದ ಸಂಚಿಕೆಯಲ್ಲಿ ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಸೌಹಾರ್ದ ಬದುಕು ಮತ್ತು ವೈಜ್ಞ ...